ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಾಹಿತ್ಯಪ್ರಿಯರ ಅನಿವಾರ್ಯ ಸಂಗಾತಿ

ಲಂಕೇಶ್ ವಾರವಾರವೂ ಬರೆಯುತ್ತಿದ್ದ ಟೀಕೆ-ಟಿಪ್ಪಣಿ ಮತ್ತು ಮರೆಯುವ ಮುನ್ನ ಕಲಂನ ಲೇಖನಗಳದೇ ಒಂದು ವೈಶಿಷ್ಟ್ಯವಿದೆ.

ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

ನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ.

ಏಕೆಂದರೆ, ಮಾಧ್ಯಮಗಳು ಇಬ್ಬದಿ ನೀತಿ ಪ್ರದರ್ಶಿಸುತ್ತಿವೆ. ಖಾಸಗಿ ಬದುಕನ್ನು ರಸವತ್ತಾಗಿ ಬಣ್ಣಿಸುವ ಹಿಂದೆ ವಿಕೃತ ಮನಸ್ಸು ಮಾತ್ರ ಇರಲು ಸಾಧ್ಯ. ಏರಿದವನು ಕೆಳಗೆ ಬಿದ್ದರೆ ಮಾಧ್ಯಮಕ್ಕೆ ಎಂಥದೋ ವಿಕೃತ ಆನಂದ. ತಕ್ಕ ಶಾಸ್ತಿಯಾಯಿತು ಎಂಬ ಭಾವನೆ. ಸಲ್ಮಾನ್‌ಖಾನ್‌ ಹಾಗೈ ವಿವೇಕ್‌ ಒಬೆರಾಯ್‌ ಜೊತೆ ಐಶ್ವರ್ಯಾ ರೈ ಸಂಬಂಧ ಮುರಿದಾಗ ಮಾಧ್ಯಮ ಆನಂದಪಟ್ಟಂತೆ ವರ್ತಿಸಿತು. ಮಾನ್ಯತಾ-ಸಂಜಯ್‌ ದತ್ತ ವಿವಾಹ ವಿವಾದ ಹುಟ್ಟಿದ್ದೂ ಇಂಥದೇ ಮನಃಸ್ಥಿತಿಯಿಂದ.

ನನಗೆ ಗೊತ್ತಿರುವಂತೆ, ಮಾಧ್ಯಮದಲ್ಲಿ ಕೆಲಸ ಮಾಡುವ ಬಹುತೇಕ ಜನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು. ಆದರೆ, ಅವರ ಒಡನಾಟ ಮೇಲ್ವರ್ಗದ (ಆರ್ಥಿಕವಾಗಿ) ಜನರ ಜೊತೆ. ನಿತ್ಯ ಅವರ ಜೀವನಶೈಲಿ, ಖ್ಯಾತಿ, ರೂಪ, ಅವಕಾಶ ಕಂಡು ಮಾಧ್ಯಮದವರಲ್ಲಿ ಮತ್ಸರ ಉಂಟಾಗುತ್ತದೆ ಎಂದು ಕಾಣಿಸುತ್ತದೆ. ಅದಕ್ಕೆಂದೇ ಅದನ್ನು ವಿಕೃತವಾಗಿ ಚಿತ್ರಿಸುವ ಮೂಲಕ, ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸುವ ಮೂಲಕ ಇವರು ವಿಕೃತ ಆನಂದ ಅನುಭವಿಸುತ್ತಾರೆ.

ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

ನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ.

ಕಾನ್ವಲ್ಯೂಶನ್ ಎಂದರೇನು?

ಡಿಜಿಟಲ್ ಸಂಕೇತಗಳ ಸಂಸ್ಕರಣೆಯಲ್ಲಿ(DSP) ಕಾನ್ವಲ್ಯೂಶನ್ ಎನ್ನುವ ಗಣಿತದ ಒಂದು ಪ್ರಕ್ರಿಯೆ ಬಳಕೆಯಾಗುತ್ತದೆ.ಇದನ್ನು ಅರ್ಥವಿಸಿಕೊಂಡವರು ಕಡಿಮೆ,ಇದನ್ನು ಯಾಂತ್ರಿಕವಾಗಿ ಮಾಡುವವರೇ ಅಧಿಕ ಎನ್ನುವುದು ನನ್ನ ಸಹೋದ್ಯೋಗಿಯೋರ್ವರ ವಾದ.ಅವರು ಕಾನ್ವಲ್ಯೂಶನ್ ಕುರಿತು ಸರಳವಾಗಿ ಬರೆದು ಅಂತರ್ಜಾಲದಲ್ಲಿ ಹಾಕಿದ್ದಾರೆ.ಅದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಲಿ ಎನ್

ಜೇಡರ ಬಲೆ ಹುಟ್ಟಿದ್ದು ಹೇಗೆ .....?

ಇತ್ತೀಚೆಗೆ ನಾನು ಕೇಳಿದ ಒಂದು ಸುಂದರ ಜನಪದ ಸೊಗಡಿನ ಕಥೆ ಇದು.

ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆ ಎಂದು ಹೆಸರಾಗಿದ್ದು ಗ್ರೀಸ್ ದೇಶದ ನಾಗರೀಕತೆ. ಈ ನಾಗರೀಕತೆ ಇಂದ ಹುಟ್ಟಿದ ಕಥೆಗಳು ಹಲವಾರು.

ತುಂಬ ವರ್ಷಗಳ ಹಿಂದೆ ಗ್ರೀಕ್ ದೇಶದಲ್ಲಿ ಅರಾಕ್ನೆ ಎಂಬ ಹೆಸರಿನ ಯುವತಿ ವಾಸವಾಗಿದ್ದಳಂತೆ. ಆಕೆಯ ವೃತ್ತಿ ನೇಯ್ಗೆ. ರೇಶಿಮೆಯ ನೂಲನ್ನು ತೆಗೆದು ಅದನ್ನು ಸುಂದರವಾಗಿ ನೇಯ್ದು ವಿಧ ವಿಧವಾದ ರೇಷ್ಮೆಯ ಬಟ್ಟೆ ಗಳನ್ನು ತಯಾರಿಸುವುದರಲ್ಲಿ ಆಕೆಗೆ ಎಲ್ಲಿಲ್ಲದ ಆಸಕ್ತಿ.. ಆಕೆಯಲ್ಲಿದ್ದ ಕಲಾತ್ಮಕತೆಯಂತು ಅದ್ಭುತ. ನೇಯ್ಗೆಯನ್ನೇ ತನ್ನ ಜೀವ ಎಂದು ಕೊಂಡಿದ್ದ ಆಕೆ ದಿನದ ಸಂಪೂರ್ಣ ಸಮಯವನ್ನು ಹೊಸ ಹೊಸ ಮಾದರಿಯ ರೇಷ್ಮೆ ಬಟ್ಟೆಗಳನ್ನು ತಯಾರಿಸುವುದರಲ್ಲಿ ಕಳೆಯುತಿದ್ದಳು. ಬರಿ ಅಷ್ಟೆ ಅಲ್ಲ ಆ ಕೆಲಸವನ್ನು ಅಷ್ಟೇ ಪ್ರೀತಿಸುತಿದ್ದಳು ಕೂಡ..

ಹಾಗಿರುವಾಗ ಆರಾಕ್ನೆ ವಾಸವಾಗಿರುವ ಸುತ್ತ ಮುತ್ತಣ ಗ್ರೀಕ್ ಎಲ್ಲ ಜನರು ಕೂಡ ರೇಶಿಮೆಯ ಬಟ್ಟೆಗಳನ್ನು ಕರೀದಿಸಲು ಇವಳಲ್ಲಿಗೆ ಬರತೊಡಗಿದರು. ಹೀಗೆ ಬರು ಬರುತ್ತಾ ಸುತ್ತ ಮುತ್ತಣ ಪ್ರದೇಶದಲ್ಲಿ ಆರಾಕ್ನೆಯಾ ಪ್ರಸಿದ್ಧಿ ಹೆಚ್ಚಾಗುತ್ತಾ ಹೋಯಿತು. ಆರಾಕ್ನೆಗಂತೂ ತನ್ನ ಬುದ್ದಿಶಕ್ತಿ ಕಲಾತ್ಮಕತೆಯ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ಹೀಗೆಯೇ ಪ್ರಸಿದ್ಧಿ ಹೆಚ್ಚಾದಂತೆಲ್ಲಾ ಅರಾಕ್ನೆಗೆ ಅಹಂ ಶುರುವಾಯಿತು. ಆಕೆ ತನ್ನ ಕೌಶಲ್ಯದ ಬಗ್ಗೆ ಎಲ್ಲರಲ್ಲಿ ಹೇಳುವುದಕ್ಕೆ ಶುರುಮಾಡಿದಳು.. ಬರು ಬರುತ್ತಾ ತನ್ನ ಪ್ರಸಿದ್ದಿ ಇನ್ನು ಜಾಸ್ಥಿಯಾದಂಥೆಲ್ಲಾ ಆರಾಕ್ನೆಯ ಅಹಂ ಕೂಡ ಆಷ್ಟೇ ಜಾಸ್ತಿಯಾಯಿತು.. ಅವಳು ನನ್ನ ಬುದ್ದಿಶಕ್ತಿಯನ್ನು ಮೀರಿಸಲು ಗ್ರೀಕ್ ದೇಶದ ದೇವತೆ ಅಥೆನ್ಸ್ ಗೆ ( ನಮ್ಮಲ್ಲಿಯ ಸರಸ್ವತಿಯಂತೆ) ಕೂಡ ಸಾಧ್ಯವಾಗದು ಎಂದು ಹೇಳಲು ಶುರು ಮಾಡಿದಳಂತೆ.

ನಾನು ಆಕಾಶವಾಣಿಯಲ್ಲಿ ಓದಿದ ಕತೆಯ ಕತೆ...

ಆಕಾಶವಾಣಿಯಲ್ಲಿ ಕಥೆ ಓದುವುದು ನನಗೆ ಕಷ್ಟ ಎನಿಸಿತ್ತು. ನನ್ನ ಬಳಿಯಿದ್ದ ಕತೆಗಳಲ್ಲಿ ಹಾಗೆ ಓದಬಹುದಾದ ಕತೆ ಒಂದಾದರೂ ಇದೆ ಅನಿಸಿರಲಿಲ್ಲ. ಕೊನೆಗೆ ಇದ್ದ ಒಂದನ್ನೇ ಪ್ರಯತ್ನಿಸುವ ಧೈರ್ಯ ಮಾಡಿ ಬರುತ್ತೇನೆ ಎಂದು ಹೇಳಿದಾಗ ಎಂದೋ ಬರೆದಿದ್ದ ಏಳು ಪುಟಗಳ ಒಂದು ಹಳೆಯ ಅಪ್ರಕಟಿತ ಕತೆ ಇದೆ ಎಂಬುದೇ ಮನಸ್ಸಿಗಿದ್ದ ನೆಮ್ಮದಿ. ಆದರೆ ಒಂದು ದಿನ ಹಾಗೇ ಕೂತು stop watchನ ಸಹಾಯದಿಂದ ಅದನ್ನು ಓದತೊಡಗಿದಾಗ ಅಚ್ಚರಿ ಕಾದಿತ್ತು. ಅದರ ಎರಡೇ ಎರಡು ಪುಟ ಓದುವುದರೊಳಗೆ ಹತ್ತು ನಿಮಿಷ ಕಳೆದಿತ್ತು! ಆಕಾಶವಾಣಿ ನನಗೆ ನೀಡಿದ್ದ ಸಮಯ ಹನ್ನೆರಡು ನಿಮಿಷ! ಅದರಲ್ಲೂ ಒಂಥರಾ ಹುಂಬ ಧೈರ್ಯ, ಓ, ಇಷ್ಟೇನಾ ಹಾಗಾದರೆ, ಎರಡು ಪುಟಗಳ ಒಂದು ಕತೆ ಬರೆಯುವುದು ಅಂಥ ಕಷ್ಟವ? ಬರೆದರಾಯಿತು!

ನನಗೆ ಮೊದಲಿನಿಂದಲೂ ಈ ವಿಷಯದಲ್ಲಿ ಖಚಿತವಾದ ನಿಲುವಿತ್ತು. ಧ್ವನಿ ತೆಗೆದು ಓದಿ ಹೇಳಬಹುದಾದ ಕಥೆಗಳೇ ಬೇರೆ, ತಮ್ಮದೇ ವಿಶಿಷ್ಟ ಮೌನದಲ್ಲಿ ಪ್ರತಿಯೊಬ್ಬ ಓದುಗನೂ ಓದಿಕೊಳ್ಳಬಹುದಾದ ಕಥೆಗಳೇ ಬೇರೆ.

ಧರ್ಮ

ಧರ್ಮ ನೊಂದವರ, ದುಃಖಿಗಳ ಸಾಂತ್ವನಕ್ಕಾಗಿ ಇದೆ. ಅದು ಚರ್ಚೆಯ ವಿಷಯವಲ್ಲ. ಬರಿ ಉಪದೇಶವಲ್ಲ, ಆಚರಣೆಯೇ ಧರ್ಮ.

ಅವಲೋಕನ

ಪ್ರತಿದಿನ ಮನುಷ್ಯರು ಬೆಳಗ್ಗೆಯೋ ಸಂಜೆಯೋ ಒಂದರ್ಧ ಗಂಟೆಯಾದರೂ ಜೀವೋತ್ಕರ್ಷಕ್ಕೆ ಸ್ಫೂರ್ತಿ ನೀಡುವ ಸದ್ಗ್ರಂಥವನ್ನು ಅವಲೋಕಿಸಬೇಕು. ಹಾಗೆ ಮಾಡದಿದ್ದರೆ ಬಾಳು ಗುರಿ ತಪ್ಪೀತು!

ಮಾಯೆ

ಹೆಣ್ಣು ಹೊನ್ನು ಮಣ್ಣು ಮಾಯೆಯಲ್ಲ.. ಮನದ ಮುಂದಣ ಆಸೆಯೇ ಮಾಯೆ.