9/11- ಅದೊಂದು ವಿಶ್ವದ ನಾಗರೀಕತೆಗೆ ಧಿಕ್ಕಾರವೆಸಗಿದ ದಿನ !

9/11- ಅದೊಂದು ವಿಶ್ವದ ನಾಗರೀಕತೆಗೆ ಧಿಕ್ಕಾರವೆಸಗಿದ ದಿನ !

ಬರಹ

ಸೆಪ್ಟೆಂಬರ್ ೧೧, ೨೦೦೧-ಅದೊಂದು ಮರೆಯಲಾರದ ಅಮಾನುಷಕೃತ್ಯವೆಸಗಿ, ನಾಗರೀಕತೆಯ ಅಳಿವಿಗೆ ಪಣತೊಟ್ಟ ತಿಳಿಗೇಡಿಗಳ ದಿನ ! ಗುರುವಾರ, (ಸೆಪ್ಟೆಂಬರ್ ೧೧, ೨೦೦೮), ೭ ವರ್ಷಗಳ ನಂತರ ಅಮೆರಿಕದ ಜನತೆ, ಈ ಅನಿಷ್ಟದಿನವನ್ನು ಮತ್ತೆ ನೆನಸಿಕೊಳ್ಳುತ್ತಿದ್ದಾರೆ. ಮೌನ, ಮತ್ತೆ ಆ ದಯಾಮಯ ಭಗವಂತನ ಪ್ರಾರ್ಥನೆ, ಹಾಗೂ ಮೃತರ ನಾಮಾವಳಿಗಳಪಠನದಿಂದ ಪುಷ್ಪಗುಚ್ಛಗಳ ಸಲ್ಲಿಸುವಿಕೆಗಳು, ಅಂದಿನ ಮರೆಯಲಾರದದಿನದ ಸಾಮಾನ್ಯನೋಟದ ಅಂಗಗಳಾಗಿದ್ದವು. ’ಮೆಮೋರಿಯಲ್ ಸರ್ವೀಸಿ ' ನಲ್ಲಿ ಪಾಲ್ಗೊಂಡ ನಾಗರಿಕರ ಸಂಬಂಧಿಗಳು ೯/೧೧ ನ ದಾಳಿಯಲ್ಲಿ ತಮ್ಮ ಅಸುನೀಗಿದ್ದರು. ಆದರೆ ಭಾಗವಹಿಸಿದ್ದವರ ಕಣ್ಣಾಲಿಗಳಲ್ಲಿ ಕಂಬನಿಯಿತ್ತೇ ವಿನಹಃ ಅಧರ್ಯವಿರಲಿಲ್ಲ ! ದುಷ್ಕರ್ಮಿಗಳ, ತಿಳಿಗೇಡಿಗಳವರ್ತನೆಗೆ, ವಿಶ್ವದ ನಾಗರಿಕರು ಅಸಹ್ಯಪಟ್ಟುಕೊಂಡಿದ್ದರು. ಇಂದಿಗೂ ಅಲ್ಲಿ ನೆರೆದಿದ್ದವರ ವರ್ತನೆ ಅದೇ ತತ್ವವನ್ನು ಅನುಮೋದಿಸುತ್ತಿತ್ತು. ಪೆಂಟಗನ್ ನ ಅಧಿಕಾರಿಗಳು, ಅಧ್ಯಕ್ಷ ಜಾರ್ಜ್ ಬುಷ್, ಸೇರಿದಂತೆ ಹಲವಾರು ಪ್ರಮುಖವ್ಯಕ್ತಿಗಳು ’ ಸಂತಾಪಸೂಚಕಸಭೆ’ ಯಲ್ಲಿ, ಭಾಗವಹಿಸಿದ್ದರು.

ಮುಕ್ಕಾಂ : ಬ್ಲೂಮಿಂಗ್ಟನ್, ಇಲಿನಾಯ್

-ಚಿತ್ರ, ’ರೆಡಿಫ್ ಮೇಲ್’ ಕೃಪೆ.