ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶುಭಶುಕ್ರವಾರ

“ಅಂದು ಭೃಗುವಾರದಾ ನಡುಹಗಲು . . . ಮರಣ ವೃಕ್ಷದೊಳು ಅಮೃತಫಲದಂತೆ ಯೇಸು ತೂಗುತ್ತಮಿರೆ . . .” ಎಂದು ಹಾಡಿದ ರಾಷ್ಟ್ರಕವಿ ಗೋವಿಂದ ಪೈಯವರ ’ಗೊಲ್ಗೊಥಾ’ ವನ್ನು ಸ್ಮರಿಸಿಕೊಳ್ಳುವ ದಿನ ಶುಭಶುಕ್ರವಾರ. ಹೆಸರಿಗೆ ಶುಭಶುಕ್ರವಾರ ಎನಿಸಿದರೂ ಶುಭ ಕೋರುವ ದಿನವಿದಲ್ಲ. ಇದು ಯೇಸುಕ್ರಿಸ್ತನು ಶಿಲುಬೆ ಮೇಲೆ ಪ್ರಾಣತ್ಯಾಗ ಮಾಡಿದ ಶೋಕದಿನ. ಇದರ ಬಗ್ಗೆ ಇನ್ನಷ್ಟು ತಿಳಿಯುವಿರಾ?

ಮೊದಲ ಪ್ರೀತಿ

ಮೊದಲ ಪ್ರೀತಿ ತಂದ ನಗುವು
ದಾರಿ ಮರೆತು ನಡೆದ ಪಯಣ
ಅರಿಯದೆ ಬರೆದ ನೆನಪಿನ ಕವನ
ಬರಿ ಕೆಂಪು ನೆನಪುಗಳು

ಅವಳ ನೆನಪೇ, ನಗುವಿನ ನೋವು
ನನ್ನ ಸೆಳೆದೊಯುವ ಮುಳ್ಳಿನ ತೇರು
ನೋವ ಪಯಣ
ತರುವುದೇನೆ ಪ್ರೇಮ

ಹೊಟ್ಟೆ ಕಿಚ್ಚು

"ಲೋ ಹೊಟ್ಟೆ ಕಿಚ್ಚಿನ ಪಾಪಿ,ಸಾಕು ನಿಲ್ಸೋ ನನ್ಮಗ್ನೇ. ಬರಿ ಅವರು ಇಷ್ಟು ಮಾರ್ಕ್ಸ್ ತಗೊ೦ಡ್ರು,ಇವ್ರ ಅಷ್ಟ ಮಾರ್ಕ್ಸ್ ತಗೊ೦ಡ್ರು, ಥೂ... ಇದೇ ಆಗೊಯ್ತು ನಿನ್ನ ಜೀವನಾ.ಅಲ್ಲಪ್ಪಾ ,ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಿಯಾ.ಸ೦ತೋಷವಾಗಿರೊದನ್ನ ಬಿಟ್ಟು ....ಅಯ್ಯ್.., ನಾವ್ ನೋಡು ಸೆಕೆ೦ಡ್ ಕ್ಲಾಸ್ ನಲ್ಲಿ ಪಾಸಾಗಿಯೇ ಆರಾಮಾಗಿದೀವಿ" ಎ೦ದ ದೀಪಕ ನವೀನನಿಗೆ.

ವಿಶ್ವದ ಅತಿ ಜಾಣ ಹಾಗೂ ಬುಧ್ಧಿವಂತ ಮಕ್ಕಳಿರುವ ದೇಶ ಯಾವುದು?

ಇದೆ ಹಾಗೊಂದು ದೇಶ.

ಈ ದೇಶದ ಮಕ್ಕಳು ಏಳು ವರ್ಷ ವಯಸ್ಸಾಗುವವರೆಗೂ ಶಾಲೆಗೆ ಹೋಗುವುದಿಲ್ಲ. ತಂದೆ ತಾಯಿಗಳು ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳೋಲ್ಲ. ಸ್ಕೂಲ್ ಯೂನಿಫಾರ್ಮ್‍ಗಳಿಲ್ಲ. ಸ್ಪೋರ್ಟ್ಸ್ ಕ್ಲಬ್ಗಳಿಲ್ಲ. ಹೈಸ್ಕೂಲಿನ ಮಕ್ಕಳಿಗೂ ದಿನಕ್ಕೆ ಅರ್ಧಘಂಟೆಗೂ ಹೆಚ್ಚಿನ ಹೋಮ್‍ವರ್ಕ್ ಇರೋಲ್ಲ. ವಿದ್ಯಾಭ್ಯಾಸಕ್ಕಾಗಿ ನಿಯಮಿತ ಸಿಲಬಸ್ ಅಂತ ಇಲ್ಲ. ಪುರಸ್ಕೃತ ಪುಸ್ತಕಗಳೂ ಅಂತಲೂ ಇಲ್ಲ. ಎಲ್ಲವೂ ಶಿಕ್ಷಕರ ಇಛ್ಛಾನುಸಾರ ನಿರ್ಧಾರಿತ. ದೇಶ ತಂತ್ರಜ್ನಾನದಲ್ಲಿ ವಿಶ್ವದ ಮುಂಚೂಣಿಯಲ್ಲಿದ್ದರೂ, ತರಗತಿಗಳಲ್ಲಿ ಪವರ್‍ಪಾಯಿಂಟ್ ಉಪಯೋಗವಿಲ್ಲದೆ ಕರಿಯ ಬಣ್ಣದ ಬರಿಯುವ ಹಲಗೆ - ಸೀಮೆಸುಣ್ಣದ ಬಳಪ, ಓವರ್‍ಹೆಡ್ ಪ್ರೊಜೆಕ್ಟರ್ಗಳ ಪ್ರಯೋಗ. ಇಲ್ಲಿಯ ಶಾಲಾ ಕಾಲೇಜುಗಳಲ್ಲಿ ಅಮೇರಿಕೆಯಲ್ಲಿರುವಂತೆ ಹಾರ್‍ವರ್ಡ್, ಪ್ರಿನ್ಸ್‍ಟನ್ ತರಹದ ಉಚ್ಛ ನೀಚ ಸ್ತರದ ತಾರತಮ್ಯಗಳಿಲ್ಲ.

ಎಲ್ಲ ದೇಶದ ಮಕ್ಕಳಂತೆ ಇಲ್ಲಿಯ ಮಕ್ಕಳೂ ಜೀನ್ಸ್, ಟ್ಯಾಂಕ್‍ಟಾಪ್ ಧರಿಸುತ್ತಾರೆ. ಹಲವರು ಸ್ಟಿಲ್ಲೆಟೋ ಹೀಲ್ಸ್ ಧರಿಸಿ ಶಾಲೆಗೆ ಬರುತ್ತಾರೆ. ಕೆಲ ಮಕ್ಕಳು ತಲೆಗೂದಲಿಗೆ ವಿಚಿತ್ರ ಶೈಲಿಯ ವಿನ್ಯಾಸ ಮಾಡಿಸಿಕೊಂಡು ಬಣ್ಣ ಬಣ್ಣಗಳಲ್ಲಿ ಡೈ ಮಾಡಿಸಿಕೊಂಡು ಬರುತ್ತಾರೆ. ಗಂಟೆ ಗಟ್ಟಲೆ ಇಂಟರ್ನೆಟ್‍ಗೆ ತಗಲಿಕೊಂಡು ಕಾಲವ್ಯಯ ಮಾಡುತ್ತಾರೆ. ರಾಕ್ ಮತ್ತುಹೆವಿ ಮೆಟಲ್ ಸಂಗೀತ ಕೇಳುತ್ತಾರೆ.

"ನೀನಿಲ್ಲದೆ’

ಯಾವ ಪ್ರೀತಿ ನನ್ನ ಹ್ರದಯವನ್ನು ಮತ್ತೆ ಕಾಡಿದೆ
ಕನಸ್ಸೊಂದು ಹೀಗೆ ಬಂದು ಮನಸ್ಸಿಂದ ಜಾರಿದೆ
ಅವಳ ನೆನಪು ನನ್ನ ಎದೆಗೆ ಬಡಿದು
ಹ್ರದಯ ಒಡೆದ ಚೂರು ಇನ್ನೂ ಇದೆ

ದುಃಖ ಸಾಗರದಲ್ಲಿ ಮುಳಿಗಿದರೂ,ಮನಸ್ಸು
ಕಣ್ಣಾಂಚಿನಲಿ, ಕಣ್ಣೀರಿನ ಹನಿ ಇಲ್ಲ
ಅವಳಿಗಾಗಿ ಹ್ರದಯದಲಿ ಪ್ರೀತಿ ಎಶ್ಟು ಇತ್ತೊ??
ಸಾವಿನಲ್ಲೂ ಕಣ್ಣು ಮುಚ್ಚಿ ನಿದ್ದೆ ಮಡಲಿಲ್ಲ

ಕಪಟ ಪ್ರೀತಿ - ಪ್ರೀತಿಯಿಂದ- ಪ್ರೀತಿಗಾಗಿ (ಜಿ.ವಿಜಯ್ ಹೆಮ್ಮರಗಾಲ)

ಪ್ರೀತಿಯ
ಬೇಡವೇನಿಸಿದರೂ ಕೇಳದು
ಹಾಳಾದ ಮನಸ್ಸು,
ಬರಡಾದ ಭೂಮಿಯಲಿ
ಚೂರು-ಚೂರಾದ ಮನಸ್ಸಿನಲಿ
ನೋವು ತುಂಬಿದ ಹೃದಯಗಳ
ಚೂರುಗಳ ಅವಶೇಷಗಳಡಿಯಲಿ
ಬರೆಯುತಿಹೆ ನಾ....
ನಿನ್ನ ಕಪಟ ಪ್ರೀತಿ-ಪ್ರೇಮದ ಕತೆಯನ್ನ...
"........."ತೈಲವರ್ಣದ ಆಕೃತಿಯಾಗಿ
ಜನ ಮನದಲ್ಲಿರುವುದಕ್ಕಿಂತ,
ಕಣ್ಮುಚ್ಚಿದಾಗ ಗೋಚರಿಸುವ
ಸ್ಫೂರ್ತಿಯಾಗಬಾರದಿತ್ತೇ...
ನನ್ನ ಬಾಳ ಬಂಧನದಿ

"ಮನಸ್ಸಿನ ಸ್ಮಶಾನ ಮೌನದಲಿ ಇನ್ನೂ ಸುಡುತಿದೆ ನಿನ್ನ ನೆನಪು"-ರಾಜು

ಸಮಯ ಸಾದಕಿ,

ಸಾಕು ಕಣೆ ಇನ್ನು ಮೇಲೆ ನಿನ್ನ ಸಹವಾಸ.ನಿನ್ನ ಪ್ರೀತಿಯ ಬಲೆಯಲ್ಲಿ ಸಿಕ್ಕು ನೀರು ಬಿಟ್ಟ ಮೀನಿನಂತಾಗಿದ್ದೇನೆ.ಈ ಸಲದ ಪ್ರೇಮಿಗಳ ದಿನ ನನಗೆ ರಜ.ನನ್ನ ಹ್ರದಯದಲಿ ನೀ ನೆಟ್ಟಾ ಪ್ರೀತಯ ಮರಕ್ಕೆ ನೀರುಣಿಸುವವರು ಯಾರು ಇಲ್ಲ!!.

ಮುಂಗಾರು ಮಳೆ v/s ಚಿಗುರಿದ ಕನಸು

ನನ್ನನ್ನು ಬಹಳ ದಿನದಿಂದ ಕಾಡುತಿರುವ ಪ್ರಶ್ನೆ ಇದು

ಒಂದು ಕನ್ನಡ ಚಿತ್ರ ಸೊಗಸಾದ ಚಿತ್ರ  

ಚಿಗುರಿದ ಕನಸು

ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರ ಅದು

ಶಿವರಾಜ್ ಕುಮಾರ್ ರವರ್ ಅಭಿನಯದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ನಾನು ಆಗ ಆ ಚಿತ್ರವನ್ನು ಎರೆಡು ಸಲ ನೋಡಿದ್ದೆ.

"ಮೃತರ ಆತ್ಮಕ್ಕೆ ಶಾಂತಿ ಸಿಗಲಿ!"

ಇವತ್ತು "ಗುಡ್ ಫ್ರೈಡೆ". "ಏಸು" ತ‌ನ್ನ ಶರೀರ‌ವ‌ನ್ನು ತ್ಯಜಿಸಿದ‌ ದಿನ‌. ಈ ಸ‌ಂದ‌ರ್ಭ‌ದ‌ಲ್ಲಿ ನ‌ಮ್ಮ ದೇಶ‌ದ‌ಲ್ಲಿ ಸ‌ತ್ತವ‌ರಿಗೆ ಸ‌ಲ್ಲುವ‌ ಗೌರ‌ವ‌ವ‌ನ್ನು ಕುರಿತು ಸ್ವಲ್ಪ ಚಿಂತಿಸೋಣ‌.