ಓದಿದ್ದು ಕೇಳಿದ್ದು ನೋಡಿದ್ದು-11

ಓದಿದ್ದು ಕೇಳಿದ್ದು ನೋಡಿದ್ದು-11

ie

--------------------------------------------------------------------------

singh

---------------------------------------------------------------------------

ಹಣೆಯ ಮೂಲಕ ಗುಂಡು ಹೊಕ್ಕು, ಕುತ್ತಿಗೆಯಿಂದ ಹೊರಗೆ ಬಂದಿತ್ತು. ಈ ಹುಡುಗ ಸತ್ತಿದ್ದಾನೆ ಎಂದು ಪೊಲೀಸರು ಭಾವಿಸಿ ಆಸ್ಪತ್ರೆಗೆ ಸಾಗಿಸಲಿಲ್ಲ.ಆಸ್ಪತ್ರೆಗೆ ಮಗನ ದೇಹ ಒಯ್ದ ತಂದೆಯ ಬಳಿ ವೈದ್ಯರು ಹುಡುಗ "ತೀರಿ ಹೋಗಿದ್ದಾನೆ" ಎಂದೂ ಹೇಳಿದ್ದರು. ಆದರೆ ಸ್ವಲ್ಪ ಹೊತ್ತಿನ ನಂತರ ಆ ದೇಹವನ್ನು ಶವಾಗಾರದೆಡೆ ಒಯ್ಯುತ್ತಿದ್ದಾಗ,ಹುಡುಗನ ದೇಹ ಅಲುಗಾಡ ತೊಡಗಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗುಂಡನ್ನು ಹೊರತೆಗೆದರು. ಆ ಹುಡುಗ ಈಗಲೂ ಬದುಕಿದ್ದಾನೆ. ಶಾಲೆಗೆ ಹೋಗುವಷ್ಟು ಹುಷಾರಾಗಿದ್ದಾನೆ. ಅಂದ ಹಾಗೆ ಅವನ ತಾಯಿಗೆ ಬಿದ್ದ ಗುಂಡು ಎದೆಯ ಮೂಲಕ ಹಾದು ಹೋಗಿತ್ತು-ಹೃದಯ ಭೇದಿಸಿರಲಿಲ್ಲ ಅಷ್ಟೆ. ಮನಕರಗಿಸುವ ಈ ನೈಜ ಘಟನೆ ಇಲ್ಲಿದೆ.

ಅಜರ್

------------------------------------------------------------------

ನಿಮ್ಮಲ್ಲಿ ಹಣ ಇದ್ದು ಆಸ್ತಿ ಖರೀದಿಸಲು ಬಯಸುವಿರಾದರೆ, ಅಮೆರಿಕಾದಲ್ಲಿ ಆಸ್ತಿ ಖರೀದಿಸಿ-ಬೆಂಗಳೂರಲಲ್ಲ!

ಯಾಕೆಂದು ನಿಮಗೆ ಗೊತ್ತೇ ಇದೆ-ಅಲ್ಲಿ ಬ್ಯಾಂಕ್ ದಿವಾಳಿ ಪ್ರಕರಣಗಳ ನಂತರ ಆಸ್ತಿಯ ಮೌಲ್ಯ ಅರ್ಧಕ್ಕರ್ಧ ಇಳಿದಿದೆ.ಈಗ ಭಾರತೀಯರೂ ವಿದೇಶಗಳಲ್ಲಿ ಆಸ್ತಿ ಖರೀದಿಸಲು ಅವಕಾಶ ಇದೆಯಂತೆ.

ಪುಕ್ಕಟೆ ಸಲಹೆ ಇಲ್ಲಿದೆ.

ಅಂದ ಹಾಗೆ ನಮ್ಮ ಸರಕಾರ ಆಫ್ರಿಕಾದಲ್ಲಿ ಎಕರೆಗಟ್ಟಲೆ ಕೃಷಿ ಭೂಮಿ ಖರೀದಿಸಲು ಯೋಚಿಸುತ್ತಿದೆಯಂತೆ-ನಮ್ಮ ಕೃಷಿ ಭೂಮಿಯನ್ನು ಟಾಟಾ-ಬಿರ್ಲಾಗಳಿಗೆ ಉದ್ಯಮಕ್ಕಾಗಿ ನೀಡಬೇಕಾಗಿದೆಯಲ್ಲ-ಸಿಂಗೂರಿನಲ್ಲಿ ಮಾಡಿದಂತೆ!

--------------------------------------------------------------

scream

--------------------------------------------------------------

ಪುರಾಣಕಾಲದಲ್ಲಿ ಹೆಂಗಸರದ್ದೇ ರಾಜ್ಯಗಳಿದ್ದುವಂತಲ್ಲ. ಸಿನೆಮಾದಲ್ಲಿ ಹೆಂಗಸರೇ ಇದ್ದರೆ ಹೇಗೆ? ಇಶಾ ಆ ಬಗ್ಗೆ ಆಲೋಚಿಸುತ್ತಿರುವಂತಿದೆ.isha

Rating
No votes yet