ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾರಣ

ಎಲ್ಲಿಂದಲೋ ಬಂದ ಕಿರಣ...
ಚುಚ್ಚಿತು ಎನ್ನೆದೆಯನ್ನು ಬಾಣ...
ಸಿಕ್ಕಿತು ಮನಸ್ಸಿಗೊಂದು ತಾಣ...
ತಿಳಿಯದು ಎಲ್ಲಿಗೆ ಪಯಣ...
ಅರಿಯುತಿಹೆನು ಈಗ ನನ್ನ...
ಎಲ್ಲದಕ್ಕೂ ಎಂದು, "ತಾನೇ ಕಾರಣ"...

.. ಒಡೆಯ

ಇಂಥವರಿಗೆ ಏನಂತೀರಿ ?

"ABCD" ಚಿತ್ರವು ಶತದಿನೋತ್ಸವ ಆಚರಿಸಲೆಂದು ಹಾರೈಸುವ -

"ಮೇಘಾಸ್ಟಾರ್ ಅಭಿಮಾನಿಗಳ ಸಂಘ" (ಅದೇನು ಮೆಗಾಸ್ಟಾರೋ, ಅಥವಾ ಮೇಘಾಸ್ಟಾರೋ ?? ಅವನೇನು ಮೋಡದ ಸ್ಟಾರಾ ?)
ಯಾವ ಚಿತ್ರಮಂದಿರವಾಗಲೀ, ಟ್ರಾಫಿಕ್ ಸಿಗ್ನಲ್ ಆಗಲಿ ಈ ಥರ ಕಟೌಟ್ ಗಳು ಇವಾಗ ಸರ್ವೇ ಸಾಮಾನ್ಯ.

"ಕನ್ನಡವೆನೆ ಕುಣಿದಾಡುವುದೆನ್ನೆದೆ...!"

"ಕನ್ನಡವೆನೆ ಕುಣಿದಾಡುವುದೆನ್ನೆದೆ...!"

ಗೌರವಿಸೋ ಭಾಷೆ ಹಲವು,
ಪ್ರೀತಿಸೋ ಕನ್ನಡ ನುಡಿ ಒಂದೇ.

ಕರುನಾಡ ಮನೆ-ಮನ ಮಾತಾಗುತ
ತುಂಬಿದೆ ಸುಧೆ,

ಪ್ರೀತಿ ಆದರ, ಸ್ನೇಹ ಸಾಗರದ
ಕನ್ನಡಿಗರ ಸುವರ್ಣ ಕಾಲ ಬಂದಿದೆ.

ಸಂಭ್ರಮ ಸಡಗರದಿ
ಕನ್ನಡದ ಹಾದಿ ಹೂವಾಗುತ ಕುಣಿದಾಡಿದೆ ಎನ್ ಎದೆ....
ಕುಣಿದಾಡಿದೆ ಎನ್ ಎದೆ.......................

ಸ್ನೇಹದಿಂದ
ಗಣೇಶ್ ಪುರುಷೋತ್ತಮ

ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

Vista Service Pack
ಮೈಕ್ರೊಸಾಫ್ಟ್ ಕಂಪೆನಿಯು ತನ್ನ ವಿಂಡೋಸ್ ವಿಸ್ತ ಆಪರೇಟಿಂಗ್ ಸಿಸ್ಟಮ್ ಗೆ ಮೊದಲ ಸರ್ವೀಸ್ ಪ್ಯಾಕ್ (ಅಂದರೆ ಮೊದಲ ದೊಡ್ಡ ಅಪ್ಡೇಟ್) ನಿನ್ನೆ ರಿಲೀಸ್ ಮಾಡಿದೆ.

ವಿಸ್ತ ಬಳಸಿ ಬೇಸತ್ತು ಹೋದವರಿಗೆ ಇದು ಬಹುಶಃ ಸಿಹಿ ಸುದ್ದಿಯಾಗಬಹುದು. ಬಳಸಿ ನೋಡಿ ಸಿಹಿ ಕಹಿಯ ಅನುಭವ ಹಂಚಿಕೊಳ್ಳುವವರು ಸದ್ಯದಲ್ಲೇ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಳ್ಳುವರು. ಆದರೆ ಹಲವರು "ಬೇರೆಯವರು ಬಳಸಿ ಇದರ ಬಗ್ಗೆ ಬರೆಯಲಿ, ಆಮೇಲೆ ಬಳಸಿ ನೋಡುತ್ತೇವೆ... ನಮಗೆ ನಮ್ಮ ಕಂಪ್ಯೂಟರ್ ಬಹುಪ್ರಿಯವಾದುದು" ಎಂದು ಅಲ್ಲಲ್ಲಿ ಅಂತರ್ಜಾಲದಲ್ಲಿ ಬರೆದದ್ದನ್ನು ಓಡಿ ನನಗೆ ಆಶ್ಚರ್ಯವಾಯ್ತು. ಒಂದಾಗುತ್ತ ಒಂದು ಸಾಫ್ಟ್ವೇರ್ ಮಾರ್ಕೆಟ್ಟಿನಲ್ಲಿ ಹೊರಬರುವ, ಸಿಕ್ಕಾಪಟ್ಟೆ ಖರೀದಿಯಾಗುವ ವಿಂಡೋಸ್ ಆಪರೇಟಿಂಗ್ ಸಿಸ್ಟಮುಗಳಿಗೆ ಬಹುಶಃ ಇಂತಹ ಸ್ಥಿತಿ ವಿಂಡೋಸ್ ME (ಮಿಲೇನಿಯಮ್ ಎಡಿಶನ್) ನಂತರ ಇದೇ ಮೊದಲು. ಹದಗೆಟ್ಟ ಯೋಜೆನೆಯೊಂದು ಹೊರಬಂದಾಗ ಹೀಗಾಗುವುದು ಸಹಜ ಎಂಬುದು ಈ ಬಗ್ಗೆ ವರದಿ ಹೊತ್ತ ಆನ್ಲೈನ್ ಪತ್ರಿಕೆಗಳ ಅಂಬೋಣ. ಯೋಜನೆ ಹದಗೆಟ್ಟಿದೆಯೆಂದು ಮೈಕ್ರೊಸಾಫ್ಟಿನವರು ತಮ್ಮ ತಮ್ಮಲ್ಲೇ ಮಾತನಾಡಿದ್ದನ್ನು ಕೋರ್ಟ್ ಕೇಸೊಂದನ್ನ ಫಾಲೋ ಮಾಡುತ್ತಿದ್ದ [:http://www.nytimes.com/2008/03/09/business/09digi.html?_r=1&pagewanted=all|ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತ್ತು] - "They Criticized Vista. And They Should Know" ಎಂಬ ಶೀರ್ಷಿಕೆಯಡಿ.
ಈ ಮಧ್ಯೆ [:http://www.thehindubusinessline.com/blnus/15181806.htm|ವಿಸ್ತ ಬೆಲೆ ಇಳಿಸಲ್ಪಟ್ಟಿರುವುದು] ಸಾಕಷ್ಟು [:http://www.news.com/8301-13860_3-9883198-56.html?tag=newsmap|ಸಂಶಯಗಳನ್ನು ಹುಟ್ಟುಹಾಕಿದೆ ಎಂಬುವುದು ಸುಳ್ಳಲ್ಲ].

ಅದಿರಲಿ, ಈ ವಿಸ್ತ ಸರ್ವೀಸ್ ಪ್ಯಾಕಿನಲ್ಲಿ ಏನು ಹೊಸತು? ಮೈಕ್ರೊಸಾಫ್ಟ್ ೫೫ ಪುಟಗಳ ಡಾಕ್ಯುಮೆಂಟ್ ರೆಡಿ ಮಾಡಿದೆಯಂತೆ, ಏನೇನು ಬದಲಾವಣೆಗಳು ಎಂಬುದಾಗಿ. ವೆಬ್ ತಾಣ [:http://inventorspot.com/articles/windows_vista_service_pack_1_imm_11700|inventorspotನ ಬೆನ್ ಅರ್ನಾಲ್ಡ್ ಅದನ್ನೋದಿ ಮುಖ್ಯವಾದವುಗಳನ್ನು ಪಟ್ಟಿ ಮಾಡಿದ್ದಾರೆ]. ಅವುಗಳನ್ನು ಕನ್ನಡದಲ್ಲಿ ನಾನು ಕೆಳಗಿನಂತೆ ಪಟ್ಟಿ ಮಾಡಿರುವೆ:

* ಎಚ್ ಡಿ - ಡಿವಿಡಿ ಮತ್ತು ಬ್ಲೂ ರೇ ಡಿಸ್ಕುಗಳಿಗೆ ಹೆಚ್ಚಿನ ಬೆಂಬಲ (ಜೊತೆಗೆ ವಿಂಡೋಸ್ ಮೀಡಿಯ ಸೆಂಟರಿನ ಎಕ್ಸ್ಟೆಂಡರುಗಳು - ಡಿಜಿಟಲ್ ಟಿ ವಿ, ನೆಟ್ವರ್ಕಿನ ಮೂಲಕ ಓದಬಹುದಾದ ಡಿ ವಿ ಡಿ ಮುಂತಾದವುಗಳಿಗೆ ಕೂಡ) ಹೆಚ್ಚಿಸಿದ್ದಾರಂತೆ.
* ವಿಸ್ತ ಬಳಕೆದಾರರನ್ನು ಬೇತಾಳದಂತೆ ಕಾಡಿದ್ದ ಎರರ್ ರಿಪೋರ್ಟಿಂಗ್ ಸವಲತ್ತು (!) ಸ್ವಲ್ಪ ಕಡಿಮೆ ರೇಜಿಗೆಯಾಗುವಂತೆ ಮಾಡಿದ್ದಾರಂತೆ.

ಆತ

ಆಟೊನಲ್ಲಿ ಬಸ್ ಸ್ಟಾಂಡ್‌ಗೆ ಬಂದಿಳಿದ ಕವಿತಾ ಮಣಭಾರದ ಲಗೇಜ್‌ ಹೊತ್ತುಕೊಂಡು ನಡೆಯುತಿದ್ದಳು. " ಬೆಂಗಳೂರಿಗೆ ಯಾವಾಗ ಹೋಗುತ್ತೇನೋ ಎಂಬಂತೆ ಆಗಿತ್ತು.
ಈ ಹಾಳಾದ ಎಕ್ಸಾಮ್ ಇದ್ದಾಗಲೇ ಅಕ್ಕನ ಮದುವೆ ಆದಾಗ ಬಹಳ ಬೇಸರವಾಗಿತ್ತು.ಮದುವೆಗೂ ಹೋಗಲಾಗಿರಲಿಲ್ಲ . ಅಕ್ಕನದು ಲೌ ಮ್ಯಾರೇಜ್ .

ಅಪರಂಜಿ

ಅಪರಂಜಿ ಅಪರಂಜಿ
ನನ್ನವಳು ನಂಗೆ ಅಪರಂಜಿ
ನೋಡ್ತಾ ಇದ್ದರೆ ಕಾಡುತ್ತೆ
ಅವಳ ನಗೆಯ ಗುಲಗಂಜಿ
ನಕ್ಕರೆ ಸಾಕು,ಸಕ್ಕೆರೆ ತುಟಿಯ
ಕಚ್ಚಿ ತಿನ್ನೋಕೆ ನಂಗಾಸೆ..,ಅಂತ ನಾನಂದ್ರೆ
ಅಲ್ಲೇ ಇದೆ ಬೆಣ್ಣೆ ಸೀಸೆ
ಬೇಕಾದ್ರೆ ತಿನ್ನೋ ಓ ಕೂಸೇ,ಅಂತ ಅವಳು ಅಂದ್ಲು

ಸೆರೆಯಾದೆನು..ಸೆರೆಯಾದೆನು..

ಸೆರೆಯಾದೆನು..ಸೆರೆಯಾದೆನು..ಕಣ್ಣಲ್ಲೇನೇ...

ಸತ್ಯಾ ಈಸ್ ಇನ್ ಲವ್.....

ಬಹಳ ಚೆನ್ನಾಗಿದೆ ಅಲ್ವೆ ಕುಮಾರ್ ಸಾನು ಹಾಡಿರುವ ಈ ಹಾಡು..

ಇತ್ತೀಚೆಗೆ ಇನ್ನಾವುದಾದರೂ ಉತ್ತಮ ಗೀತೆಗಳು ನೀವು ತಿಳಿದಿರುವಂತೆ ಬಂದಿವೆಯೇ??

ಪ್ರತಿಭೆ V/S ಎಸ್ಎಂಎಸ್

"ವಾಹ್ ಬೇಟಾ ವಾಹ್.. ತುಮ್ನೆ ಆಜ್ ಬಹುತ್ ಅಛ್ಚಾ ಗಾಯಾ ಹೈ. ದುಖ್ ಈಸ್ ಬಾತ್ ಕಾ ಹೈ ಕಿ ಮೈ ಸಿರ್ಫ್ 10 ಅಂಕ್ ದೆಸಕ್ತಾ ಹೂಂ...
ಅಗರ್ (ಮಧ್ಯೆ ಒಂದು PAUSE).... ಅಗರ್ ಮೇರೆ ಬಸ್ ಮೈ ಹೋತಾ ತೋ 15 ದೇದೇತಾ..ಜಾವೋ ಬೇಟಾ XYZ ಕಾ ಆಶಿರ್ವಾದ್ ಲೇಲೋ..."

ಯಾವುದೇ ಚಾನೆಲ್ ಹಾಕಿದ್ರೂ ಕೂಡಾ ಈ ಥರಾ ಡೈಲಾಗ್ ಇರೋ ಸಾಕಷ್ಟು ಸಂಗೀತ ಸ್ಪರ್ಧೆಗಳು ಕಾಣಸಿಗುತ್ತವೆ.

ಕನವರಿಕೆ

ಬಯಸದೆ ಬಂದ 'ಭಾಗ್ಯ'
ಪಕ್ಕದಮನೆಯ 'ಸೌಭಾಗ್ಯ'
ಹಾಡುತ ಬಂದಳು 'ಆ-ರತಿ'
ಸೋಕಿಸಿದಳು ಸೆರಗನ್ನ ಒಂದು ಸರತಿ
ಸರ ಸರ ಅಂತ ಬಂದಳು ಸರಸ್ವತಿ
ಅವಸರ ಮಾಡಿದಳು ಅವರತ್ತಿ
ನೋಡ್ತಾ ಇದ್ದರೆ ದಿವ್ಯನೋಟ
ಕೊಡ್ತಾ ಇದ್ದರೆ ಕಾಫಿಲೋಟ
ಪಕ್ಕದಲ್ಲಿ ಇರೋದು ಒಂದೇ ತೋಟ
ಆದರೆ ಕಾಡ್ತಿದೆ ನನ್ನವಳ
ಕಣ್ಣಂಚಿನ ಕುಡಿ ನೋಟ
ಇವೆಲ್ಲ ಕನವರಿಸುತ್ತಿದ್ದೆ ನಾ ಜೋರಾಗಿ

ನಯಸೇನನ ಸಲೀಸಾದ ಸಾಲುಗಳು - ಬಿಡಿ ೮ - ಕೆಟ್ಟವರ/ಸಿತಗರ ಒಡನಾಟ

ಕೆಟ್ಟವರ ಒಡನಾಟವನ್ನು ಬಲ್ ಚೆನ್ನಾಗಿ ಹೋಲಿಕೆಗಳ ಮೂಲಕ ಬಣ್ಣಿಸಿದ್ದಾನೆ.

ಮೊದಲಿಂ ಪಂದಿಗಳೊಡನಾ
ಡಿದ ಕಱುವುಂ ಪಂದಿಯಂತೆ ಪೇಲಂ ತಿಂಗೆಂ
ಬುದು ನಾಣ್ಣುಡಿ ತಾನದು ತ
ಪ್ಪದು ಸಿತಗರ ಕೂಟದಿಂದೆ ಕೆಡದವರೊಳರೇ