ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?

ಟೀ ಕಾಯಿಸು,
ನೀರ್ ಕಾಯಿಸು,
ಮಯ್ ಕಾಯಿಸು

ಕಾಪಿ ಬಿಸಿ ಮಾಡು,

ನೀರ್ ಬಿಸಿ ಮಾಡು,
ಮಯ್ ಬಿಸಿ ಮಾಡು

ಹೀಗೆಲ್ಲ ನಾವು ಇವುಗಳನ್ನು ಬಳಸುತ್ತೇವೆ. ಕಾಯ್ಸು  ಮತ್ತು ಬಿಸಿ ಮಾಡು ಎರಡೂ ಒಂದೇ ಅರಿತ ಕೊಡುತ್ತ. ಅತ್ವ ವಸಿ ಅವುಗಳಲ್ಲಿ ಬೇರೆತನವಿದಿಯ?

ಒಲವೇ ಜೀವನ ಸಾಕ್ಷಾತ್ಕಾರ -ಮಾನಸಿ ಪ್ರಸಾದ್

ಕರ್ನಾಟಕ ಸ೦ಗೀತದಲ್ಲಿ ಹೊಸ ಹೊಸ ಪ್ರಯತ್ನಗಳು ಮಾಡುವ ನಿಟ್ಟಿನಲ್ಲಿ ಮಾನಸಿ ಪ್ರಸಾದ್ ರವರು ಇ೦ದು ಸ೦ಜೆ ಆರು ಘ೦ಟೆಯಿ೦ದ
ಎ೦ಟು ಘ೦ಟೆಯವರೆಗೆ "ಒಲವೇ ಜೀವನ ಸಾಕ್ಷಾತ್ಕಾರ" ಕಾರ್ಯಕ್ರಮವನ್ನು RV Dental College ನಲ್ಲಿ ಆಯೋಜಿಸಿದ್ದಾರೆ.

ಜೋಕುಮಾರನನ್ನು ಮಾಡಿಸುವುದು ಜೋಕಲ್ಲ...........

ಬಿ ವಿ ಕಾರಂತರ ನಿರ್ದೇಶನದಲ್ಲಿ ಪ್ರಥಮ ಬಾರಿಗೆ “ಬೆನಕ” ತಂಡದಿಂದ “ಜೋಕುಮಾರಸ್ವಾಮಿ” ನಾಟಕ ಪ್ರದರ್ಶನಗೊಂಡಾಗ ನನ್ನ ಕನಸು ಮನಸ್ಸಿನಲ್ಲೂ ನಾನು ಅದೇ ನಾಟಕದಲ್ಲಿ, ಅದರಲ್ಲೂ ಬೆನಕತಂಡದೊಂದಿಗೆ ನಟಿಸುವೆ ಎಂದೂ ಎಣಿಸಿರಲಿಲ್ಲ. ಅದಿರಲಿ ಅದೇ ನಾಟಕವನ್ನು ಅಮೆರಿಕದಲ್ಲಿ ರಂಗದ ಮೇಲೆ ತರುತ್ತೇನೆ ಎನ್ನುವ ವಿಚಾರವಂತೂ ನನ್ನ ತಲೆಯಲ್ಲಿ ಯಾವ ಮೂಲೆಯಲ್ಲೂ ಇರಲಿಲ್ಲ. ೧೯೭೨ರಲ್ಲಿ ಪ್ರದರ್ಶನಗೊಂಡಾಗ ಇನ್ನೂ ಬೆಂಗಳೂರಿಗೆ ಹೊಸಬ. ನಾಟಕದ ಬಗ್ಗೆ, ಪ್ರೌಢಶಾಲೆಗಳ ನಾಟಕಗಳನ್ನು ಬಿಟ್ಟರೆ, ಅಷ್ಟಾಗಿ ತಿಳಿದೂ ಇರಲಿಲ್ಲ. ನಂತರ ೧೯೭೭ರಲ್ಲಿ ಬೆನಕ ತಂಡದೊಂದಿಗೆ ಪರಿಚಯವಾಗಿ ಇದೇ “ಜೋಕುಮಾರಸ್ವಾಮಿ”ಯ ನಾಟಕದ ೫೦ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಗೌಡರ ಆಳುಗಳಲ್ಲಿ ಒಬ್ಬನಾಗಿ, ರಂಗಸಜ್ಜಿಕೆಯಲ್ಲಿ ಭಾಗಿಯಾಗಿ ಈ ನಾಟಕದ ಮೇಲಿನ ಪ್ರಭಾವ ನನ್ನ ಮೇಲೆ ಬಹಳ ಇತ್ತು. ಅಮೆರಿಕೆಗೆ ಬಂದ ಮೇಲೆ ‘ಹಾಲಿವುಡ್ನಲ್ಲಿ ಯಮ’, ‘ಯಮನ ಕಾಲ್ ಸೆಂಟರ್’ ಎಂಬ ಎರಡು ಹಾಸ್ಯ ನಾಟಕಗಳು ಅಮೆರಿಕೆಯ ಕನ್ನಡಿಗರಲ್ಲಿ ಬಹಳ ಜನಪ್ರಿಯಗೊಂಡು ನನಗೆ ಅಮೆರಿಕೆಯ ಯಮ ಎಂದು ಕರೆಯಲ್ಪಟ್ಟಾಗಲಂತೂ ಬಹಳ ಖುಷಿಯನ್ನು ತಂದಿತ್ತು. ಇದೇ ಹುಮ್ಮಸ್ಸಿನಿಂದ ಅಮೆರಿಕದಲ್ಲಿ ‘ಜೋಕುಮಾರಸ್ವಾಮಿ’ ನಾಟಕವನ್ನು ಏಕೆ ರಂಗದಮೇಲೆ ತರಬಾರದು ಎಂದು ಒಂದು ಹುಳುವಾಗಿ ತಲೆ ಕೊರೆಯಲು ಶುರುವಾಗಿದ್ದು ೨೦೦೨ರಲ್ಲಿ. ಅಂದಿನಿಂದ ಮೂರು ಬಾರಿ ನಾಟಕ ಮಾಡಬೇಕೆಂಬ ಒಂದು ಕಡಿತದಿಂದ ಗುಂಪನ್ನು ಕಟ್ಟುವುದು ಯಾವುದಾದರೂ ಒಂದು ಕಾರಣಕ್ಕೆ ನಿಂತು ಹೋಗುವುದು. ಕಳೆದ ವರ್ಷ ಬೆನಕ ತಂಡವನ್ನೇ ಅಮೆರಿಕೆಗೆ ಕರೆಸುವ ಸಾಹಸಕ್ಕೆ ಕೈಹಾಕಿದೆ. ವಿಸಾ ತೊಂದರೆಯಿಂದ ಬರಲಿಕ್ಕಾಗದಿದ್ದು ಬೆನಕ ತಂಡಕ್ಕೆ ಹಾಗೂ ಕನ್ನಡ ಹವ್ಯಾಸಿ ನಾಟಕ ತಂಡಗಳಿಗೇ ಒಂದು ನಿರಾಸೆಯನ್ನು ತಂದಿತ್ತು. ಆ ಪ್ರಯತ್ನ ‘ಬೆನಕ’ ತಂಡದ ‘ಜೋಕುಮಾರಸ್ವಾಮಿ’ ಅಮೆರಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿತ್ತು ಎನ್ನುವ ಹೆಮ್ಮೆಯ ವಿಷಯವೊಂದೇ ಅಲ್ಲ, ಅದೊಂದು ಕನ್ನಡ ನಾಟಕರಂಗದಲ್ಲಿ ಒಂದು ಮೈಲಿಗಲ್ಲಾಗುತ್ತಿತ್ತು. ಏಕೆಂದರೆ ‘ಬೆನಕ’ ತಂಡ ಬಂದಿದ್ದರೆ ಅಮೆರಿಕೆಯ ಪ್ರಮುಖ ನಗರಗಳಲ್ಲಿ ೩೦ಕ್ಕೂ ಹೆಚ್ಚು ಪ್ರದರ್ಶನಗಳು ಒಪ್ಪಿಗೆಯಾಗಿದ್ದವು. ಅಂತಹ ಒಂದು ಚಾರಿತ್ರಿಕ ಮೈಲಿಗಲ್ಲನ್ನು ಸಾಧಿಸಬೇಕೆಂದು ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಅಂತಹ ಒಂದು ಅವಕಾಶ ಕೈತಪ್ಪಿಹೋಯಿತಲ್ಲಾ ಎಂದು ಬಹಳ ನಿರಾಸೆಯೂ ನನಗಾಗಿದೆ. ಹೀಗಿ ಕಳೆದ ೫ ವರ್ಷದಿಂದ ಮಾಡಲೇಬೇಕೆಂಬ ಛಲದಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಂತಹ ಅವಕಾಶ ಸಿಕ್ಕಿದ್ದು ಈ ವರ್ಷ. ನಾಟಕದ ಬಗ್ಗೆ ನನಗೆ ಪೂರ್ಣ ಮಾಹಿತಿ ಇತ್ತು. ನನ್ನ ಬೆನಕ ತಂಡದ ಅನುಭವ ಹಾಗೂ ಅಮೆರಿಕನ್ನಡಿಗರಲ್ಲಿ ನನ್ನ ನಟನೆ ಹಾಗೂ ನಿರ್ದೇಶನದ ಬಗೆಗಿನ ಇದ್ದ ವಿಶ್ವಾಸ ನನಗೆ ಇನ್ನಷ್ಟು ಸ್ಥೈರ್ಯವನ್ನು ತುಂಬಿತ್ತು.

ಒಳ್ಳೆಯ ಇಂಗ್ಲೀಷ್ ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ?

ಒಳ್ಳೆಯ ಇಂಗ್ಲೀಷ್ - ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ? ದಯವಿಟ್ಟು ಗೊತ್ತಿದ್ದವರು ತಿಳಿಸಿ. Downloadable ಇದ್ದರೆ ಇನ್ನೂ ಒಳ್ಳಯದು.

ವಂದನೆಗಳೊಂದಿಗೆ

ನಾರಾಯಣ

ಪ್ರಿಯತಮೆಗೊಂದು ಪತ್ರ

ಪ್ರಿಯೆ,
ಇದುವರೆಗೂ ನೀನು ನನ್ನಲ್ಲಿ ತೋರುತ್ತಿದ್ದ ಪ್ರೀತಿ ಇಂದು
ಬೇಡವಾಗಿದೆ. ನಿನ್ನಿಂದ ದೂರವಾಗಬೇಕೆಂಬ ಆಸೆ ಬಹಳ
ಹೆಚ್ಚಾಗಿದೆ. ನಿನ್ನನ್ನು ಕಾಣಬೇಕೆಂಬ ಆತುರ ಈಗ
ನನ್ನ ಮನದಲ್ಲಿಲ್ಲ. ಏಕೆಂದರೆ ನಿನ್ನ ಅನುಚಿತ ವರ್ತನೆ
ದಿನ ದಿನಕ್ಕೂ ಅಧಿಕವಾಗುತ್ತಿದೆ. ಅಂದು ನೀನು ಹೇಳಿದ ಮಾತಿನಿಂದ
ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೆಂದು ಗೊತ್ತಾಯಿತು. ಮೊದಲು

ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ

ಕನ್ನಡ ಭಾಷೆ ಮುತ್ತಿನಂಥ ಭಾಷೆ. ಕನ್ನಡ ಕೇಳಲು ತಂಪು, ಕಿವಿಗೆ ಇಂಪು ಮತ್ತು ಮೂಗಿಗೆ ಕಂಪು. ನಮ್ಮ ಭಾಷೆ ಶ್ರೀಮಂತ ಇತಿಹಾಸವುಳ್ಳ ಭಾಷೆ. ಇಂತಹ ಭಾಷೆ ಈಗೀಗ ನಶಿಸಿ ಹೋಗುತ್ತಿದೆಯೇನೋ ಎಂದು ಜನರ ಕೂಗು ಕೇಳಿ ಬರುತ್ತಿತ್ತು. ಕನ್ನಡದ ಬಗ್ಗೆ ಜನರಲ್ಲಿ ನಿರಾಸಕ್ತಿ ಉಂಟಾಗಿದೆಯೇನೋ ಎಂದು ತಿಳಿದು ಬೇಸರವಾಗಿತ್ತು.

ಎಲ್ಲಿರುವೆ ನೀನು ~"ಪ್ರೀತಿ"~......?

ಎಲ್ಲಿರುವೆ ನೀನು ~"ಪ್ರೀತಿ"~......?

ಪ್ರೀತಿಯ ಝರಿಯ ಜಲಪಾತದಂತಿರಬೇಕು ನೀನು:
ಸುಖದ ಅಲೆಯ ಸಾಗರದಂತಿರಬೇಕು ನೀನು:
ಅನಂತ ಜೀವನ ಸಂಗಾತಿಯಾಗಿ ಬರಬೇಕು ನೀನು:
ಎಲ್ಲಿರುವೆ ಎಂದೆನೆಗೆ ಒಮ್ಮೆ ಹೇಳುವೆಯಾ ನೀನು....?

ಇನ್ನೊಬ್ಬರನ್ನುಪ್ರೀತಿಸುವುದು ಸಹಜ,
ಇನ್ನೊಬ್ಬರಿಂದ ಪ್ರೀತಿಸಲ್ಪಡುವುದು ಭಾಗ್ಯ,
ಪ್ರೀತಿಸಿದವರೊಂದಿಗೆ ಜೀವಿಸುವುದು ಸಾಧನೆ,

ಹೀಗೊ೦ದ್ ವಿಷ್ಯ...

’ಚುನಾವಣೆಗಳು ಬರುತ್ತಾ ಇವೆ ತಾವು ಯಾರಿಗೆ ಓಟು ಹಾಕುತ್ತೀರಾ...?

’ಅಯ್ಯೋ...ಬಿಡಿ ಸಾರ್, ಎಲ್ಲಾ ಕಳ್ಳ ನನ್ನ್ ಮಕ್ಳು, ಯಾರಿಗ್ ಹಾಕಿದ್ರು ಅಷ್ಟೆ,ದೇಶ ಎನ್ ಉದ್ದಾರವಾಗೊಲ್ಲ , ಅದಕ್ಕೆ ನಾನು ಮತ ಹಾಕೊದೇ ಇಲ್ಲ .’

ನೀನು ಹೀಗೆ ಮಾಡಬಾರದಿತ್ತು.............

ನೀನು ಹೀಗೆ ಮಾಡಬಾರದಿತ್ತು ಕಣೇ..................................,

ಹೌದು ಕಣೇ,ನೀನು ಹೀಗೆ ಮಾಡಬಾರದಿತ್ತು, ಕವನ। ’ ಕವನ ’, ನಾನೇ ಅಲ್ಲವೇ ,ನಿನಗೆ ಆ ಹೆಸರಿಟ್ಟುದು?। ಹೌದು, ನನ್ನ ಕವನವಾಗಿದ್ದೆ ನೀನು।ಎಲ್ಲೋ ಕುಳಿತ ಕವಿಯಲ್ಲಿ ಥಟ್ಟನೇ ಹುಟ್ಟುವ ಕವನದ೦ತೆ ನನ್ನಲ್ಲಿ ಸೇರಿದ್ದೇ ನೀನು।ಇಷ್ಟಕ್ಕೂ ನನಗೆ ನಿನ್ನ ನಿಜವಾದ ಹೆಸರೇ ಗೊತ್ತಿರಲಿಲ್ಲ। ಈಗಲೂ ಗೊತ್ತಿಲ್ಲ ಬಿಡು।

" ದಟ್ಸ್ ಕನ್ನಡ " ಇ-ಪತ್ರಿಕೆಯ ವ್ಯಂಗಚಿತ್ರಲೇಖಕ, ಅಮೃತ್, ಮಂಗಳೂರು, ಈಗ ಯಾಕ್ ಬರೀತಿಲ್ಲ ?

ಎಷ್ಟ್ ಸೊಗ್ಸಾದ್ ಹಾಸ್ಯಚಿತ್ರಗಳ್ನ ಕೊಡ್ತಿದ್ದ ಅಮೃತ್ ಎಲ್ಲಿ ಮಾಯಾಆಗಿದಾರೆ, ಯಾರ್ಗಾದ್ರುಗೆ ಗೊತ್ತೇನು. ಪ್ರತಿವಾರ್ದಲ್ಲಿ, ಚಲೊ ಚಿತ್ರಬರಿತಿದ್ರು. ಯಾಕ್ ಬರಿತಿಲ್ಲ. ತಿಳ್ಸಿ.