ದೇಹ ಮತ್ತು ಆತ್ಮ - ಭಾಗ ೨

ದೇಹ ಮತ್ತು ಆತ್ಮ - ಭಾಗ ೨

ಬರಹ

ನಾನು ಈ ಹಿಂದೆ, ಮನುಷ್ಯನಿಗೆ ಆತ್ಮದ ಪರಿಜ್ಞಾನ ಹುಟ್ಟಿನಿಂದಲೆ ಏಕಿಲ್ಲವೆಂದು ಕೇಳಿದ್ದೆ(http://sampada.net/forum/9238). ಅದಕ್ಕೆ, ಮಾಧವರ ಉತ್ತರ ಹೀಗಿತ್ತು :
"ಆತ್ಮ ಜ್ಞಾನ ಸಾಕ್ಷಾತ್ಕಾರಕ್ಕೆ ಜನ್ಮ ಜನ್ಮಾಂತರಗಳ ಸಾಧನೆಗಳು ಬೇಕಾಗಬಹುದು. ಅದು ಜೀವದ ಸ್ವಭಾವಕ್ಕನುಗುಣವಾಗಿ ನಿರ್ಧಾರವಾಗುತ್ತದೆ. ಅವರವರ ಪೂರ್ವ ಜನ್ಮದ ಪಾಪ ಪುಣ್ಯಗಳಿಗನುಗುಣವಾಗಿ ಅವರ ಜ್ಞಾನ-ಕರ್ಮಗಳು ನಿರ್ಧಾರವಾಗುತ್ತಾ ಹೋಗುತ್ತವೆ. ಹೇಗೆ ಒಂದು ತರಗತಿಯಲ್ಲಿ ಉಪಾಧ್ಯಾಯರು ಪಾಠವನ್ನು ಹೇಳಿದರೆ ಎಲ್ಲ ವಿದ್ಯಾರ್ಥಿಗಳೂ ಒಂದೇ ಸಮನೆ ಗ್ರಹಿಸುವುದಿಲ್ಲವೋ ಹಾಗೆ. "

ಈ ಉತ್ತರವನ್ನು ನಾನು ಬಹಳಷ್ಟು ಸಾರಿ ಓದಿದ್ದೇನೆ ಮತ್ತು ಕೇಳಿದ್ದೇನೆ. ಹಾಗಾದರೆ, ಇದರ ಪ್ರಕಾರ, ಮೊದಲ ಜನ್ಮದಲ್ಲಿ ಎಲ್ಲರಿಗೂ pure ಆತ್ಮವಿತ್ತು. ದೇಹ ತನ್ನ ಕರ್ಮಾನುಸಾರ ಆತ್ಮವನ್ನು ಕಲುಷಿತಗೊಳಿಸುತ್ತ ಹೋಯಿತು. ಈಗ ಸಿಕ್ಕಿರುವ ದೇಹವನ್ನು ಸಾಧನೆಯಲ್ಲಿ ತೊಡಗಿಸಿ ನಾವು ನಮ್ಮಲ್ಲಿರುವ ಆತ್ಮವನ್ನು ಮತ್ತೆ pure ಮಾಡಲು ಪ್ರಯತ್ನಿಸಬೇಕು. ಇದೊಂದು ಚಕ್ರದಂತೆ, ಆಂದರೆ,
pure ಆತ್ಮ --->pure ಆತ್ಮ+ದೇಹ+ಕೆಟ್ಟ ಕರ್ಮ--->impure ಆತ್ಮ+ದೇಹ+ಒಳ್ಳೆಯ ಕರ್ಮ--->ಜನ್ಮಜನ್ಮಾಂತರದ ಸಾಧನೆಯ ನಂತರ--->pure ಆತ್ಮ

ಯಾತಕ್ಕಾಗಿ ಈ ಚಕ್ರ ನಡೆಯುತ್ತಿದೆ?

****ಆತ್ಮದ ಇರುವಿಕೆಯನ್ನು ನಂಬಿರುವವರು ಮಾತ್ರ ಉತ್ತರಿಸಿ.****

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet