ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಮೊದಲ ಹಿಪ್-ಹಾಪ್ ಹಾಡು

ಕೇಳಬೇಕು ಕೇಳಬೇಕು ಕನ್ನಡ ಹಾಡ್ನೆ ಕೇಳಬೇಕು

ಕಲಾಸಿಪಾಳ್ಯಕ್ ಹೋದ್ರು ಕೋರಮಂಗಲದಲ್ಲಿದ್ರು
ಕನ್ನಡ ಹಾಡ್ನೆ ಕೇಳಬೇಕು

ಲೀಲಾ ಅರ್ಮನೆಗೋದ್ರು ಎಸ್ಸೆಲ್ವಿ ದರ್ಶಿನಿಲಿದ್ರು
ಕನ್ನಡ ಹಾಡ್ನೆ ಕೇಳಬೇಕು

ಬಿಟಿಎಸ್ನಲ್ಲಿದ್ರು  ಬೆನ್ಸ್ ಕಾರಲ್ಲಿದ್ರು
ಕನ್ನಡ ಹಾಡ್ನೆ ಕೇಳಬೇಕು

...

...

ಚಿತ್ರಚಾಪ -ಪುಸ್ತಕ ಬಿಡುಗಡೆ

ಪರಿಸರದ ಬಗ್ಗೆ ನಾನು, ಶ್ರೀನಿಧಿ, ಅರುಣ್, ಶ್ರೀನಿವಾಸ್ ಮತ್ತು ಅನ್ನಪೂರ್ಣ ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ
'ಚಿತ್ರಚಾಪ', ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ

ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

ಸಂಪದದಾಗ ಭಾಷಾದ ಮ್ಯಾಲೆ ಮಸ್ತ ಡಿಸ್ಕಶನ್ ನಡದದ. ಇದನ್ನೆಲ್ಲ ಬಾಜೂಕ ನಿಂತು ನೋಡ್ಲಿಕತ್ತೀನಿ ಇನ್ನ ಹೆಂಗ-ಹೆಂಗ, ಯಾ-ಯಾ ಕಡೆ ಹರಿತದ ವಿಚಾರ ಅಂತ. ಬಾಜೂಕ ನಿಂತು ಅವರೇನಂದ್ರು, ಇವರೇನಂದ್ರು ಅಂತ ನೋಡೊದ್ರಾಗ ಮಜ ಅದ, ಜೊತೀಗೆ ನನ್ನವೇ ಎಷ್ಟೊ ಅಭಿಪ್ರಾಯನ ಪ್ರಶ್ನೆ ಮಾಡ್ಕೊಳ್ಳೊದೂ ನಡದದ. ಇರಲಿ, ಆದರ ಈ ವೀಕೆಂಡಿನ್ಯಾಗ ಒಂದು ಸಣ್ಣ ಟಿಪ್ಪಣಿ ಬರೀಬೇಕು.

ಅಲ್ಲೀತನಕ ಈ ಕೆಳಗಿನ ಕನ್ನಡ ಪ್ರಯೋಗ ನೋಡ್ರಿ. ಇವನ್ನ ಜಗನ್ನಾಥದಾಸರು ಹರಿಕಥಾಮೃತಸಾರದಾಗ ಬಳಸ್ಯಾರ. ಹಂಗ ನೋಡಿದ್ರ ಹರಿಕಥಾಮೃತಸಾರದಾಗ ಬೇಕಾದಷ್ಟು ಸಂಸ್ಕೃತ ಪದ ಅವ. ಜೊತೀಗೆ ಎಷ್ಟು ಛೊಲೊ ಕನ್ನಡ ಬಳಸ್ಯಾರ ನೋಡ್ರಿ.

ಕಾಡುತ್ತವೆ ...........

ಹೀಗೇ..ಹೊರಟು ನಿಂತಾಗ
ಕಣ್ಣಾಲಿಗಳು ತುಂಬಿ ಬಂದು
ಭರವಸೆ ಮಾತಾಡಿದಾಗ
ಕಾಡುತ್ತವೆ ನೆನಪುಗಳು,

ಅಪೂರ್ಣ ಕನಸೊಂದು ಕಾಡಿದಾಗ
ನನ್ನೆಲ್ಲ ಯತ್ನ ಸೋತುಹೋಗಿ
ಅರೆಬರೆ ನಿದ್ದೆಯಲ್ಲಿ ಬರಿ
ಕಾಡುತ್ತವೆ ನೆನೆಪುಗಳು,

ರೈಲು ಹುಚ್ಚೆದ್ದು ಓಡಿದಾಗ
ನನಗೆಲ್ಲೋ ದಿಕ್ಕು ತಪ್ಪಿದಂತಾಗಿ
ದೂರ ಅನಂತವಾದಾಗ, ಬೇಸತ್ತು
ಕಾಡುತ್ತವೆ ನೆನಪುಗಳು,

ಯಾರೋ ನೋವ ಆಲಂಗಿಸಿ

ನಾವಾಡುವ ನುಡಿಯೇ...ನಾವಿರುವ ತಾಣವೇ...

ಹೇಗಿತ್ತು ಕನ್ನಡನಾಡು. ದೇಶಭಕ್ತಿಯಲ್ಲಿ ನಂ.೧ ಆಗಿತ್ತು.

ಮಲಯಾಳಿಗಳು,ತೆಲುಗರು,ತಮಿಳರು ಬಂದಾಗ ಬೀದಿ ಪಕ್ಕದ ಜಿನಸಿ ಅಂಗಡಿಯಿಂದ ಹಿಡಿದು ಗಣಿ, ಕಾಡು,ನಾಡೆಲ್ಲಾ ಅವರ ಕೈಗೊಪ್ಪಿಸಿದರು.

ಮಾರ್ವಾಡಿಗಳು,ಕಾಶ್ಮೀರಿಗಳು ಬಿಡಿ,ನೇಪಾಳಿ,ಬಾಂಗ್ಲಾ,ಟಿಬೆಟಿಯನ್ನರನ್ನೂ ತುಂಬು ಹೃದಯದಿಂದ ಸ್ವಾಗತಿಸಿದರು.

"ಪ್ರಥಮ ಚುಂಬನ೦, ದಂತ ಭಗ್ನಂ"

ಲಲಿತ ಪ್ರಬಂಧ
"ಪ್ರಥಮ ಚುಂಬನ೦, ದಂತ ಭಗ್ನಂ"

ನಾನು ಪೇಚಿಗೆ ಬಿದ್ದ ಪ್ರಸಂಗವೇ, ಈ ಲಲಿತ ಪ್ರಬಂಧದ ವಿಷಯ. ನಾನು ಖುದ್ದಾಗಿ

ಅನುಭವಿಸಿದ ಪೇಚಾಟವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಯಾವಾಗಲೂ

ಬೇರೆಯವರ ಮೇಲೆ ಕಾಮಿಡಿ ಬರೆಯುವುದು ಸುಲಭ. ಆದರೆ ಆ ಕಾಮಿಡಿಯ ಕುರಿ ನಾವೇ ಆದಾಗ , ಆ

"ಪರಿಸರ (ಅ)ಪ್ರಜ್ಞೆ"

ಕವನ

"ಪರಿಸರ (ಅ)ಪ್ರಜ್ಞೆ"

 

|| ದುಷ್ಟ ಮನುಜನ ಪ್ರಕೋಪಕೆ ಬಲಿಯಾಗಿ
ಅಳಿದವು ತರುಲತಾದಿಗಳು
ಉರುಳಿದವು ದೈತ್ಯವೃಕ್ಷಸ೦ಕುಲಗಳು
ಬತ್ತಿದವು ಕೆರೆನದಿಜಲಪಾತಗಳು
ನಶಿಸಿದವು ಜೀವಕೋಟಿಗಳು ||

|| ಅಡೆತಡೆಗಳಿಲ್ಲವೇ?.......ಈ ಹುಲುಮಾನವನಾಸೆಗೆ
ಶೂನ್ಯದೆಡೆಗೆ ಕ್ರಮಿಸುವ ಹಾದಿ ಇದು
ಅಳಿದರೂ ಅಳಿಯದ ಆತ೦ಕಕಾರಿ ನಿರ್ಲಜ್ಜನಿವನು
ಉಳಿಯಗೊಡದೆ ಸಮತೋಲನ ಪ್ರಕೃತಿಯ
ಜೀವಕುಲ ನಾಶ ಮಾಡುವ ಪಾಪಿಯಾಗಿಹನು ||

ಪ್ರಶ್ನೆ

ಎಲ್ಲ ಮರೆತ ಮೇಲೆ..
ಮನಸು ಮುರಿದ ಮೇಲೆ..
ಕಣ್ಣ ಪಸೆ ಆರಿದ ಮೇಲೆ..
ಧುತ್ತೆಂದು ಬಂದು ನಿಂತು,
ಮತ್ತದೇ ನಗು..ನೋಟ..ಮಾತು..
ಮಾಯ....(?)ಮೋಹ..(?)
ಗೆದ್ದೆನೆಂದುಕೊಳ್ಳುವಾಗಲೇ ಸೋಲು..
ಅಥವಾ ಇದೇ ಗೆಲುವಾ?