ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವ್ಯಾಸರಾಯ ಬಲ್ಲಾಳರು ನಮ್ಮನಗಲಿದರು!

ವ್ಯಾಸರಾಯ ಬಲ್ಲ್ಲಾಳರು ಮುಂದಿನ ವರ್ಷದವರೆಗೆ ಕಾಯಲಿಲ್ಲ. ನಾವು ಮುಂದಿನ ವರ್ಷ ಅವರಿಗೆ ಸಾಹಿತ್ಯ ಸಮ್ಮೆಳನದ ಅಧ್ಯಕ್ಷಗಿರಿಯನ್ನು ನೀಡುವ ಮೊದಲೇ ಅವರು ನಮ್ಮನ್ನು ಬಿಟ್ಟು ಕಾಣದ ದೂರದೂರಿಗೆ ಹೊರಟು ಹೋದರು.

ವ್ಯಾಸರಾಯರು ಹುಟ್ಟಿದ್ದು ೧.೧೨.೧೯೨೩. ಸ್ಠಳ ಉಡುಪಿಯ ಬಳಿಯ ಒಂದು ಸಣ್ಣ ಊರು. ತಂದೆ ನಿಡಂಬೂರು ರಾಮದಾಸ ಬಲ್ಲಾಳ. ತಾಯಿ ಕಲ್ಯಾಣಿ. ಇವರ ಹಿರಿಯ ಮಗ. ಮೆಟ್ರಿಕ್‍ವರೆಗೆ ಶಿಕ್ಷಣ. ಜಿಲ್ಲಾ ಬೋರ್ದ್ ಕಚೇರಿಯಲ್ಲಿ ಸ್ವಲ್ಪಕಾಲ ಕೆಲಸ. ನಂತರ ಮುಂಬಯಿಗೆ ಪಯಣ.

೧೯೪೪. ಕಾಲ್ಟೆಕ್ಸ್ ಸಂಸ್ಥೆಯಲ್ಲಿ ಕೆಲಸ. ೪೦ ವರ್ಷಗಳ ಸೇವೆ. ೧೯೮೪ರಲ್ಲಿ ನಿವೃತ್ತಿ.

ಮುಂಬಯಿಯಲ್ಲಿ ಯುವಕರು ‘ನುಡಿ‘ ಎಂಬ ಪ್ರತ್ರಿಕೆಯನ್ನು ನಡೆಸುತ್ತಿದ್ದರು. ೧೯೪೭. ಮೌಂಟ್ ಬ್ಯಾಟನ್ ಅವರ ಯೋಜನೆಯನ್ನು ವಿರೋಧಿಸಿ ಲೇಖನ. ಇದರಿಂದ ವ್ಯಾಸರಾಯರು ಜನಸಾಮಾನ್ಯರಗ ಮನದೊಡನೆ ಮುಂಬಯಿ ಸರ್ಕಾರದ ಗಮನವನ್ನೂ ಸೆಳೆದರು. ಮುಂದೆ ಇದರ ಸಂಪಾದಕತ್ವ. ಅಲ್ಲಿಂದ ಅವರ ಬರಹ ನಿರಂತರವಾಗಿ ಹರಿದು ಬಂದಿತು.

ಕಾದಂಬರಿಗಳು: ಅನುರಕ್ತೆ, ಆಕಾಶಕ್ಕೊಂದು ಕಂದೀಲು, ವಾತ್ಸಲ್ಯಪಥ, ಹೇಮಂತಗಾನ, ಬಂಡಾಯ, ಉತ್ತರಾಯಣ, ಹೆಜ್ಜೆ ಹಾಗೂ ಹೆಜ್ಜೆಗುರುತು. ಇವುಗಳಲ್ಲಿ ಅನುರಕ್ತೆ ಹಾಗೂ ವಾತ್ಸಲ್ಯಪಥ ಚಲನಚಿತ್ರಗಳಾದವು. ಬಂಡಾಯ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.

ನಮ್ಮವರನ್ನ ಹ್ಯಾಗೆ ನಂಬೋದು?

ಈ ಕೆಳಗೆ ತಿಳಿಸಿರುವ ಪ್ರಸಂಗ ನಾನು ಬ್ಯಾಂಕಿನ ಕಾರ್ಯ ನಿಮಿತ್ತ ಉತ್ತರ ಗುಜರಾತಿನ ಪಾಲನಪುರ ಎಂಬಲ್ಲಿ ಇದ್ದಾಗ ನಡೆದದ್ದು.

ಪಾಲನಪುರ ಒಂದು ಚಿಕ್ಕ ಜಿಲ್ಲಾ ಕೇಂದ್ರ. ಅಹ್ಮದಾಬಾದಿನಿಂದ ಸುಮಾರು ೧೪೦ ಕಿ.ಮಿ. ದೂರದಲ್ಲಿದೆ. ಅಲ್ಲಿಗೆ ತಲಪಬೇಕಾದರೆ ಅಹ್ಮದಾಬಾದ್ > ಮೆಹಸಾಣ > ಸಿದ್ದಪುರ (ಮಾತ್ಟ್ರುಗಯಾ) > ಪಾಲನಪುರ ಹೀಗೆ ಅಹ್ಮದಾಬಾದ್ > ದೆಹಲಿ ಮಾರ್ಗವಾಗಿ ಹೋಗಬೇಕು.

ಪ್ರೊ.ಕೆ. ರಾಮದಾಸ್ ಬಾಲ್ಯದ ಪುಟತೆರೆದ ವಿಲಿಯಂ

ಪ್ರೊ.ಕೆ.ರಾಮದಾಸ್ ಬಗ್ಗೆ ಅಥವಾ ಸ್ವತಃ ರಾಮದಾಸರೇ ಬರೆದ ಒಂದೂ ಪುಸ್ತಕವಿಲ್ಲ ಎನ್ನುವ ಕೊರತೆಯನ್ನು ತಮ್ಮದೇ ರೀತಿಯಲ್ಲಿ ನೀಗಿಸಿದ್ದಾರೆ ರಾಮದಾಸ್‌ರವರ ಬಾಲ್ಯ ಸಖ ಶ್ರೀ ವಿಲಿಯಂ.

ಪ್ರೀತಿಗೆ ಯಾವ ಇನ್ಸುರನ್ಸೂ ಇಲ್ಲಾರಿ!!

ಮತ್ತೊಂದು ವರುಷ ನಿನ್ನ ನೆನಪಿನಲ್ಲಿ ಕಳೆಯಿತು,ಸಾವೇ ಇರದ ಒಂದು ಜೀವಕ್ಕೆ ಪ್ರೀತಿ ಎಂಬುದು ಏನೋ ಒಂದು ಕಲಿಸಿ, ಎನೋ ಒಂದನ್ನು ಕಸಿದು೦ಕೊಂಡು ಅದನ್ನು ನಿಸ್ತೇಜವನ್ನಾಗಿ ಮಾಡಿ ಬಿಡುತ್ತದೆ.ನಾವು ಆಡ್ತಾ ಇರೊ ಮಾತು,ನಮ್ಮ ನಡವಳಿಕೆ, ನಮ್ಮ ಏಕಾಂಗಿತನ ಏಲ್ಲವೂ ಯಾವುದೋ ಒಂದು ಗಳಿಗೆಯಲ್ಲಿ ನಮ್ಮನ್ನು ನಾವು ಮರೆಯುವಂತೆ ಮಾಡುತ್ತದೆ.ನಿನ್ನ ನೆನಪು ಬಿರುಗಾಳಿಯಂತೆ ಬಳಿಯಲ್ಲಿ ಸುಳಿಯೂತಿದ್ದರೂ ಹೇಳಲು ಅದನ್ನು ಆಗ್ತಾ ಇಲ್ಲ.ಆದರೂ ಅದರಲ್ಲಿ ಏನೋ ಒಂದು ಸಂತೋಷ.ಎಲ್ಲಿ ಹೀಗೆ ನಿನ್ನ ನೆನಪಿನಲ್ಲಿ ಜೀವನ ಮಾಡಬಹುದಾ?,ದಡವೇ ಇಲ್ಲದ ನನ್ನ ಬದುಕನ್ನು ಯಾವುದಾದರೂ ಒಂದು ದಡಕ್ಕೆ ಸೇರಿಸಬಹುದಾ?.ಹೌದು ಅಂತ ಒಂದು ದೈರ್ಯ ಮನಸ್ಸಿನಿಂದ ಎದ್ದು,ಎಲ್ಲ ಸಾದ್ಯ ಮಾರಾಯ್ತಿ ಅಂತ ಕೂಗಿ ಹೆಳಬೇಕು ಅನ್ನುಸುತ್ತೆ,ಆದರೆ ಎದ್ದ ಕ್ಶಣದಲ್ಲಿಯೇ ಅಲ್ಲಿಯೇ ಕುಳಿತುಕೊಳ್ಳುತ್ತೇನೆ.ಜಗತ್ತು ನೋಡುವ ಬೆರಗು ಕಣ್ಣಿಗೆ ಯಾಕೋ ಹೆದರಿಕೆ.

ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

"ಪ್ರಸಾದ್" ಗೆ...ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

ಕನಸುಗಳ ಮಾತು ಮಧುರ

ಬಹುಷಃ ಬಹಳ ದಿನಗಳ ನಂತರ ಬೆಳಗ್ಗೆ ನಿದ್ದೆ ಮಾಡ್ತಾ ಇದ್ದೆ… ಮೊ’ಭಯ’ಲು ದರ ದರನೆ ನನ್ನ ಕಿವಿ ಹಿಡಿದು ಎಬ್ಬಿಸ್ತಾ ಇತ್ತು… ಅಮ್ಮನ ನೆನಪಾಗ್ತಾ ಇತ್ತು… ಚಿಕ್ಕವನಿದ್ದಾಗ ಕಿವಿ ಹಿಂಡಿ, ಪ್ರುಷ್ಟಕ್ಕೆ ತಿವಿದು ನನ್ನನ್ನೆಬ್ಬಿಸುವ ವ್ಯರ್ಥ ಪ್ರಯತ್ನ ಮಾಡ್ತಾ ಇದ್ದ ನೆನಪು ಹೊದಕೆಯೊಳಗೆ ತಿವಿದು ಬಂದು ಕಿವಿಯೊಳಗೆ ಹೊಕ್ಕು ನನ್ನೆದೆಯಲ್ಲಿ ಅದೇನನ್ನೋ ಹೇಳ್ತಾ ಇತ್ತು… ಇಲ್ಲ… ಇದೆಲ್ಲ ಬರೀ ಕನಸಲ್ಲ… ನೆನಪಿನ ಬುತ್ತಿಯಲ್ಲಿ ಬರೀ ಇಂತದ್ದೆ ಪುಟ್ಟ ಪುಟ್ಟ ತುತ್ತು… ತಿನ್ನೋದಕ್ಕೆ ಸಿಗದಿದ್ದರೂ ಮೆಲ್ಲೋದಕ್ಕೆ ಮನಸಿಗೇನೋ ಕಾತರ… ಅದೇನೋ… ಗೊತ್ತಿಲ್ಲ ಯಾಕೆ ಅಂತ… ಇದೀಗ ಪೆನ್ನು ಪೇಪರಿನ ಜಾಗವನ್ನು ಕಂಪ್ಯೂಟರಿನ ಕೀಲಿಮಣೆ, ಮೌಸ್, ತೆಳ್ಳಗಿನ ಪರದೆ ಆಕ್ರಮಿಸಿಕೊಂಡಿದೆ… ಹಾಗೇ ಕನಸಿನ ಜಾಗಕ್ಕೆ ನನ್ನ ಚಿಕ್ಕಂದಿನಿಂದ ನಾನು ಯಾವುದೇ alternative ಪದೆಯೋದ್ರಲ್ಲಿ ಸಫಲನಾಗಿಲ್ಲ… ಹೆ ಹೆ… ನಗಬೇಡಿ… ಕನಸಿಗೊಂದು ಬದಲಿ ವ್ಯವಸ್ಥೆ ಇದ್ದಿದ್ದರೆ ಮನಸಿಗೆಲ್ಲಿ ಕೆಲಸವಿರ್ತಿತ್ತು…

ಬರಹದ ಹಣೆ ಬರಹ…

ಬರಹದ ಹಣೆಬರಹ ಬರೆಯೋದಕ್ಕೆ ನಾನು ಬ್ರಹ್ಮ ಅಲ್ಲದೇ ಇದ್ರೂ ಈ ಬರಹವೆಂಬ ಬಾಳಿನ ಬಹುಮುಖ್ಯ ಕೊಂಡಿಯ ಬಗ್ಗೆ, ಅದರ ಹಿಂದಿನ ಕಥೆಗಳ ಬಗ್ಗೆ ಹಾಗೇ ಸುಮ್ಮನೇ ಕುಳಿತು ಯೋಚಿಸೋದನ್ನು ಮಾಡ್ತಾ ಮಾಡ್ತಾ ಹಾಗೇ ಸುಮಾರು ವರ್ಷಗಳೇ ಆಯಿತು ಅನ್ಸುತ್ತೆ… ಅದಕ್ಕೇ ಇರ್ಬೇಕು… ಈ ಬರಹದ ಹಣೆಬರಹ…. ಅದ್ರೆ ನನ್ನ ಬರಹಗಳ ಇತಿಹಾಸದಲ್ಲಿ ದೊಡ್ಡದೊಂದು ಬಿರುಕು…

ಮಿ. ಗರಗಸ ಮತ್ತು ಗಾಳಿಪಟದ ಹಾಡುಗಳು

ಇತ್ತೀಚಿನ ಹಾಡುಗಳಲ್ಲಿ ನನಗೆ ತುಂಬ ಹಿಡಿಸಿದ ಎರಡು ಹಾಡುಗಳು...

ಮಿ. ಗರಗಸ ಚಿತ್ರದ "ನವಿಲಿಗು" ಹಾಡಿಗೆ, ಗಿರಿಕನ್ಯೆ ಚಿತ್ರದ ಆಯ್ದ ಚಿತ್ರಗಳು
http://youtube.com/watch?v=KPkOU2nttU8
(ಸೊಲ್ಪ ಒಳ್ಳೆ ಸ್ಪೀಕರ್ಗಳಿದ್ದರೆ ಅದರಲ್ಲಿ ಕೇಳಿ ತಾಳೆ ಮತ್ತು ಬೇಸ್ ದನಿಗಳೇ ಈ ಹಾಡಿನ ರಸ)