ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಕ್ಕಳಿಗೆ ಮೊಬೈಲ್ ಫೋನ್ ಮಾರುವ ಜಾಹೀರಾತುಗಳಿಗೆ ಕೊನೆಗೂ ಕಡಿವಾಣ

ಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಪ್ರಚೋದಿಸುವ ಜಾಹೀರಾತುಗಳ ಬಗ್ಗೆ ಕೆಲ ವಾರಗಳ ಹಿಂದೆ ಬರೆದಿದ್ದೆನಷ್ಟೆ?

ಅಂತಹಾ ಜಾಹೀರಾತುಗಳ ಪ್ರಸಾರವನ್ನು ನಿರ್ಬಂಧಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆದೇಶವೊಂದನ್ನು ಹೊರಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿಂದು ವರದಿಗಳಿವೆ.

ಇಲ್ಲಿ ನೋಡಿ:

ಗಣ್ಯರ ಖಾಸಗಿ ಬದುಕು ಸಾರ್ವಜನಿಕರ ಆಸ್ತಿಯೇ?

ಇತ್ತೀಚಿಗೆ ಈ ಪ್ರಶ್ನೆ ನನ್ನನ್ನು ಅಪಾರವಾಗಿ ಕಾಡುತ್ತಿದೆ.
ಗಣ್ಯರ ಖಾಸಗಿ ಬದುಕನ್ನು ಬೀದಿಗೆ ಎಳೆದು ವರ್ಣರಂಜಿತವಾಗಿ ಬರೆಯುವ ಹಕ್ಕು ಮಾಧ್ಯಮದವರಿಗೆ ಯಾರು ಕೊಟ್ಟರು?
ಬೆಂದ ಮನೆಯಲ್ಲಿ ಸುದ್ದಿ ಎಂಬ ಬೇಳೆ ಬೇಯಿಸಿಕೊಳ್ಳುವ ಇವರಿಗೆ ಏನೆನ್ನಬೇಕು

ಏನಿದು 'ಅದಿ'?

ಈ ಪದಬಳಕೆಗಳನ್ನು ಗಮನಿಸಿ

೧. ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಎನ್ನ ಕರುಣದಿ ಕಾಯೋ ಮಾದೇಸ್ವರ (ಕರುಣದಿ =ಕರುಣೆಯಿಂದ)
೨. ಸಕ್ಕದ ಕಬ್ಬಿಣದ ಕಡಲೆ, ಕನ್ನಡ ಸುಲಿದಬಾಳೆಹಣ್ಣಿನಂದದಿ( ಬಾಳೆಹಣ್ಣಿನಂದದಿ = ಬಾಳೆಹಣ್ಣಿನತರ)


ಈ 'ಅದಿ' ಸಂದರ್ಬಕ್ಕೆ ತಕ್ಕಂತೆ ಅರಿತ ಯತ್ವಾಸ ಉಂಟಾಗುತ್ತಾ?

ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

ನಾಡಿನ ಹೆಮ್ಮೆಯ? ಪತ್ರಿಕೆ ಎಂದು ಹೇಳಿಕೊಳ್ಳುವ ಪತ್ರಿಕೆಯ ಸಿನಿಮಾ ವಿಮರ್ಶೆಯಲ್ಲಿ ದಶಾವತಾರಂ ನ ವಿಮರ್ಶೆಯಲ್ಲಿ 'ಆ' ವಿಮರ್ಶಕನ ವಿಮರ್ಶೆ ಕುರಿತು 'ಈ' ವಿಮರ್ಶೆ.

ಒಂದು ಕೆಟ್ಟ ದಾಸರ ಪದ

ಕೇಳೋ ಸಚ್ಚರಿತ, ಮನುಜಾ
ಧೃಡ ಭಕ್ತಿಯಿಂದಲಿ ಹರಿಯ ನೆನೆದರೆ ಪಡೆವ ಮೋಕ್ಷ ಸಾಕ್ಷಿ || ಮನುಜಾ
ಧೃಡ ಭಕ್ತಿಯಿಲ್ಲದೆ ಹರಿಯ ನೆನೆದರೆ ಪಡುವ ನರಕವೇ ಸಾಕ್ಷಿ || ಮನುಜಾ ಕೇಳೋ ಸಚ್ಚರಿತ

ಕನ್ಯಾದಾನವ ಮಾಡಿದವರಿಗೆ ಹೆಣ್ಣಿನ ಭೋಗವೇ ಸಾಕ್ಷಿ
ಕನ್ಯಾದಾನವ ಮಾಡದವರಿಗೆ ಹೆಣ್ಣಿನ ಕಾಟವೇ ಸಾಕ್ಷಿ || ಕೇಳೋ

ಪಂಕ್ತಿ ವಂಚನೆ ಮಾಡಿದವರಿಗೆ ಜನ್ಮರೋಗವೇ ಸಾಕ್ಷಿ
ಪಂಕ್ತಿ ವಂಚನೆ ಮಾಡದವರಿಗೆ ಪುತ್ರ ಭಾಗ್ಯವೇ ಸಾಕ್ಷಿ || ಕೇಳೋ

ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

ನಾನು ತುಂಬಾ ದಿನಗಳಿಂದ ಕಾಯುತ್ತಿರುವ ಫೈರ್ಫಾಕ್ಸ್ 3 ನಾಳೆಯೇ ಸಿಗಲಿದೆ. ಇಷ್ಟು ದಿನಗಳಿಂದ ಫೈರ್ಫಾಕ್ಸ್ 2 ಬಳಸಿರುವ ಜನರಿಗೆ ಬರುವ ಹೊಸ ಆವೃತ್ತಿಯಲ್ಲಿ ಅನೇಕ ಸುಧಾರಣೆಗಳು ಸಿಗಲಿವೆ. ನಾಳೆ ಇದನ್ನು ಪ್ರಯತ್ನಿಸಿ
http://getfirefox.com/

ಐಟಿ ಬಾಳು

ಕಳೆಯುವೆ ನಾನು ಎಲ್ಲ ದಿನಗಳ
ಹಗಲೂ ರಾತ್ರಿ ದುಡಿಯುತಲಿ
ಉಳಿಸಿದ ನಿದ್ದೆಯ ಮಾಡಿ ಮುಗಿಸುವೆ
ಒಮ್ಮೆಲೆ ವಾರಾಂತ್ಯದಲಿ

ತಿಂಡಿಯೊ ಊಟವೊ ಯಾವುದು ತಿಳಿಯದು
ಮುಳುಗಿಹೆ ನಾ ಪ್ರಾಜೆಕ್ಟಿನಲಿ
ನನ್ನವರೆಲ್ಲರ ಗಮನವೆ ಇಲ್ಲ
ಪ್ರಾಜೆಕ್ಟೇ ತುಂಬಿದೆ ತಲೆಯಲ್ಲಿ

ಕ್ಲೈಂಟ್ ಮಹಾಶಯನ ಒಲುಮೆಗೆ
ನಾಟಕ ರಂಗವೆ ಸಜ್ಜಾಗಿದೆ ಇಲ್ಲಿ
ಕೃತಕ ನಗೆಯನು ಕೃತಕ ಜೀವನವನ್ನು

ನೀನಿರದೆ

ಎದೆ ಗರ್ಭಗುಡಿಯಲ್ಲಿ
ಕಣ್ಣೀರ ದೀಪ
ಕಣ್ತುಂಬ ತುಂಬಿರಲು
ಆ ನಿನ್ನ ರೂಪ
ನಾ ಅಳೆನು ಹೆದರಿ
ಕಣ್ಣೀರು ನೆಲಕುರುಳಿ
ಬಿಳುವುದು ಜಾರಿ
ಕರಿ ಕವಿದ ಮೋಡ
ಈ ಮನಸು ನೋಡ
ಕರಿ ಮುಗಿಲ ಹಿಂದೆ
ನೀನವಿತುಕೊಂಡೆ,
ಸವಿ ಸಂಜೆ ತಂಗಾಳಿ
ನೀನಿರದೆ ನಾ ನೆರಳಿ
ಆ ನಿನ್ನ ನೆನಪಲ್ಲಿ
ಮಾಸಗಳೆ ಉರುಳಿ
ಎಕಾಂಗಿ ನಾನೀಗ
ಉಳಿಗಾಲ ನನಗುಂಟೆ?