ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

ನಾನು ತುಂಬಾ ದಿನಗಳಿಂದ ಕಾಯುತ್ತಿರುವ ಫೈರ್ಫಾಕ್ಸ್ 3 ನಾಳೆಯೇ ಸಿಗಲಿದೆ. ಇಷ್ಟು ದಿನಗಳಿಂದ ಫೈರ್ಫಾಕ್ಸ್ 2 ಬಳಸಿರುವ ಜನರಿಗೆ ಬರುವ ಹೊಸ ಆವೃತ್ತಿಯಲ್ಲಿ ಅನೇಕ ಸುಧಾರಣೆಗಳು ಸಿಗಲಿವೆ. ನಾಳೆ ಇದನ್ನು ಪ್ರಯತ್ನಿಸಿ
http://getfirefox.com/

ಅವರು ಹೊಸ ಗಿನ್ನೆಸ್ ದಾಖಲೆ ಸ್ಥಾಪಿಸುವ ಪ್ರಯತ್ನದಲ್ಲಿದ್ದಾರೆ - "ಒಂದೇ ದಿನದಲ್ಲಿ ಅತಿ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗುವ ತಂತ್ರಾಂಶ".

ನೀವೂ ಇದರಲ್ಲಿ ಪಾಲ್ಗೊಳ್ಳಬಹುದು. ಹಳೆಯ ಫೈರ್ಫಾಕ್ಸ್ ಬಳಸುತ್ತಿದ್ದಲ್ಲಿ, ಹೊಸದು ಡೌನ್ಲೋಡ್ ಮಾಡಿಕೊಳ್ಳಿ. ಇಲ್ಲಿಯವರೆಗೆ ಫೈರ್ಫಾಕ್ಸ್ ಬಳಸಿಲ್ಲವಾದರೆ ಒಮ್ಮೆ ಅದನ್ನು ಪ್ರಯತ್ನಿಸಿ ನೋಡಿ. ನೀವು ನಾಳೆಯೇ ಫೈರ್ಫಾಕ್ಸ್ ಮಾಡಿದರೆ, ಗಿನ್ನೆಸ್ ದಾಖಲೆಗೆ ಎಣಿಕೆ ಹೆಚ್ಚಾಗುತ್ತದೆ.

ನೀವು ಡೌನ್ಲೋಡ್ ಮಾಡಿಕೊಳ್ಳುವ ಇರಾದೆ ಇದ್ದಲ್ಲಿ, ನಿಮ್ಮ ಅನುಮೋದನೆ ಇಲ್ಲಿ ಸೂಚಿಸಬಹುದು. ಈಗಾಗಲೇ ಭಾರತದಿಂದ ಸುಮಾರು 26 ಸಾವಿರ ಜನ ಡೌನ್ಲೋಡ್ ಮಾಡಲು ಒಪ್ಪಿದ್ದಾರೆ.

http://www.spreadfirefox.com/en-US/worldrecord

ನಾನು ಕೆಲವು ದಿನಗಳಿಂದ ಫೈರ್ಫಾಕ್ಸ್ 3 ಬೀಟ ಉಪಯೋಗಿಸುತ್ತಿದ್ದೇನೆ. ನಾನು ಕಂಡ ಕೆಲ ಮಹತ್ವದ ಅಂಶಗಳು ಹೀಗಿವೆ:
1. ಹಳೆಯ ಆವೃತ್ತಿಗಿಂತ ತುಂಬಾ ಫಾಸ್ಟ್. ಮೆಮೊರಿ ಬಳಕೆ ತುಂಬಾ ಕಡಿಮೆ. 10 ಟ್ಯಾಬಗಳನ್ನು ಒಮ್ಮೆಲೆ ತೆರೆದರೂ ಏನೂ ತೊಂದರೆ ಕಾಣಲಿಲ್ಲ.
2. ಬುಕ್ ಮಾರ್ಕ್ ಗಳನ್ನು ಉಳಿಸುವಾಗ ಟ್ಯಾಗ್ ಸೇರಿಸಬಹುದು. ದಿನಕ್ಕೆ ಹತ್ತಾರು ಬುಕ್ ಮಾರ್ಕ್ ಉಳಿಸುವ ನನಗೆ ಬೇಕಾದ ಪುಟ ಹುಡುಕಲು ತುಂಬಾ ಸರಳ.

Rating
No votes yet

Comments