ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....
ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....
ನಾಡಿನ ಹೆಮ್ಮೆಯ? ಪತ್ರಿಕೆ ಎಂದು ಹೇಳಿಕೊಳ್ಳುವ ಪತ್ರಿಕೆಯ ಸಿನಿಮಾ ವಿಮರ್ಶೆಯಲ್ಲಿ ದಶಾವತಾರಂ ನ ವಿಮರ್ಶೆಯಲ್ಲಿ 'ಆ' ವಿಮರ್ಶಕನ ವಿಮರ್ಶೆ ಕುರಿತು 'ಈ' ವಿಮರ್ಶೆ.
ಒಬ್ಬ ಪ್ರತಿಬಾನ್ವಿತ ನಟ, ಕಥೆಗಾರ, ನಿರ್ದೇಶಕ, ತಂತ್ರಜ್ನ ಸಿನಿಮಾವನ್ನು ವಿಮರ್ಶಿಸುವಾಗ, ವಿಮರ್ಶಕನಿಗಿರಬೇಕಾದ ಸೂಕ್ಷ್ಮ ಗ್ರಹಿಕೆ ಇಲ್ಲವಾದಾಗ ಮಾತ್ರ ಪ್ರತಿಭೆಗೆ 'ಕ್ಲಾಸ್'ಎಂಬ ಗ್ರೇಡ್ ಕೊಡುವ 'ವಿಮರ್ಶೆ'..?ಗಳನ್ನು ನಾಡಿನ
'ಹೆಮ್ಮೆ'..?ಯ ಪತ್ರಿಕೆಗಳಲ್ಲಿ ಕಾಣಬಹುದೇನೊ.
ಬಹುಶ: ಈ 'ಥರ್ಡ್' ಕ್ಲಾಸಿಗೆ ಸೇರಿದ ಜನರಿಂದ ಮಾತ್ರ ಯಾವುದೇ ಸಿನಿಮಾವನ್ನು ನೂರು ದಿನಗಳು ಪೂರೈಸುವಂತೆ ಮಾಡುವ ಸಾಮರ್ಥ್ಯ ಇರುವುದು ಎನ್ನುವ ವಿಷಯವನ್ನು ಈ 'ಕ್ಲಾಸ್' ವಿಮರ್ಶಕರು ಮರೆತಂತಿದೆ.
ಅದ್ರಲ್ಲೂ ಕಳೆದೆರೆಡು ಸಿನಿಮಾಗಳಿಂದ ಈ ಥರ್ಡ್ 'ಕ್ಲಾಸ್' ಅಬಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದ್ದ ಕಮಲ್ ಈ ಬಾರಿ ಅಲ್ಲೂ ಕಮಾಲ್ ಮಾಡಿ ಗೆದ್ದಿರುವುದು ಸಂತೋಷದ ವಿಷಯ.
ಸಿನಿಮಾ ಎಂಬುದೇ ಒಂದು ರೀತಿಯ 'ಮೇಕ್'ಅಪ್. ಅದರಲ್ಲೂ ಗಿಮಿಕ್ ನಂತಹ ಸೂಕ್ಷ್ಮಗಳನ್ನು ಹುಡುಕುವುದು ಈ ನಮ್ಮ 'ಹೆಮ್ಮೆ'ಯ ವಿಮರ್ಶಕ?ರಿಂದ ಮಾತ್ರ ಸಾದ್ಯವೇನೊ.ತಾಂತ್ರಿಕ ಹಾಗು ಖರ್ಚು ವೆಚ್ಚಗಳಿಂದ "ಅದ್ಬುತ" ಚಿತ್ರವನ್ನು ನಿರೀಕ್ಷಿಸುವ ವಿಮರ್ಶಕರಿಂದ ಒಂದು ನಿರ್ಮಿತ ಸಿನಿಮಾದಲ್ಲಿ 'ರೂಪು' ಪಡೆಯುವ 'ಮೂಲದ್ರವ್ಯ'ದ ಗ್ರಹಿಕೆ ನಿರೀಕ್ಷಿಸುವುದು ಯಾವಾಗ? ಅಕ್ಷಿಪಟಲದ ಮೇಲೆ ಮೂಡುವ ಚಿತ್ರವನ್ನು ತನ್ನ ಇಂದ್ರಿಯಾನುಬವಗಳಿಗೆ ಕೊಡುವ ಪ್ರಚೋದನೆಗಳಿಂದ ವಂಚಿತರನ್ನಾಗಿ ಮಾಡಿ ಅಕ್ಷಿಪಟಲದ ಮೂಡುವ ಪ್ರತಿಬಿಂಬವನ್ನು ಕುರಿತು ಮಾತಾಡುವ ಬರೆಯುವ ಈ ವಿಮರ್ಶಕರಿಗೆ, ಸಿನಿಮಾ ಎಂಬ ತಾಂತ್ರಿಕ ದ್ರುಶ್ಯ ಭಾಷೆಯು ಅವರಲ್ಲಿರುವ ಸಿದ್ದಮಾನದಂಡವೆಂಬ ಕನ್ನಡಕ ಕಳಚಿ ಗ್ರಹಿಸಿದಾಗ ಮಾತ್ರ ಸಿನಿಮಾದಲ್ಲಿರುವ ಸೂಕ್ಷ್ಮ ವಿಷಯಗಳು ಅನುಭವಕ್ಕೆ ಬರುತ್ತವೆ.
ಉದಾ;ಈ ವಿಮರ್ಶಕರು ಕಥೆ ವಿವರಿಸುವ(ಬಹುಶ: ಅದನ್ನೆ ಅವರು ವಿಮರ್ಶೆ ಎಂದು ತಿಳಿದಿದ್ದಾರೇನೊ) ಸಮಯದಲ್ಲಿ ಒಂದು ವಾಕ್ಯ ಹೇಳುತ್ತಾರೆ"ಸಣ್ಣದೊಂದು ಚಾಕೊಲೇಟಿನಂತಿರುವ 'ಆ' ಜೈವಿಕ ಅಸ್ತ್ರ ಕೊರಿಯರ್ ನಿಂದ ವಿಮಾನ ಏರುತ್ತದೆ".ಕಥಾಂಶವೇನೊ ಇಷ್ಟೇ ಇರಬಹುದು(ಅವರ ದ್ರುಷ್ಟಿಯಲ್ಲಿ) ಆದ್ರೆ ಜೈವಿಕ ಅಸ್ತ್ರದ ಬಗ್ಗೆ ಇನ್ನೂ ನಮ್ಮ ಬಹುತೇಕ ಭಾರತದಲ್ಲಿನ ಜನರಿಗೆ "ಅಸ್ತ್ರ" ಹಾಗು ಅದರ "ಪರಿಣಾಮ"ಗಳ ಕುರಿತು ಅರಿವಿಲ್ಲದ ಸಮಯದಲ್ಲಿ, 'ಸೂಕ್ಷ್ಮವಾಗಿ' ಹಾಗು 'ಸರಳವಾಗಿ' ವಿವರಿಸುವಲ್ಲಿ ಒಬ್ಬ ಜವಾಬ್ದಾರಿಯುತ ಕ್ಸಥೆಗಾರ ಹಾಗು ಕಲಾವಿದನಾಗಿ ಕಮಲ್ ಗೆದ್ದಿರುವುದನ್ನು ಥಿಯೇಟರ್ ನಿಂದ ಹೊರಬಂದ ಪ್ರೇಕ್ಷಕ ಮತ್ತೊಬ್ಬ ಪ್ರೇಕ್ಷಕನೊಂದಿಗೆ ಚರ್ಚಿಸುವಾಗ ಕಾಣಬಹುದು.
ಆದ್ರೆ ನಮ್ಮ'ಈ' ವಿಮರ್ಶಕರಿಗೆ ಈ ಸೂಕ್ಷ್ಮ ವಿಷಯ ಬರೀ "ಆ" ಅಷ್ಟೇ.
ಮತ್ತೊಂದು ಉದಾ: ಜೈವಿಕ ಅಸ್ತ್ರ ಕದಿಯುವ ಕಮಲ್ , ಅವನನ್ನು ಹಿಡಿಯಲು ಸಿ.ಐ.ಎ ಏಜಂಟ್ ಬೆನ್ನು ಬೀಳುತ್ತಾನೆ.ಅಲ್ಲಿಂದ ಆRಅಂಭವಾಗುತ್ತದೆ ಕಳ್ಳ ಪೋಲೀಸ್ ಆಟ.ಕಥೆಯೇನೊ ಇಷ್ಟೇ (?)ಆದರೆ ಇಲ್ಲಿ ವಿಭಿನ್ನ ಪಾತ್ರಗಳ ಮೂಲಕ ಭಾರತದ (ಕೆಲವು) ಅಧಿಕಾರಿಗಳಲ್ಲಿರುವ ಅಸಡ್ಡೆ, ಧರ್ಮ, ಭಾಷೆ ಎಂಬ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಅತ್ಯಂತ ಜಾಣ್ಮೆಯಿಂದ"ಯಾರಿಗು ನೋವಾಗದಂತೆ"ಹಾಸ್ಯಲೇಪನದೊಂದಿಗೆ ತೀಕ್ಷ್ಣವಾಗಿ ಹೇಳುವುದರ ಮೂಲಕ ತಾನೊಬ್ಬ ಜವಾಬ್ದಾರಿಯುತ ಕಥೆಗಾರ ಎಂದು ನಿರೂಪಿಸುತ್ತಾನೆ.
ಗ್ರಾಫಿಕ್ಸ್ ಗುಂಗು ಹಿಡಿಸಲ್ಲ ಎಂದು ಹೇಳುತ್ತಾ ಸುನಾಮಿಯ ಗ್ರಾಫಿಕ್ಸ್ ನ ದ್ರುಶ್ಯ ವೈಭವಕ್ಕೆ ಮಾತ್ರ ಸೀಮಿತವಾದ ಇವರ ದ್ರುಶ್ಯ ಗ್ರಹಿಕೆ ಸೀಮಿತವಾದ ದ್ರುಶ್ಯಗಳನ್ನು ಮಾತ್ರ 'ಹೊಗಳುತ್ತಾರೆ'?.ಆ ದ್ರುಷ್ಟಿಕೋನದಿಂದ ನೋಡುವುದಾದರೆ ಬಹುತೇಕ ಸಿನಿಮಾವು ಗ್ರಾಫಿಕ್ಸ್ ನಿಂದಲೇ ನಿರ್ಮಾಣವಾದರೂ ಅದು ಅರಿವಿಗೆ ಬರುವುದಿಲ್ಲವೆಂದರೆ ಆ ದ್ರುಶ್ಯಗಳು ಅಷ್ಟು ಉತ್ತಮವಾಗಿ ಮೂಡಿಬಂದಿದೆ ಎಂದೇ ಅರ್ಥವಲ್ಲವೇ.
ಸಿನಿಮಾ ಪರದೆಯ ಮೇಲೆ ನಡೆಯುವ ವಿಚಾರಗಳನ್ನು ಗ್ರಹಿಸದೆ,
' ಮೇಕಪ್ ನಿಂದಲೇ ಗಿಮಿಕ್ ಮಾಡಲು ಹೋಗಿದ್ದಾರೆ. ಈ ರೀತಿ ಮಾಡುವುದಿದ್ದರೆ ಹತ್ತೇನು?ಸಿನಿಮಾದ ಎಲ್ಲಾ ಪಾತ್ರಗಳನ್ನು ಒಬ್ಬನೇ ನಿಭಾಯಿಸಿ ನೀರು ಕುಡಿಯಬಹುದು.ಅದಕ್ಕೆ ಕಮಲ್ ಹಾಸನ್ ಅವರೇ ಬೇಕಿರಲಿಲ್ಲ. ದಾಖಲೆಗಾಗಿ ಇಂಥದ್ದನ್ನು ಮಾಡಿದರೆ ಹೇಗಿರುತ್ತದೆಯೊ ಹಾಗಿದೆ ಈ ಅವತಾರ.'
ಎಂದು ಬರೆಯುವುದರ ಮೂಲಕ, ಕಮಲ್ ರ ಪ್ರತಿಭೆಯನ್ನು ಗುರುತಿಸಲಾಗದ ತಾವು ಎಂಥ ದಡ್ಡರೆಂದು ತಾವೇ ತೋರಿಸಿಕೊಂಡಿದ್ದಾರೆ.
ದಾಖಲೆಯ ವಿಷಯಕ್ಕೆ ಬಂದರೆ ಅವರ ಹೆಸರಲ್ಲಿರುವ ದಾಖಲೆಗಳನ್ನು ಮುರಿಯಲು ಇನ್ನೊಬ್ಬ ಕಮಲ್ ಹಾಸನ್ ಹುಟ್ಟಿಬರಬೇಕೆ ಹೊರತು ಈಗಿನ ತಲೆಮಾರಿಗೆಲ್ಲಾ ಅದು ಕನಸಿನ ಮಾತೆ ಸರಿ.
ನಲವತ್ತು ಚಿಲ್ಲರೆ ವಯಸ್ಸಿನಲ್ಲಿ ಬರೀ ನಟನೆಯನ್ನು ಮಾತ್ರ ಮಾಡುವ ಶಾರುಖ್ ನನ್ನು ಹೊಗಳುವ ಮಂದಿಗೆ, ಐವತ್ತೈದರ ಗಡಿ ದಾಟಿದ್ದರೂ ಇನ್ನೂ ಚಿರಯುವಕನಂತೆ ನಟನೆ,ಕಥೆ,ನಿರ್ದೇಶನ ಎಂದು ಪ್ರಯೋಗಾತ್ಮಕ ಸ್ಪರ್ಧೆಗೆ ಇಳಿದಿರುವ ಕಮಲ್ ಅರ್ಥವಾಗುವುದಾದರು ಹೇಗೆ. ಈ ವಿಮರ್ಶಕ ಬರೆದಂತೆ ಒಬ್ಬ ಚಿತ್ರಕಥೆಗಾರನಿಗೆ ಎನು ಹೇಳಬೇಕು ಎನ್ನುವುದು ಗೊತ್ತಾಗದಾಗ ಈ ರೀತಿಯಾಗುತ್ತದೆ , ಎನ್ನುವುದು ಸರಿಯಲ್ಲ. ಯಾಕೆಂದರೆ ಕಮಲ್ ಗೆ ಗೊತ್ತಿದೆ ತಾನೇನು ಹೇಳುತ್ತಿದ್ದೇನೆಂದು. ಅದು ಇವರಿಗೆ ಅರ್ಥವಾದರೆ ಸಾಕು.
ತನ್ನ ನಟನಾ ವೃತ್ತಿಯ ಅನುಭವದಿಂದ ಮಾತ್ರ ಕಮಲ್ ಗೆ ಧರ್ಮದ ವಿಷಯದಲ್ಲಿ ಎಲ್ಲೂ ಪ್ರಚೋದನೆಗೆ ಒಳಗಾಗದಂತೆ 12ನೆಯ ಶತಮಾನದಲ್ಲಿ ನಡೆದಿರಬಹುದಾದ ಶೈವರಿಗೂ ಮತ್ತು ವೈಷ್ಣವರಿಗೂ ನಡೆದಂತಹ ಗಲಭೆ(?)ಗಳನ್ನು ಕಲೆಯ ಅಭಿವ್ಯಕ್ತಿಯೊಳಗೆ ತರಲು ಸಾದ್ಯವಾಗಿರುವುದು.
ಒಂದು ವಿಶಿಷ್ಠ ಕಥೆಯ ನಿರೂಪಣೆಯಲ್ಲಿ ನೋಡುವ ಪ್ರೇಕ್ಷಕನಿಗೆ ಕಥೆಯ ಪಾತ್ರದಲ್ಲಿ ಕಾಣುವ ವ್ಯಕ್ತಿ ವಾಸ್ತವವಾಗಿ ನಟಿಸುತ್ತಿದ್ದಾನೆ ಎಂಬ ಅನುಭವ ನೀಡುತ್ತಲೇ ಅದು ಕಥೆಯ ಪಾತ್ರವೂ ಹೌದು ಎಂದು ನಂಬಿಸುವ ಕಮಲ್ ದಶಾವತಾರಂ ರಿಯಲ್ ಕಥೆಯಲ್ಲ ನಿಜ, ಆದ್ರೆ ನಿಜವಾದ ಸಿನಿಮಾ ಪರಿಭಾಷೆಯ "ಮ್ಯಾಜಿಕ್ ರಿಯಾಲಿಸಂ" ಅಂಶಗಳನ್ನು ಹೊಂದಿರುವ ಅದ್ಭುತ ಸಿನಿಮಾ ಎಂದು ಸಾದಿಸಿ ತೋರಿಸಿದ್ದಾನೆ .
ನಿಜವಾಗಿಯೂ " ಹ್ಯಾಟ್ಸಪ್ ಟು ಹಿಮ್".