ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನವರಾತ್ರಿಯ ಎರಡನೇ ದಿನ

ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.

ಮೈಸೂರರಸರು ದಸರೆಯ ಆಚರಣೆಯೊಂದರಲ್ಲೇ ಅಲ್ಲ - ಅವರು ವಿವಿಧ ಕಲಾಪ್ರಕಾರಗಳಿಗೆ ಕೊಡುತ್ತಿದ್ದ ಪ್ರೋತ್ಸಾಹದಲ್ಲೂ ಆ ಕಾಲದ ರಾಜ್ಯಗಳ ಮುಂಚೂಣಿಯಲ್ಲಿದ್ದರು. ೧೮-೧೯ ನೇ ಶತಮಾನಗಳಲ್ಲಿ ಮೈಸೂರು ವೀಣೆಯ ಬೆಡಗೆಂದಾಗುವುದಕ್ಕೂ ಇದೇ ಕಾರಣ. ಹಲವಾರು ವಿದ್ವಾಂಸರು ಹಾಗೇ ಮೈಸೂರರಸರ ಆಶ್ರಯ ಅರಸಿ ಬಂದದ್ದೂ ಉಂಟು. ಹಾಗೆ ಬಂದವರಲ್ಲಿ, ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಪ್ರಮುಖರು.
ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿ ಇವರು ಬಂದದ್ದರ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯೊಂದಿದೆ. ಅದೇನೋ, ಮುತ್ತಯ್ಯ ಭಾಗವತರಿಗೆ ಮಹಾರಾಜರ ಮುಂದೆ ಕಚೇರಿ ಕೊಡುವ ಅವಕಾಶ ಸಿಕ್ಕ ದಿನ ಅವರ ಗಂಟಲಿಗೆ ಏನೋ ತೊಂದರೆಯಾಗಿ, ಕಾರ್ಯಕ್ರಮ ಹೆಚ್ಚು ಕಳೆಕಟ್ಟಲಿಲ್ಲ. ಸಾಧಾರಣವಾಗಿ, ಅರಮನೆಯಲ್ಲಿ ಹಾಡುವ ವಿದ್ವಾಂಸರಿಗೆ, ಅವರಿಗೆ ತಕ್ಕ ಮರ್ಯಾದೆ ಕೊಡಲಾಗುತ್ತಿತ್ತು. ಆ ರೀತಿ ಅವರಿಗೂ ಮರ್ಯಾದೆ ಮಾಡಿ ಕಳಿಸಲಾಯಿತಂತೆ. ಭಾಗವತರಿಗೆ ಸ್ವಲ್ಪ ನಿರಾಸೆಯೇ ಆಯಿತು. ನಂತರ ಕೆಲವು ದಿನಗಳ ನಂತರ, ಅವರು ಚಾಮುಂಡಿ ಬೆಟ್ಟದ ಮೇಲೆ, ದೇವಾಲಯದಲ್ಲಿ ತಮ್ಮ ಪಾಡಿಗೆ ಹಾಡಿಕೊಳ್ಳುತ್ತಿದ್ದಾಗ ಆ ದಿನ ದೇವಿಯ ದರ್ಶನಕ್ಕೆ ಬಂದ ಒಡೆಯರಿಗೆ ಅದು ಕೇಳಿ, ಅವರ ಮೇಲೆ ಬಂದಿದ್ದ ಅಭಿಪ್ರಾಯ ಬದಲಾಯಿತಂತೆ. ನಂತರ ಅವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಂಡರಂತೆ. ಇದು ನಡೆದದ್ದು ೧೯೨೭ರಲ್ಲಿ.

ರಾಜರು ತಮ್ಮ ಇಷ್ಟದೇವಿ ಮೈಸೂರಿನ ನಗರ ದೇವತೆ, ಚಾಮುಂಡಿಯ ಮೇಲೆ ೧೦೮ ಕೃತಿಗಳನ್ನು ರಚಿಸಲು ಕೇಳಿದರಂತೆ, ಅಂತೆಯೇ ಮುತ್ತಯ್ಯ ಭಾಗವತರು ೧೦೮ ಕೃತಿಗಳನ್ನು ರಚಿಸಿದರು - ಕನ್ನಡದಲ್ಲಿರುವ ಈ ಕೃತಿಗಳ ಸಾಹಿತ್ಯವನ್ನು ದೇವೋತ್ತಮ ಜೋಯಿಸರೆಂಬುವರು ಬರೆದುಕೊಟ್ಟರಂತೆ.

ಹೀರೋ ಆಗುವುದು ಬಹಳಾ ಕಷ್ಟ, ಝೀರೋ ಬರೀ ಸುಲಭ.

ಸೌಂದರ್ಯ ವರ್ಷಗಳುರುಳಿದಂತೆ ಕಮ್ಮಿಯಾಗುತ್ತಾ ಹೋಗುವುದು ಸಾಮಾನ್ಯ.ಆದರೆ ಕೆಲವರಲ್ಲಿ ವಯಸ್ಸಾದಂತೆ ಸೌಂದರ್ಯ ವರ್ಧಿಸುತ್ತಾ ಹೋಗುವುದು.

ನಕ್ಷತ್ರ ದೆಸೆ

ಅದೊಂದು ನಕ್ಷತ್ರ. ಅನಂತವಾದ ವಿಶ್ವದ ಯಾವುದೋ ಮೂಲೆಯಲ್ಲಿ, ಕ್ಷಮಿಸಿ, ವಿಶ್ವಕ್ಕೆ ಮೂಲೆಯೆಂಬುದೇ ಇಲ್ಲವಲ್ಲ; ವಿಶ್ವದ ಯಾವುದೋ ಒಂದು ಕಡೆ ಹುಟ್ಟಿಕೊಂಡಿತ್ತು. ಅದರ ಹುಟ್ಟಿನಲ್ಲಿ ವಿಶೇಷವೇನಿರಲಿಲ್ಲ, ಬೇರೆಲ್ಲಾ ನಕ್ಷತ್ರಗಳು ಹುಟ್ಟಿದ ರೀತಿಯಲ್ಲೇ ಇದೂ ಹುಟ್ಟಿತ್ತು. ಅದು ಹುಟ್ಟಿದಾಗ ಹೆಸರು ಇಡುವವರು ಯಾರೂ ಇರಲಿಲ್ಲವೆಂದೋ ಏನೋ ಅದಕ್ಕೆ ಹೆಸರಿರಲಿಲ್ಲ.

ಅಗಲಿಕೆ

ಅಂದಳು ಗೆಳತಿ,
ಕಾಣದ ದೇಶಕೆ ವಲಸೆ
ಹೋಗುವ ಯೋಜನೆ,
ಸದ್ಯದಲ್ಲೇ.. ಇದೆಯೆಂದು..

ಓ! ಕೂಲ್, ಅಭಿನಂದನೆಗಳು
ಬಡಬಡಿಸ ಹತ್ತಿತ್ತು ಬಾಯಿ,
ಎಲ್ಲೋ ಎದ್ದ, ಕ್ಷೀಣ ದನಿಯ,
ಮರೆಮಾಚಲೇನೋ ಎಂಬಂತೆ..

ನಿಯಂತ್ರಣ ತಪ್ಪಿದಂತೆ, ಒಂದೆ ಸಮನೇ
ಕುಲುಕುತಿದ್ದವು ಕೈಗಳು, ಒಳಗಿದ್ದ ನಡುಕದ,
ವಿಜೃಂಭಣೆಯೇನೋ, ಎಂಬಂತೆ..

ಸಂತಸ, ಹೆಮ್ಮೆ ಸೂಚಿಸುತ್ತಿತ್ತು ಮೊಗ,
ಎಂದೆಂದೂ ಕಾಣದ ಕಾಂತಿಯ..

ನನ್ನೊಳಗೆ

ಏಕಾಂತದಲ್ಲೆಲ್ಲೋ.. ಕಾಡುವ ದನಿ..
ಯಾವುದೋ ಪಿಸುಮಾತು, ಮತ್ತಾವುದೋ ಸ್ವರ..
ಯಾರದೋ ಕೇಕೆ, ಮತ್ತಾರದೋ ಆಕ್ರಂದನ..

ಒಮ್ಮೆ, ಕಟ್ಟು ಬಿಚ್ಚಿದ ಅಶ್ವಗಳ ನಾಗಾಲೋಟದಂತೆ..
ಮತ್ತೊಮ್ಮೆ, ಯಾರೋ ಹಾಕಿದ ಲಯಬದ್ದ ತಾಳದಂತೆ..

ಎಷ್ಟೋ ಬಾರಿ.. ಮಲಗಿದ್ದಿದೆ, ಶಪಿಸಿ..
ಯಾವುದೀ ದರಿದ್ರ ದನಿಯೆಂದು..

ಬಹಳ ತಡವಾಯಿತೋ ಏನೋ.. ತಿಳಿದದ್ದು
ಈ ರೀತಿ ವರ್ತಿಸುವ ಹೃದಯ, ನನ್ನಲ್ಲೇ.. ಇದೆಯೆಂದು..