'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

ಬರಹ

ಚಂದಮಾಮ ಕಥೆಗಳಲ್ಲಿಯ ವಿಕ್ರಮ ಮತ್ತು ಬೇತಾಳ ಸೀರೀಸ್ [ಸೀರಿಯಸ್] ಅಲ್ಲ. ಕಥೆಗಳ ಪರಿಶ್ಕ್ರುತ ರೂಪ ಅಥವಾ ಮುಂದುವರೆದ

ರೂಪವೆನ್ನಬಹುದಾದ ನಮ್ಮ ಸಿನಿಮಾಗಳ ಮುಂದುವರೆದ ಭಾಗಗಳು ತಮ್ಮ ಹಿಂದಿನ ಸಿನಿಮಾಗಳಷ್ಟೇ ಯಶಸ್ವಿಯಾಗುವಲ್ಲಿ ಸದಾ

ಎಡುವುತ್ತಲೇ ಇರುವುದು ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ ರಾಮಗೋಪಾಲ್ ವರ್ಮಾ ನ ಬಹು ನಿರೀಕ್ಷಿತ ಚಿತ್ರ
"ಸರ್ಕಾರ್ ರಾಜ್"
ಬಂದ ಮೇಲೆ ಮತ್ತೊಮ್ಮೆ ಸಾಬೀತಾಗಿದೆ.
ಲಗೆ ರಹೋ ಮುನ್ನಾಭಾಯಿ ಕನ್ನಡದ ಸಾಂಗ್ಲಿಯಾನ ಭಾಗ 2 ಹಾಗು ಇನ್ನಿತರ ಕೆಲವು ಚಿತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಸಿನಿಮಾಗಳು ತಮ್ಮ ಹಿಂದಿನ ಯಶಸ್ಸನ್ನು ಪಡೆಯುವುದರಲ್ಲಿ ಸೋಲುತ್ತಲೇ ಇವೆ.
ಇದಕ್ಕೆ ಕಾರಣ ಕಥೆಯ ವಿಷಯದಲ್ಲಿ ಹೊಸತನ ಕಾಯ್ದುಕೊಳ್ಳದೆ ಇರುವುದು ಕಾರಣ ಎನ್ನಬಹುದೇನೊ.ಹಿಂದಿನ ಸರ್ಕಾರ್ ಸಿನಿಮಾದಲ್ಲಿ ಸರ್ಕಾರ್ ನ ಪ್ರಭಾವ ಶಕ್ತಿ ಗುಣ ಹಾಗು ಮನೆಯವರ ಸಹಕಾರಗಳನ್ನು ಒಟ್ಟಾರೆ ಕಥೆಯಲ್ಲಿ ಹಿಡಿದಿಡುವ ವರ್ಮಾ ಸಿನಿಮಾದ ಕೊನೆಯಲ್ಲಿ ಮಗನ ಸಹಕಾರದೊದಿಗೆ ಸರ್ಕಾರ್ ನ ಸಾಮ್ರಾಜ್ಯಕ್ಕೆ ಉತ್ತರಾದಿಕಾರಿಯನ್ನು ಕೊಡುವುದರ ಮೂಲಕ ಸಿನಿಮಾ ಮುಗಿಸುತ್ತಾನೆ.

ಇಲ್ಲಿ ಕಥೆಯನ್ನು ಮುಂದುವರೆಸುವ ಯಾವ ಸೂಚನೆಯನ್ನು ನೀಡದೆ ಕಥೆಯ ಪರಿದಿಯೊಳಗೆ ಸರ್ಕಾರನ ಶಕ್ತಿಯ ನಿರೂಪಣೆಯಲ್ಲಿ ಯಶಸ್ವಿಯಾಗುತ್ತಾನೆ.

ಭಾಗ2ರಲ್ಲಿ ಉತ್ತರಾದಿಕಾರಿಯ ದೂರಾಲೋಚನೆಗಳ ಮೂಲಕ ತಂದೆಯನ್ನು ಮೀರಿಸುತ್ತಾನೆ ಎನ್ನುವ ಹೊತ್ತಿಗೆ ಅವನನ್ನು ಕೊನೆಗಾಣಿಸಿ ಸರ್ಕಾರ್ ಗೆ ಸರ್ಕಾರ್ ಮಾತ್ರ ಉತ್ತರ ಎಂದು ನೋಡುವ ಪ್ರೇಕ್ಷಕನನ್ನು ಕಥೆಯ ಹಿಂದಕ್ಕೆ ಕರೆದುಕೊಂಡು ಹೊಗುತ್ತಾನೆ.
ಭಾಗ1ನ್ನು ನೋಡಿರುವ ಪ್ರೇಕ್ಷಕ ಮುಂದುವರಿದ ಭಾಗದಲ್ಲಿ ಹಿಂದೆ ನಿಲ್ಲಿಸಿದ ಭಾಗದಿಂದ ಮುಂದುವರೆಯಲು ಇಷ್ಟಪಡುತ್ತಾನೆ ಹೊರತು ಮತ್ತೆ ಮೊದಲಿನ ಜಾಗಕ್ಕೆ ಹಿಂದಿರುಗಲು ಅಲ್ಲ.

ಕಥೆಯಲ್ಲಿ ಸದಾ ಬೆಳೆಯುವ ಅಥವಾ ಕೂಡುವ ಅಂಶಗಳನ್ನು ಇಷ್ಟಪಡುವ ಪ್ರೇಕ್ಷಕ ಸರ್ಕಾರ್ ನಿಂದ ಸರ್ಕಾರ್ ರಾಜ್ ನಲ್ಲಿ ವ್ಯಕ್ತಿಯನ್ನು ಮೀರಿದ ಶಕ್ತಿಯನ್ನು ನೋಡಲು ಕಾತರಿಸುತ್ತನೆಯೇ ಹೊರತು ಶಕ್ತಿಯು ವ್ಯಕ್ತಿಗೆ ಕೇಂದ್ರಿಕ್ರುತವಾಗುವುದನಲ್ಲ. ಇಲ್ಲಿ ಶಕ್ತಿಯನ್ನು ತೋರಿಸಲು ವ್ಯಕ್ತಿಯ ಅವಶ್ಯಕತೆ ಇದ್ದರೂ ಸಹ ಅದು ಹಿಂದೆ ಕಂಡ ಸರ್ಕಾರ್ ನಿಂದ ಮುಂದುವರೆಯಲು ಇಚ್ಚಿಸುತ್ತಾನೆ.ಭಾಗ2ರಲ್ಲಿ ದ್ರುಶ್ಯಗಳಿಂದ ಉದ್ದೀಪನಗೊಳಿಸುತ್ತಾ ಪ್ರೇಕ್ಷಕನನ್ನು ಹಿಡಿದಿಡುಟ್ಟು ಸಾಗುತ್ತಾ ಕಥೆಯನ್ನು ಅರ್ಥ ಮಾಡಿಸುವಲ್ಲಿಗೆ ಬರುವಷ್ಟರಲ್ಲಿ ಸೋತಿದ್ದಾನೆ.