ಬದುಕು ಬವಣೆಯಾಗದಿರಲಿ
ಬದುಕನ್ನು ಬವಣೆಯೆಂದಿಣಸದಿರು
ಬವಣೆಪಟ್ಟರೂ ಜೀವಂತ ಹೋದವರುಂಟೆ?
ಸಂಕಟಗಳಿಗೆಲ್ಲ ಆಸೆಯೇ ಬೇರು
ಆಸೆಯ ಬಲೆಯಿಂದ ಪಾರಾದವರುಂಟೆ?
ತನ್ನೊಟ್ಟಿಗೆ ತಾನಾಗಿರು
ತಾನಾಗಿ ಎಲ್ಲ ದೊರೆವುದು
ತನ್ನಂಬುಗೆ ಇರಲಿ
ಅದು ಜಂಬ ಅನಿಸದಿರಲಿ
ಬದುಕಿದು ಒಡೆಯನ ತೇರು
ನಗುನಗುತಲೆ ಎಳೆಯುತಿರು.
- Read more about ಬದುಕು ಬವಣೆಯಾಗದಿರಲಿ
- 2 comments
- Log in or register to post comments