ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಡು

ಮಾನವ ಕಡಿದ ಕಾಡು
ಮಾಡಿದ ಅದನು ನಾಡು
ಬಿಟ್ಟನು ಅಲ್ಲಿ ಬೀಡು
ಕೊನೆಗುಂಟಾಯಿತು ಕ್ರೌಡು

ಭ್ರಮಿತ ಮನ

ಮೇಧಾವಿ ತಾನೆಂದು ಭ್ರಮಿಸಿತೆ ಮನ
ಮೆಚ್ಚಿಸ ಹೊರಟಿತೆ ಹಲವರನ್ನ
ವ್ಯರ್ಥ ಮಾಡಿತು ತನ್ನ ಸಮಯವನ್ನು
ಕಂಡುಕೊಳ್ಳಲಿಲ್ಲ ಬದುಕಿನ ಅರ್ಥವನ್ನ
ಯಾವಾಗ ಪಡೆಯುವುದು ಸಾರ್ಥಕತೆಯನ್ನ?

ಮಾರ್ಪಾಡು

ರೈಲು ಹೊರಟಾಗ
ಚಿಲಿಪಿಲಿ ನಗುವಿನ ಗೆಳತಿಯರು-
ತಮ್ಮ ಊರು ಬಂದಾಗ
ಮೌನ ತೊಟ್ಟು ಇಳಿದರೆ
ಕರೆದೊಯ್ಯಲು ಬಂದ ಗಂಡಂದಿರ ದನಿ ಮಾತ್ರ
ರೈಲಿನ ಶಿಳ್ಳೆಯ ಜತೆ
ಜಗಳಕ್ಕಿಳಿಯಿತು.

ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.

ಬ್ಲಾಗ್ ಎಂಬ ಬ್ಲಾಗಿಗೆ ಕನ್ನಡ ಪದ ಯಾವುದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದೆ.
ಏನು ಇರಬಹುದು.... ಕನ್ನಡ ಕಸ್ತೂರಿ ಡಾಟ್ ಕಾಮ್ ನಲ್ಲಿ ಕೂಡ ಸಿಗಲಿಲ್ಲ,ಬರಹ ಡಾಟ್ ಕಾಮ್ / ಕನ್ನಡ / ನಿಘಂಟು ಇಲ್ಲಿ ಕೂಡ ಸಿಗಲಿಲ್ಲ.ಎನು ಮಾಡೋದು ಅಂತ ಹಾಗೆ ಯೋಚ್ನೆ ಮಾಡ್ತಾ ಕುಳಿತಿರುವಾಗ ಹೊಳೆದ ಕೆಲವೇ ಅರ್ಥ ಗಳನ್ನ ನಿಮ್ಮ ಮುಂದೆ ಇಡ್ತಾ ಇದೀನಿ.

ನಾರಣಪ್ಪನವರ ಅಮೆರಿಕಾ ಪ್ರವಾಸಕಥನದ

ವಿಚಿತ್ರಾನ್ನದಲ್ಲಿ ಓದಿ ಮಜಾ ಮಾಡಿ! ನಕ್ಕು ಹಗುರಾಗಿ!

ಬೋರು ಹೊಡೆವುದು ಬೇಡವೆನ್ನುತ ವಾರದಾಕೊನೆ ಬಂದ ಕೂಡಲೆ ಕಾರಿನಲ್ಲಿಯೆ ಹೋಗಿ ಬರುವೆವು ಎಲ್ಲರೊಡಗೂಡಿ ನೀರು ಧುಮುಕುವ ಜಾಗ ಇರುವುದು ಆರು ಗಂಟೆಯ ಡ್ರೈವು ದೂರದಿ ನಾರಣಪ್ಪಗೆ ನೆನಪು ಬಂದಿತು ಜೋಗದಾ ಗುಂಡಿ ||

 

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
----------------------------------------

ಪುಟ್ಟದೊಂದು ಸರ್ಜರಿಯ ಕಾರಣಕ್ಕೆ, 'ಗೃಹಬಂಧನ'ದಲ್ಲಿರುವ ಈ ಅವಧಿಯಲ್ಲಿ
ಓಡಾಡುವಂತಿಲ್ಲ, ಅಲೆಯುವಂತಿಲ್ಲ. ಅಫ್ ಕೋರ್ಸ್, ಟೈಮ್ ಪಾಸ್ ಹೇಗಪ್ಪಾ ಎಂಬ ಸಮಸ್ಯೆ
ನನಗೆ ಮೊದಲಿನಿಂದಲೂ ಇಲ್ಲ. ನಾನು ಓದಲೇಬೇಕಾಗಿರುವ ಪುಸ್ತಕಗಳು, ಕೇಳಲೇಬೇಕಾಗಿರುವ

ನಾಸದೀಯ ಸೂಕ್ತ

ನಾಸದೀಯ ಸೂಕ್ತ ಎಂಬುದು ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಏಳು ಋಕ್ಕುಗಳ ಒಂದು ಭಾಗ.ನಾನು ವೇದಗಳನ್ನು ಓದಿದವನಲ್ಲ, ಕಲಿತವನಲ್ಲ. ಸಂಸ್ಕೃತದ ಪರಿಚಯವಿದ್ದರೂ, ವೇದಗಳನ್ನು ಪೂರ್ತಿ ಅರ್ಥಮಾಡಿಕೊಳ್ಳುವಷ್ಟು ಅರಿತಿಲ್ಲ. ಈ ಭಾಗದಲ್ಲಿ ನಾಸೀತ್, ನಾಸೀತ್ (ಇರಲಿಲ್ಲ, ಇರಲಿಲ್ಲ) ಎಂದು ಮತ್ತೆ ಮತ್ತೆ ಬರುವುದರಿಂದ, ಇದಕ್ಕೆ ನಾಸದೀಯ ಸೂಕ್ತವೆಂದು ಹೆಸರು ಎಂದು ಬಲ್ಲವರೊಬ್ಬರು ಹೇಳಿದ್ದನ್ನು ಕೇಳಿದ್ದೇನೆ.

ಈ ಭಾಗವನ್ನು, ಅದರ ಇಂಗ್ಲಿಷ್ ಅನುವಾದವನ್ನೂ ಕೆಲವೆಡೆಗಳಲ್ಲಿ ಓದಿದ್ದೆ. ಒಮ್ಮೆ ಕನ್ನಡದಲ್ಲಿ ಇದನ್ನು ತರ್ಜುಮೆ ಮಾಡೋಣವೆನ್ನಿಸಿತು.