ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಡೆಯೂರು ಸಿದ್ದಲಿಂಗೇಶ್ವರ

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನಲ್ಲಿರುವ, ಬೆಂಗಳೂರಿನಿಂದ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸುಮಾರು ೧೦೦ ಕಿ.ಮಿ. ದೂರದಲ್ಲಿರುವ ಯಡೆಯೂರು ತೀರ್ಥಕ್ಷೇತ್ರ ದರ್ಶನಾರ್ಥಿಗಳಿಗೆ, ಲಿಂಗಾಯತ ಸಮುದಾಯಕ್ಕೆ ಮುಖ್ಯವಾಗಿ, ಪ್ರಮುಖವಾದ ಯಾತ್ರಾಸ್ಥಳ.

ದಾಸ ಸಾಹಿತ್ಯ

ದಾಸ ಸಾಹಿತ್ಯದ ವಿಷಯದಲ್ಲಿ ಕನ್ನಡ ಸಾರಸ್ವತ ಲೋಕ ಬಹಳ ಶ್ರೀಮಂತವಾಗಿದೆ. ಸುಮಾರು ೧೩೦೦೦ ಕ್ಕೂ ಹೆಚ್ಚು ಕೀರ್ತನೆಗಳು, ೩೦೦೦ ಸುಳಾದಿಗಳು, ೫೦೦ ಉಗಾಭೋಗಗಳು ಇತ್ಯಾದಿ ಇದುವರೆಗೆ ದೊರೆತಿರುವ ಅಂಕಿ ಅಂಶಗಳು. ದಾಸಸಾಹಿತ್ಯ.ಆರ್ಗ್ ನಲ್ಲಿ ಇವೆಲ್ಲವನ್ನೂ ಶೇಖರಿಸಲಾಗಿದೆ ಎಂದು ಕೇಳಿದೆ, ಇದೊಂದು ಕರ್ನಾಟಕ ಸರ್ಕಾರದ ಯೋಜನೆ.

ಹೀಗೊಂದು ಸಂದರ್ಶನ

ಸಂದರ್ಶನ ಪ್ರಾರಂಭವಾಗಿತ್ತು. ಮೊದಲ ಅಭ್ಯರ್ಥಿಯನ್ನು ಒಳಗೆ ಕರೆದರು
ಸಂದರ್ಶಕ ೧ ಅಭ್ಯರ್ಥಿಗೆ: ಬನ್ನಿ, ಕುಳಿತುಕೊಳ್ಳಿ, ಭಾರತಕ್ಕೆ ಯಾವಾಗ ಸ್ವಾತಂತ್ರ್ಯ ಬಂತು ತಿಳಿಸುವಿರಾ?
ಅಭ್ಯರ್ಥಿ: ಸ್ವಾತಂತ್ರ್ಯಕ್ಕಾಗಿ ಬಹಳ ವರ್ಷಗಳಿಂದ ಹೋರಾಟ ನಡೆದಿತ್ತು, ಕೊನೆಗೆ ೧೯೪೭ರಲ್ಲಿ ಅದು ಫಲಪ್ರದವಾಯಿತು.

ಬಯಲು ಸೀಮೆ ಕಟ್ಟೆ ಪುರಾಣ

ನಮಸ್ಕ್ರಾರ ಸಂಪದ ಮಿತ್ರರೆ,

ನಿಮಗೆ ಜ್ಣಾಪಕ ಇದ್ದರೆ, ಪಿ.ಲಂಕೇಶ್ ಹೊರತರುತ್ತಿದ್ದ "ಲಂಕೇಶ್ ಪತ್ರಿಕೆ (ಜಾಣ ಜಾಣೆಯರ ಪತ್ರಿಕೆ)"ಯಲ್ಲಿ ಪುಂಡಲೀಕ ಶೇಟ್ ಬರೆಯುತ್ತಿದ್ದ
"ಬಯಲು ಸೀಮೆ ಕಟ್ಟೆ ಪುರಾಣ" ಎಂಬ ಅಂಕಣ ಬರುತ್ತಿತ್ತು.
ನಾನು ಅವಾಗ ಸುಮಾರು 6 ಅಥವಾ 7 ನೇ ಇಯತ್ತೆಯಲ್ಲಿ ಇದ್ದೆ. ಅದಾದ ಮೇಲೂ ಸುಮಾರು ವರ್ಷ ಬರ್ತಾ ಇತ್ತು.

ಪುಟ್ಟಾ ಪುಟ್ಟಿ ಜೋಕು

ಬರೀ ಸೀರಿಯಸ್ ಆಗಿ ಮಾತಾಡ್ತಾ, ಬರೀತಾ ಇದ್ರೆ, ತುಂಬಾ MONOTONOUS ಅನ್ಸುಕ್ಕೆ ಶುರು ಆಗತ್ತೆ, ಅಲ್ವಾ ?
ಅದಕ್ಕೆ, ಊಟದ ಮಧ್ಯೆ ಉಪ್ಪಿನಕಾಯಿ ಥರ ಒಂದು ಸಣ್ಣ ಪೋಲಿ ಜೋಕು. ಬೈಬೇಡಿ ಪ್ಲೀಸ್.
-------------------------------------------------------------------

ಪುಟ್ಟ, ಪುಟ್ಟಿ ಇಬ್ರಿಗೂ 10 ವರ್ಷ, ಆದ್ರೂ ತಾವಿಬ್ರೂ ಒಬ್ಬರನ್ನ ಒಬ್ರು ಲವ್ ಮಾಡ್ತಾ ಇರೋದು ಚೆನ್ನಾಗಿ ಗೊತ್ತು.

ಭಾಗ್ಯ...

ಭಾಗ್ಯ...

ಯಾರಿಗೂ
ಸಿಗದ
ಭಾಗ್ಯ
ನನ್ನ
ಗೆಳತಿಯ
ರವಿಕೆಯೊಳಗಿನ
ಪರ್ಸಿನದ್ದು....
ಆದರೂ
ತಾನಿರುವ
ಜಾಗವನರಿಯದೆ
ಒದ್ದಾಡುತ್ತಿದೆ...
ಬಿಗಿಯಾಗುತ್ತಿದೆಯೆಂದು"

ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....

ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.

ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ ಕಸಿದುಕೊಂಡವು. ನಂತರ ಮರುದಿನ ಮತ್ತವೇ ೨ ಕೋತಿಗಳು. ಮತ್ತೆ ಶಿಗ್ಗಾವಿ ಮಾಸ್ತರರು ರೊಟ್ಟಿ ಚೂರು ನೀಡಿದರು. ಮರುದಿನ ೫ ಕೋತಿಗಳು. ಹೀಗೆ ಕೋತಿಗಳ ಒಂದು ಗುಂಪೇ ಬರತೊಡಗಿತು. ಒಂದೇ ವಾರದೊಳಗೆ ದಾಕ್ಷಿಣ್ಯವೆಲ್ಲಾ ಮಾಯ. ಸೀದಾ ಜಗುಲಿಗೆ ಬಂದು ಶಿಗ್ಗಾವಿ ಮಾಸ್ತರರ ತೊಡೆಯೇರಿ ರೊಟ್ಟಿ ತಿನ್ನುವುದು, ನೇರ ಮನೆಯೊಳಗೆ ಬಂದು ಶಿಗ್ಗಾವಿ ಮಾಸ್ತರರ ಶ್ರೀಮತಿ ಅನುಸೂಯಮ್ಮನವರನ್ನು ತಿನ್ನಲು ಕೊಡುವಂತೆ ಪೀಡಿಸುವುದು, ಅಡಿಗೆ ಮನೆಗೆ ನುಗ್ಗಿ ತಿನ್ನಲು ಹುಡುಕಾಡುವುದು ಈ ಮಟ್ಟಿಗೆ ವಾನರರ ಸಲುಗೆ ಬೆಳೆಯಿತು.

ಪಡಸಾಲೆಯಲ್ಲಿ ಹಾಸಿದ ಚಾಪೆಯ ಮೇಲೆ ಸಾಲಲ್ಲಿ ಕುಳಿತ ಕೋತಿ ಕುಟುಂಬಕ್ಕೆ ಬಡಿಸುವ ಕಾರ್ಯ ಅನುಸೂಯಮ್ಮನವರದ್ದಾಗಿತ್ತು. ಕಿತ್ತಾಡದೇ, ಸದ್ದಿಲ್ಲದೇ ಕೊಟ್ಟದ್ದನ್ನು ತಿಂದು ಮನೆಯೊಳಗೆ ಒಂದಷ್ಟು ಸುತ್ತಾಡಿ ನಂತರ ನಿಧಾನಕ್ಕೆ ಹೊರಡುವ ಕೋತಿಗಳು ಮರುದಿನ ೧೧ಕ್ಕೆ ಅಥವಾ ಅದೇ ದಿನ ಸಂಜೆ ೪ಕ್ಕೆ ಮತ್ತೆ ಹಾಜರು. ಕೋತಿಗಳಿಗೆ ಅಡುಗೆ ತಯಾರಿಸುವುದು ಅನುಸೂಯಮ್ಮನವರಿಗೆ ಪ್ರತಿನಿತ್ಯದ ಕೆಲಸವಾಗಿತ್ತು. ದಿನಾಲೂ ಅವಲಕ್ಕಿ, ರೊಟ್ಟಿ, ಮಂಡಕ್ಕಿ, ಸೌತೆಕಾಯಿ ಇವುಗಳನ್ನು ನೀಡುವ ಬದಲು ಯಾವುದಾದರೂ ಹೊಸ ರುಚಿಯ ತಿಂಡಿಯನ್ನು ನೀಡಿದಾಗ, ಆ ಹೊಸ ರುಚಿ ಹಿಡಿಸದಿದ್ದರೆ ಕೋತಿಗಳ ರಂಪಾಟ. ಆಗ ಮತ್ತೆ ಅವೇ ಎಂದಿನ ತಿಂಡಿಗಳನ್ನು ನೀಡಿ ಅವುಗಳನ್ನು ಸಮಾಧಾನಪಡಿಸುವುದು. ಈ ಕೋತಿಗಳಿಗೆ ಶಿಗ್ಗಾವಿ ಮಾಸ್ತರರೆಂದರೆ ಅತಿ ಅಚ್ಚುಮೆಚ್ಚು. ಅವರೊಂದಿಗೆ ಬೆಳೆಸಿಕೊಂಡಷ್ಟು ಸಲುಗೆಯನ್ನು ಉಳಿದವರೊಂದಿಗೆ ಈ ಕೋತಿಗಳು ಬೆಳೆಸಿಕೊಂಡಿಲ್ಲ. ರೊಟ್ಟಿ ಈ ಕೋತಿಗಳ ಅಚ್ಚುಮೆಚ್ಚಿನ ತಿಂಡಿಯಂತೆ. ರೊಟ್ಟಿಯನ್ನು ಚೂರು ಮಾಡಿ ಚಾಪೆಯ ಮೇಲೆ ಇಟ್ಟರೆ, ಬಂದ ಎಲ್ಲಾ ಕೋತಿಗಳು ಸಾವಕಾಶವಾಗಿ ಹಂಚಿಕೊಂಡು ತಿನ್ನುತ್ತಿದ್ದವಂತೆ.

ಅವಳ ಪ್ರೀತಿ......... ಅವಳದೇ ರೀತಿ......

ಆಗಿದ್ ಆಗೇ ಬಿಡ್ಲಿ ಅವಳಿಗೆ ಒಂದ್ ಸಲನಾದ್ರು ಹೇಳ್ ಬಿಡ್ಬೇಕು....."ಏಯ್ ಹುಡ್ಗಿ ನೀನ್ ನನ್ಗೆ ಜೀವ್ ಕಣೆ ಅಂಥಾ...." ಆದ್ರೆ ಏನ್ ಮಾಡ್ಲಿ ನನ್ನ ಮನದ್ ಪಿಸುಪಿಸು ಮಾತಿಗೂ ಹೂಂಗುಟ್ಟೋ ಹೂ ಮನಸಿ ಹುಡ್ಗಿನ್ ಬರೀ ನನ್ನ ಸ್ವಾರ್ಥಕ್ಕಾಗಿ ನೋಯಿಸೋದು ಅಂದ್ರೆ.......