ಯಡೆಯೂರು ಸಿದ್ದಲಿಂಗೇಶ್ವರ

ಯಡೆಯೂರು ಸಿದ್ದಲಿಂಗೇಶ್ವರ

ಬರಹ

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನಲ್ಲಿರುವ, ಬೆಂಗಳೂರಿನಿಂದ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸುಮಾರು ೧೦೦ ಕಿ.ಮಿ. ದೂರದಲ್ಲಿರುವ ಯಡೆಯೂರು ತೀರ್ಥಕ್ಷೇತ್ರ ದರ್ಶನಾರ್ಥಿಗಳಿಗೆ, ಲಿಂಗಾಯತ ಸಮುದಾಯಕ್ಕೆ ಮುಖ್ಯವಾಗಿ, ಪ್ರಮುಖವಾದ ಯಾತ್ರಾಸ್ಥಳ. ಇತ್ತೀಚೆಗೆ ಒಂದು ಅಂತರ ಜಾತಿ ವಿವಾಹಕ್ಕಾಗಿ ಅಲ್ಲಿಗೆ ನಾನು ಭೇಟಿ ಕೊಟ್ಟಾಗ ಅಲ್ಲಿನ ಪರಿಸರವನ್ನು ನೋಡಿ ಅತ್ಯಂತ ಸಂತೋಷವಾಯಿತು. ಭಕ್ತಿಯುಕ್ಕಿಸುವ ದೇವಾಲಯವಿದೆ. ಸಿದ್ದಲಿಂಗೇಶ್ವರಸ್ವಾಮಿಯ ದೇವಾಲಯ. ಹೋದವರಿಗೆ ಸುಲಭವಾಗಿ ದೊರಕುವ ಸ್ವಾಮಿಯ ದರ್ಶನ, ಇಷ್ಟ ಉಳ್ಳವರಿಗೆ ಉಚಿತ ಅನ್ನ ದಾಸೋಹ, ಉಳಿದು ಕೊಳ್ಳಲು ಬಯಸುವವರಿಗೆ ಅತಿ ಕಡಿಮೆ ವೆಚ್ಚದಲ್ಲಿ ಅತಿಥಿ ಗೃಹಗಳು ಇಲ್ಲಿನ ಆಕರ್ಷಣೆಗಳು. ಬಾಳೆಹೊನ್ನೂರು ಮಠದ ಛತ್ರ, ಅಲ್ಲದೆ ಮೂರ್ ನಾಲ್ಕು ಇತರೇ ಛತ್ರಗಳೂ ಇದ್ದು ವಿವಾಹ ಮುಂತಾದವುಗಳನ್ನು ನಡೆಸುವವರಿಗೆ ಸರ್ವವಿಧವಾದ ಅನುಕೂಲಗಳೂ ದೊರಕುತ್ತವೆ. ಶನಿವಾರ ಭಾನುವಾರಗಳಂದು ಸಂತೋಷದಿಂದ ಕಾಲಕಳೆಯಲೂ ಉತ್ತಮವಾದ ಸ್ಥಳ. ಸಂಪದದ ಓದುಗರಿಗೆ ಅನುಕೂಲವಾಗಲೆಂದು ಈ ವಿವರಗಳನ್ನು ನೀಡುತ್ತಿದ್ದೇನೆ. ಅಲ್ಲಿನ ಹಲವಾರು ಛಾಯಾಚಿತ್ರಗಳನ್ನು ನನ್ನ ಈ ಕೆಳಗಿನ ಲಿಂಕಿನಲ್ಲಿ ನೋಡಬಹುದು.

http://www.flickr.com/photos/agilenagaraju/sets/72157604260669399/

ಎ.ವಿ. ನಾಗರಾಜು