ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಆಫ್ರಿಕಾದಲ್ಲಿ ಗಣೇಶ
ಮೊನ್ನೆ ಅ೦ದರೆ ಸೆಪ್ಟೆ೦ಬರ್16 ರ೦ದು ನಾವೂ ಕೂಡ ಇಲ್ಲಿ ಅ೦ದರೆ ಮೋವಾ೦ಜ,ತಾ೦ಜಾನಿಯದಲ್ಲಿ ಗಣೇಶ ಹಬ್ಬವನ್ನ ಆಚರಿಸಿದ್ವಿ ಆ ಒ೦ದು ದಿನ ನಮ್ಮನ್ನು ನಾವೆ ಮರೆತು ಹೋಗಿದ್ದ೦ತ ಸ೦ಧರ್ಭ.ತಾಯ್ನಾಡಿನಲ್ಲೇ ಇದ್ದ೦ತಹ ಭಾವನೆ.ಮೋವಾ೦ಜ ಕನ್ನಡ ಸ೦ಘದಿ೦ದ ರಚಿತವಾದ ಈ ಉತ್ಸವ ಬಹಳ ನೆನಪಿನಲ್ಲಿ ಉಳಿಯುವ ದಿನ.ಆ ನೆನಪುಗಳನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ.ಒಪ್ಪಿಸಿಕೊಳ್ಳಿ.
ನವರಾತ್ರಿಯ ದಿನಗಳು
- Read more about ನವರಾತ್ರಿಯ ದಿನಗಳು
- Log in or register to post comments
ನಾನು ಊರಿಗೆ ಹೊರಟೆ
ಡಿಸೆಂಬರ್ ಬರುತ್ತಿದ್ದಂತೆ ಊರಿಗೆ ಹೋಗುವವರೆಲ್ಲ ಊರಿಗೆ ಹೊರಡುತ್ತಿದ್ದಾರೆ. ನಾನೂ ೨೧ಕ್ಕೆ ಹೊರಟೆ. ಒಂದು ತಿಂಗಳು ಊರು !.
ವಸಂತ್.
- Read more about ನಾನು ಊರಿಗೆ ಹೊರಟೆ
- Log in or register to post comments
ನವರಾತ್ರಿಯ ಏಳನೇ ದಿನ
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುಪಾಲು ಭೂಮಿಗೆ ನೀರುಣಿಸುತ್ತವೆ. ಇಂತಹ ಮಹಾತಾಯಿ ಕಾವೇರಿಗೆ ಇಂದು ಮೊದಲು ನಮಿಸೋಣ.
ಇವತ್ತು ಈ ಮೊದಲ ಆರು ದಿನಕ್ಕಿಂತ ಸ್ವಲ್ಪ ಬೇರೆ. ಬೇರೆ ಸಂಗೀತಗಾರರು ಹಾಡಿದ, ದೇವಿಯ ಬಗ್ಗೆಯ ರಚನೆಯ ಕೊಂಡಿಗಳನ್ನು ಕೊಡುವ ಬದಲು ಇವತ್ತು ಒಂದು ಬದಲಾವಣೆ ಮಾಡಿದ್ದೇನೆ. ಕನ್ನಡದ ಮೂರು ಕವಿಗಳು ಸರಸ್ವತಿಯ ಬಗ್ಗೆ ಮಾಡಿರುವ ಸ್ತುತಿಯನ್ನು, ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ ಕೇಳಿಸುವೆ. ಇದಕ್ಕೆ ಕಾರಣ, ಕನ್ನಡಕ್ಕೂ-ಕಾವೇರಿಗೂ ಇರುವ ಬಿಡಿಸದ ನಂಟು. ಹಾಗಾಗಿ, ಕಾವೇರಿ ಸಂಕ್ರಮಣದ ದಿನ ಒಂದಲ್ಲ, ಮೂರು ಕನ್ನಡ ರಚನೆಗಳು ಇವತ್ತು ಇಲ್ಲಿ ಕೇಳಿ ಬರುತ್ತಿವೆ. ಇವಕ್ಕೆ ಹಿನ್ನಲೆ ವಾದ್ಯಗಳ ಅಲಂಕಾರವಿಲ್ಲ. ಆದರೂ ಪರವಾಗಿಲ್ಲ, ಎನ್ನುವ ಭಾವನೆ ನನ್ನದು.
ಮೊದಲಿಗೆ ಕನ್ನಡದ ಮೊದಲ ಕಾವ್ಯ ಕವಿರಾಜ ಮಾರ್ಗದಿಂದ ಆಯ್ದ ಸರಸ್ವತೀ ಸ್ತುತಿಯಾದ ಒಂದು ಕಂದಪದ್ಯ:
ಶ್ರೀ ವಿಶದವರ್ಣೆ ಮಧುರಾ
ರಾವೋಚಿತೆ ಚತುರ ರುಚಿರ ಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್
- Read more about ನವರಾತ್ರಿಯ ಏಳನೇ ದಿನ
- 2 comments
- Log in or register to post comments
ಅರ್ಥವಿಲ್ಲದ್ದು..
ಒಂದು ಅರ್ಥವಿಲ್ಲದ ನಗು,
ಇಷ್ಟೆಲ್ಲಾ.. ಅನರ್ಥಗಳಿಗೆ
ಈಡಾಗಬಹುದೆಂದೆಣಿಸರಲಿಲ್ಲ, ಹೀಗೆ..
ಸಂಬಂಧಗಳ ಬುನಾದಿಯ,
ಅಲುಗಾಡಿಸುವಷ್ಟೂ..
ನನ್ನಾಪ್ತರ ಮನದಲ್ಲೂ,
ಶಂಕೆ.. ಹುಟ್ಟಿಸುವಷ್ಟೂ..
ನಂಬಿದ್ದೆ ನಾ..,
ನಗುವುದೊಂದು ದೈವದತ್ತ ಕೊಡುಗೆ,
ಇಂದೇಕೆ..ಹೀಗೆ ಕಾಡುತ್ತಿದೆ,
ಉರುಳಾಗಿ, ನನಗೆ ??
ಮನ್ನಿಸಿ ಎನ್ನ,
ಅರ್ಥ ಹುಡುಕುತ್ತಾ ಕೂರಲಾರೆ..
ನಾ.. ಪ್ರತಿಬಾರಿ,
- Read more about ಅರ್ಥವಿಲ್ಲದ್ದು..
- Log in or register to post comments
ಹಾಡು ಬೇಕಾಗಿತ್ತು.
ನಮಸ್ಕಾರ,
ನನಗೆ ಈ ಕೆಳಗಿನ ಹಾಡು ಬೇಕಾಗಿದೆ.
"ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏರಿ ಏರಿ ನಿಂತು ವಿಜಯ ವೀಣೆ ಬಾರಿಸಿ, ಬಾರಿಸಿ"
- Read more about ಹಾಡು ಬೇಕಾಗಿತ್ತು.
- 4 comments
- Log in or register to post comments
ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು.....
ನವರಾತ್ರಿಯ ಆರನೇ ದಿನ
ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು
ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ
ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ
ಏಳನೆಯ ದಿನ ಬರುತ್ತದೆ.
- Read more about ನವರಾತ್ರಿಯ ಆರನೇ ದಿನ
- Log in or register to post comments