ಕನ್ನಡದ ಬಗ್ಗೆ ಹತ್ತು ಕಣಸುಗಳು

ಕನ್ನಡದ ಬಗ್ಗೆ ಹತ್ತು ಕಣಸುಗಳು

ಕನ್ನಡದ ಬಗ್ಗೆ ಹತ್ತು ಕಣಸುಗಳು

ನಾವು ಯಾವುದೇ ಗುರಿ ಮುಟ್ಟಲು ಅದರ ಬಗ್ಗೆ ಕಣಸು/vision ಗಳು ಇರಬೇಕು. ಇಲ್ಲ ಅಂದ್ರೆ ದಾರಿ ತಪ್ಪಿ ಬುಡ್ತಿವಿ. ಹಾಗೆ ಪಟ್ಟಿ ಮಾಡಿದೆ.

೧) ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡಾಗ ಅವುಗಳ ಜೊತೆ ಬರುವ ಮಾನ್ಯುಯಲ್ ಕನ್ನಡದಲ್ಲಿರಬೇಕು
೨) ಮದ್ದು/ಅವ್ಶದ ಇವುಗಳು ಹೆಸರುಗಳು ಕನ್ನಡದಲ್ಲಿ ಆ ಮದ್ದಿನ ಮೇಲೆ ಕನ್ನಡದಲ್ಲಿ(ಇಂಗಲೀಸ್ ಜೊತೆ) ಲಗತ್ತಿಸಿರಬೇಕು
೩) ಕನ್ನಡ ಸಿನಿಮಾಗಳು ಹೆಚ್ಚು ಟೆಕ್ನಿಕಲ್ ಆಗಿ ಮುಂದುವರೆಯಬೇಕು ಮತ್ತು ಬೇರೆ ರಾಜ್ಯ, ದೇಸಗಳಲ್ಲಿ ಕನ್ನಡ ಸಿನಿಮಾ ಸುಲಬವಾಗಿ ನೋಡುವಂತಾಗಬೇಕು
೪) ಕನ್ನಡಿಗರು ಇನ್ನು ಹೆಚ್ಚು ಎಂಟರ್ ಪ್ರಿನ್ಯೂರಿಯಲ್ ಆಗ್ಬೇಕು.
೫) ಕನ್ನಡ ನೆಲದಲ್ಲಿರುವ ಎಲ್ಲ ಮಂದಿಗೆ ಕನ್ನಡ ಮಾತನಾಡಲು/ತಿಳಿದುಕೊಳ್ಳಲು ಬರಬೇಕು.
೬) ಬಾನೋಡ/ವಿಮಾನದ ಟಿಕೆಟ್ ಗಳು ಕನ್ನಡದಲ್ಲೂ ಅಚ್ಚಾಗಿರಬೇಕು.
೭) ಸಿಂಗಾಪುರ ಎಲರ್ವಟ್ಟೆ(airlines)ಯವರು ತಮ್ಮ ಬಾನೋಡಗಳಲ್ಲಿ ಕನ್ನಡದ ಸಿನಿಮಾಗಳನ್ನು ತೋರಿಸಬೇಕು.
೮) ಸಿರಿವಿಜಯ, ಕೊಳಂಬೆ ಪುಟ್ಟಣ್ಣಗೌಡ ಮತ್ತು ಆಂಡಯ್ಯನವರ ಪದ್ಯಗಳು ಮಂದಿ ಬಾಯಲ್ಲಿ ಕುಣಿಯಬೇಕು.
೯) ಕನ್ನಡಕ್ಕೆ ತನ್ನದೇ ಆದ ಕೀಲಿ ಮಣೆ, ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಬೇಕು.
೧೦) ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರಕ್ಕಿಂತ ಕನ್ನಡ ಸರ್ಕಾರ ಬರಬೇಕು.

ಈ ಬ್ಲಾಗಿನ ಬಗ್ಗೆ ಕಮೆಂಟ್ ಮಾಡುವವರು ಈ ಪಿಡಿಎಪ್ ಓದಬೇಕಾಗಿ ಕೋರಿಕೆ. ಹೇಗೆ ತಮಿಳು ಇಂಗಲೀಸನ್ನು ಎದುರಿಸಲು ಹೋಗಿ ಸೊರಗಿದೆ ಅಂತ ಅರಿತ ಆಗುತ್ತೆ.

http://ccat.sas.upenn.edu/~haroldfs/public/AusbauTamil.pdf

 

Rating
No votes yet

Comments