ವೇದಾಂತಿಯ ಹಾಡೂ ಕವಿಯೊಬ್ಬನ ಸಿದ್ಧಾಂತಗಳೂ...

ವೇದಾಂತಿಯ ಹಾಡೂ ಕವಿಯೊಬ್ಬನ ಸಿದ್ಧಾಂತಗಳೂ...

ಬರಹ

ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಒಂದು ಉತ್ತಮ ಪುಸ್ತಕ. ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ!

 

ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್ ಪಾರಿತೋಷಕ ವಿಜೇತ ಕೃತಿಯನ್ನು ಐಬಿಎಚ್ ನವರು ಪ್ರಕಟಿಸಿದ್ದಾರೆ. ಇನ್ನೂರ ತೊಂಭತ್ತನಾಲ್ಕು ಪುಟಗಳ ಈ ಕಾದಂಬರಿಯ ಬೆಲೆ ನೂರ ಎಂಭತ್ತು ರೂಪಾಯಿಗಳು.

ಅನೇಕ ಒಳನೋಟಗಳಿಂದ ಬದುಕನ್ನು ಕೆಣಕುವ ಈ ಕೃತಿ ಓದಿ ಮುಗಿದ ಮೇಲೂ ಕಾಡಬಲ್ಲಷ್ಟು ಆಪ್ತ ವಿವರಗಳಲ್ಲಿ, ಆಕರ್ಷಕ ಘಟನೆಗಳಲ್ಲಿ ಮೈತಳೆದಿದೆ.