ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇರುವದೆಲ್ಲವ ಬಿಡದೆ....

'ಇರುವದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ'- ಹೌದು. ನಾವೆಲ್ಲ ಈ ಮಾತನ್ನ ಅನೇಕ ಬಾರಿ ಕೇಳಿದ್ದೇವೆ. ಆದರೆ ವಸುಧೇಂದ್ರ ಅವರು ಇದರ ಇನ್ನೊಂದು ಮಗ್ಗುಲನ್ನೂ ತಮ್ಮ ಪ್ರಬಂಧವೊಂದರಲ್ಲಿ ೩-೪ ವಾರಗಳ ಹಿಂದಿನ ಪ್ರಜಾವಾಣಿಯಲ್ಲಿ ಬರೆದಿದ್ದಾರೆ . ನೀವು ಅದನ್ನು ಓದಿರದಿದ್ದರೆ ಇಲ್ಲಿ ಕೆಲವು ಸಾಲು ಓದಿ.

ಚೆಲುವಿನ ಚಿತ್ತಾರ....

ಚೆಲುವಿನ ಚಿತ್ತಾರ - ಇದು ಸತ್ಯ ಕಥೆ, ತಮಿಳು ನಾಡಿನ ತಿರುಚ್ಚಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಜೀವಂತ ಎಂಬ ಮಾಹಿತಿಯೊಂದಿಗೆ ಎಸ್. ನಾರಾಯಣ್ ಚೆಲುವಿನ ಚಿತ್ತಾರವನ್ನು ಬರೆಯಲು ಆರಂಭಿಸುತ್ತಾರೆ. ತಮಿಳಿನ "ಕಾದಲ್" ಚಿತ್ರವನ್ನು ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕನ್ನಡೀಕರಿಸಿದ್ದಾರೆ ನಾರಾಯಣ್.

73-ಶಾಂತಿ ನಿವಾಸ - ಒಂದು ಸುಂದರ ಅನುಭವ!

73- ಶಾಂತಿ ನಿವಾಸ - ಸುದೀಪ್ ನಿರ್ದೇಶನದ ಎರಡನೇ ಚಿತ್ರ. ಹೃಷೀಕೇಶ್ ಮುಖರ್ಜಿಯವರ "ಬಾವರ್ಚಿ" ಚಿತ್ರವನ್ನು ಕನ್ನಡ ಪರದೆಯ ಮೇಲೆ ಹೇಗೆ ತಂದಿದ್ದಾರೋ ಎಂಬ ಸಣ್ಣ ಭಯದ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದೆ... ಆರಂಭದಲ್ಲೇ ಒಂದು ಆಶ್ಚರ್ಯ ಕಾದಿತ್ತು... ಮೊದಲ ದೃಶ್ಯದಲ್ಲೇ ಶಿವಣ್ಣ ಪ್ರತ್ಯಕ್ಷ!!!. ಪಾತ್ರಗಳ ಪರಿಚಯಿಸುವ ರೀತಿ ಅತ್ಯಂತ ವಿಶಿಷ್ಟವಾಗಿ ಬಂದಿದೆ...

ರುಚಿ

ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಆಲ್ಲಿಂದ ಮೆಜೆಸ್ಟಿಕ್ಕಿಗೆ ಹೊರಡುವ ಕೊನೆಯ ಬಸ್ಸಿಗೆ, ರಾತ್ರಿ ಊರಿಗೆ ಹೊರಟ ಜನರೆಲ್ಲ ದೀಪದ ಕೆಳಗೆ ನಿಂತು ಕಾಯುತ್ತಿದ್ದಾರೆ.

ಕನಸುಗಳು

ಕನಸುಗಳು

ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.

ಹಗಲುಗನಸಲ್ಲವಿದು ಗೆಳತಿ
ಮೃದುವಾದ ಮನಸ್ಸು
ನನ್ನ ಮನಕೆ ನೀನೇ ಒಡತಿ
ಇದು ಆಗಲಿ ನನಸು
ಭಾರದ ಹೆಜ್ಜೆ ಇಡಬೇಡ
ನೋವು ಆದೀತು

ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು

ಲೈಂಗಿಕ ಶಿಕ್ಷಣ ನೀಡಬೇಕೆ ಬೇಡವೇ...

ಲೈಂಗಿಕ ಶಿಕ್ಷಣ ನೀಡಬೇಕೆ ಬೇಡವೇ ಎಂಬುದರ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ.   ಇದು ಕೇವಲ ಚರ್ಚೆಯಲ್ಲೆ ಮುಕ್ತಾಯವಾಗಬಾರದು. ಎಫ್ ಪಿಎಐ ಲೈಂಗಿಕ ಶಿಕ್ಷಣ ನೀಡಲು ಮುಂದೆ ಬಂದಿರುವಾಗ ತತ್ ಕ್ಷಣ ಜಾರಿಗೊಳಿಸಲು ಪೂರಕ ವಾತಾವರಣ ವಿರುವಾಗ ಎಲ್ಲ ತಜ್ಞರು ಮತ್ತು ಸಮಾಜಸೇವಾಸಕ್ತರೊಂದಿಗೆ ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತ ವಾಗುವುದು ಸೂಕ್ತವೆನಿಸುತ್ತದೆ.

ಕನ್ನಡದ ಪ್ರಪ್ರಥಮ Animated ಚಿತ್ರ

ಕನ್ನಡದಲ್ಲಿ ಇದುವರೆಗೆ ಯಾರು ಮಡದ ಕೆಲಸವನ್ನು ಅಮೆರಿಕದ ಶ್ರಿ ರಾಮಾನುಜ ಮಿಶನ್ ಮಾಡಿದೆ. ನಮ್ಮ ದೇಶದ ದಾರ್ಶನಿಕರಲ್ಲಿ ಒಬ್ಬರಾದ ಶ್ರಿ ರಾಮಾನುಜಾಚಾರ್ಯರ ಜೀವನವನ್ನಾದರಿಸಿದ ಚಿತ್ರ ನಿರ್ಮಿಸಿದ್ದರೆ. ಇದರಲ್ಲಿ ಆಚಾರ್ಯರ ಜೀವನ ಹಾಗು ಅವರ ಸಿದ್ದಾಂತಗಳನ್ನು ಎಲ್ಲರಿಗು ಅರ್ಥವಾಗುವಂತೆ ಪ್ರಸ್ತುತ ಪಡಿಸಿದ್ದರೆ.

ಮತ್ತದೇ ಅನನ್ಯ(!) ಸೂರ್ಯಾಸ್ತ

ಸೂರ್ಯಾಸ್ತದ ಚಿತ್ರಗಳನ್ನು ಎಷ್ಟು ತೆಗೆದರೂ creative ಸಾಧ್ಯತೆಗಳು ಬಾಕಿ ಉಳಿಯುತ್ತವೆ. ಅದಕ್ಕೆ ನಾನು ಟೈಟಲ್ ನಲ್ಲಿ ಮತ್ತದೇ ಅನನ್ಯ ಸೂರ್ಯಾಸ್ತ ಎಂಬ oxymoron ಉಪಯೋಗಿಸಿದ್ದೇನೆ :)

ವಂದನೆಗಳು, 

ವಸಂತ್ ಕಜೆ