ಬಾಲಿಶ ಚಿತ್ರಗಳು
ಆಹಾ..
ಒಂದು ಬಾರಿ ಬೆಂಗಳೂರಿನ ಗೋಡೆಗಳಮೇಲೆ ರಾರಾಜಿಸುತ್ತಿರುವ ಚಲನ ಚಿತ್ರ ಪೋಸ್ಟರುಗಳನ್ನೊಮ್ಮೆ ನೊಡಬೇಕು..
’ಸೀಮಾ ಶಾಸ್ತ್ರಿ’ ಎಂಬ ಒಂದು ತೆಲುಗು ಚಿತ್ರವಂತೆ..ಹೊಡೆದಾಟ ನಡೆಯುತ್ತಾ ಇಬ್ಬರು ಮೇಲೆ ನೆಗೆದು ವಿಚಿತ್ರರೀತಿಯಲ್ಲಿ ಕೆಳಗೆ ಬೀಳುತ್ತಿರುವ ಪೋಸ್ಟರು..
ಒನ್ನೊಂದು ತಮಿಳು ಚಿತ್ರದ್ದು. ಒಂದು ಪ್ರೇಮಿನಲ್ಲಿ ಒಬ್ಬ ಉದ್ದ ತಲೆಗೂದಲು ಬಿಟ್ಟು ಕುರುಚಲು ಗಡ್ಡದೊಡನೆ ಮಚ್ಚು ಹಿಡಿದು ನಿಂತಿದ್ದಾನೆ. ಪಕ್ಕದಲ್ಲು ಒಂದು ಎತ್ತು ಆವೇಶದಿಂದ ನೋಡುತ್ತಿದೆ..
ಮಗದೊಂದು ತಮಿಳು ಚಿತ್ರ..ನಾಯಕ ಪಂಚೆಯನ್ನು ಮೇಲೆಕಟ್ಟಿ ಕಣ್ಣಿನಲ್ಲಿ ಜನ್ಮ ಜನ್ಮಾಂತರದ ದ್ವೇಷಪ್ರದರ್ಶಿಸುತ್ತಾ ಒಂದು ಮರದ ಕೊರಡನ್ನು ಹಿಡಿದು ಬಡಿಯಲು ನಿಂತಿದ್ದಾನೆ..
ಇನ್ನೊಂದು..ಒಬ್ಬಾತ ಒಂದು ಸೋಫಾ ಮಾದರಿಯ ಚೇರಿನಲ್ಲಿ ನೋಡುಗರನ್ನೇ ಒದೆಯುವಂತೆ ಕುಳಿತಿದ್ದಾನೆ..
ಇನ್ನು ಚೆಲುವ ಕನ್ನಡದ ’ನಂದ ನಂದಿತಾ’..ನಾಯಕ ಲಾಂಗ್ ಹಿಡಿದು ತುಂಡರಿಸಲು ನಿಂತಿದ್ದಾನೆ.
ಒಂದು ತೆಲುಗು ಚಿತ್ರದ ತುಣುಕು. ಬಾಲಕೃಷ್ಣ ಪೋಲೀಸ್ ಆಫೀಸರ್. ರೌಡಿಗಳಮುಂದೆ ನಿಂತು ’ನಾ ಪೇರು ನರಸಿಂಹ, ಲಕ್ಶ್ಮೀ ನರಸಿಂಹ ರಾ’ ಎಂದು ಪೋಲೀಸ್ ಜೀಪಿನಿಂದ ಒಂದು ಮೂಟೆ ಲಾಂಗುಗಳನ್ನು ಹೊರಕ್ಕೆಳೆದುಕೊಳ್ಳುತ್ತಾನೆ :-)
ಇಂತಹ ಬಾಲಿಶ ಸೀನುಗಳಿರುವ ಅಂಶಗಳಿರುವ ಹಿಂಸೆಯನ್ನು ಕ್ರೌರ್ಯವನ್ನು ವೈಭವೀಕರಿಸುವ ಚಿತ್ರಗಳನ್ನು ನೋಡುವ ಎಳೆಯ ಮನಸ್ಸುಗಳ ಮೇಲೆ ಎಂತಹ ಪರಿಣಾಮ ಬೀರಬಹುದು. ಈ ದಕ್ಷಿಣ ಭಾಷೆಗಲಲ್ಲಿ ಬರುತ್ತಿರುವ ಬಹುತೇಕ ’ರೌಡಿ ಚಿತ್ರ’ಗಳಿಗೆ ೧೦ ರಿಂದ ೨೦ ವರ್ಷದ ಗುಂಪಿನ ಬಡ ಮಕ್ಕಳೇ ಪ್ರೇಕ್ಶಕರು. ನಿಜ ಹೇಳಿ ಸ್ವಲ್ಪ ಓದಿಕೊಂಡು ಮಧ್ಯಮವರ್ಗದ ಜೀವನ ನಡೆಸುತ್ತಿರುವ ಫ್ಯಾಮಿಲಿಗಳು ಇಂತಹ ಚಿತ್ರ ನೋಡಲು ಹೋಗುತ್ತವೆಯೇ? ಇನ್ನು ಮಧ್ಯಮ ಮೇಲ್ವರ್ಗಗಳ ಮಕ್ಕಳುಗಳೂ ಅದೇ ಕಾರಣಕ್ಕೆ ಹಿಂದಿ ಚಿತ್ರಕ್ಕೆ ಮೊರೆ ಹೋಗುತ್ತಿವೆ. ನಾನು ಅಷ್ಟು ಹಿಂದಿ ಚಿತ್ರಗಳನ್ನು ನೋಡುವುದಿಲ್ಲವಾದರೂ ಅಲ್ಲಿ ಈಗ ಬರುತ್ತಿರುವ ಚಿತ್ರಗಳ ಗುಣಮಟ್ಟ ಹೆಚ್ಚುತ್ತಿವೆ..’ತಾರೆ ಜಮೀನ್..’ಒಂದು ಉದಾಹರಣೆ..ಆದರೆ ಅಲ್ಲಿಯೂ ’ಓಂ ಶಾಂತಿ ಓಂ’ ಮಾದರಿಯ ಮರಸುತ್ತುವ ಚಿತ್ರಗಳೂ ಬಹಳಷ್ಟು ಇವೆ. ಆದರೆ ಖಂಡಿತ ಮಚ್ಚು ಲಾಂಗು ಹಿಡಿದು ರಕ್ತಪಾತ ಮಾಡುವ ಚಿತ್ರಗಳು ಬಹಳ ಕಡಿಮೆ.