ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿತ್ರಕಲ್ಲು ದುರ್ಗದ ಮಾತೆ Chitrakalludurga Lady

ಯೇಸುಕ್ರಿಸ್ತನನ್ನು ತೋಳಲ್ಲಿ ಹಿಡಿದ ವಾತ್ಸಲ್ಯಮಯಿ ತಾಯಿಯಾಗಿ ಕಂಡುಬರುತ್ತಾಳೆ ಚಿತ್ರಕಲ್ಲುಮಾತೆ ಅರ್ಥಾತ್ ಮರಿಯಾಮಾತೆ. ಬಿದಿಗೆ ಚಂದ್ರನ ಮೇಲೆ ವಿರಾಜಮಾನರಾಗಿರುವ ಮರಿಯಾಮಾತೆಯು ನಿರಾಭರಣಳಾಗಿ ನಿರ್ಮಲವದನಳಾಗಿ ಕಂಗೊಳಿಸುತ್ತಿದ್ದಾಳೆ. ಅವಳ ಒಂದು ಕೈಯಲ್ಲಿ ಪುಟ್ಟಬಾಲಕ ಯೇಸು ಕುಳಿತು ಹಸನ್ಮುಖನಾಗಿ ನೋಡುತ್ತಿದ್ದಾನೆ.

ಸ್ವಾತಿ-ಮುತ್ತು

ಕನ್ನಡಕ್ಕಾಗಿ
ಬೆವರು ಸುರಿಸಿದ ಹೊತ್ತು;
ಪ್ರತಿಕ್ಷಣ
ಸ್ವಾತಿ-ಮುತ್ತು;
ನಾನು ನನ್ನದು
ಅಹಂ ಕಳೆಯಲಿ;
ನಾವು ನಮ್ಮದು
ಭಾವ ಬೆಳೆಯಲಿ;
ಒಂಟಿ ಸಲಗ
ಎನ್ನಿಸದೆ;
ಶ್ರಮಿಕರ ಗುಂಪಲ್ಲಿರಲಿ
ನಿನ್ನೆದೆ;
ನಿನಗಾಗಿ ನಿನ್ನೊಳಿತಿಗಾಗಿ
ಮಾಡಿದ್ದು ಯಶವಲ್ಲಯ್ಯ;
ಕನ್ನಡಕ್ಕಾಗಿ, ಜನತೆಗಾಗಿ

ದುರ್ಗೆಯಾಗಿ ಸೋನಿಯಾ

ಉತ್ತರ ಪ್ರದೇಶದ ಮೊರಾದಾಬಾದ್ ನ ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾ ಅವರನ್ನು ದುಷ್ಟಶಕ್ತಿ ಸಂಹಾರಕಿ ದುರ್ಗೆಯನ್ನಾಗಿ ಚಿತ್ರಿಸಿ ತೂಗು ಹಾಕಿರವುದು ಇದೀಗ ವಿವಾದಕ್ಕೆ ನಾಂದಿ ಹಾಡಿದೆಯಂತೆ...!! :-)
-ಕಾರಣವೇನೆಂದರೆ ಕಾಂಗ್ರೆಸ್ ಒಂದು "ಜಾತ್ಯಾತೀತ ಪಕ್ಷ" ಎನ್ನುತ್ತಾರೆ ಮಾಜಿ ಸಂದರೊಬ್ಬರು.

ಪುಸ್ತಕ ನಿಧಿ - ರಾಶಿ ರಾಶಿ ರುಗ್ವೇದ !

ಋಗ್ವೇದವನ್ನು world heritage ಎಂದೇನೋ ಗುರುತಿಸಿದ್ದಾರಂತೆ . Digital library of India ದಲ್ಲಿ ಸಾವ್ಸಾವ್ರ ಪುಟಗಳ ಮೂವತ್ತು ಸಂಪುಟಗಳು ಇವೆ.
ಚೆನ್ನಾಗಿ ಇರುವ ಹಾಗಿದೆ.
ಹೌದು ಒಟ್ಟು ೩೦೦೦೦ ಪುಟ!

ಮೊದಲನೆಯದರ ಕೊಂಡಿ ಇಲ್ಲಿದೆ
http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020029047

ಉಳಿದ ಸಂಪುಟಗಳಿಗೆ Rxgveida ಎಂದು ಹುಡುಕಿ.

ಪುಸ್ತಕನಿಧಿ :ರತ್ನನ ಪದಗಳು ಮತ್ತು ರಂಗಣ್ಣನ ಕನಸಿನ ದಿನಗಳು

ಶ್ರೀ ಜೀ.ಪಿ.ರಾಜರತ್ನಂ ಅವರ 'ರತ್ನನ ಪದಗಳು' ಈ ಕೊಂಡಿಯಲ್ಲಿದೆ . ಓದಿ ಆನಂದಿಸಿ.

http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020029029

ಹಾಗೆಯೇ ರಂಗಣ್ಣನ ಕನಸಿನ ದಿನಗಳು ಕೂಡ ಒಂದು ಒಳ್ಳೆಯ ಪುಸ್ತಕ ಅದೂ ಇಲ್ಲಿದೆ. ಓದಿ

http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028642

ಡಾ. ಎಚ್ ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಮಾಲೆ - "ಕರ್ಟನ್ ಕಾಲ್" - ಪುಸ್ತಕ ಬಿಡುಗಡೆ - ಸುರಾನಾ ಕಾಲೇಜು - ಜೂನ್ ೨೩ ೨೦೦೭, ೧೦.೦೦ಕ್ಕೆ

ಡಾ. ಎಚ್ ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಮಾಲೆ - "ಕರ್ಟನ್ ಕಾಲ್" - ಪುಸ್ತಕ ಬಿಡುಗಡೆ
ದಿನಾಂಕ: ೨೩ ಜೂನ್ ೨೦೦೭
ಸಮಯ: ಬೆಳಗ್ಗೆ ೧೦.೦೦ಕ್ಕೆ
ಸ್ಥಳ: ಸುರಾನಾ ಕಾಲೇಜು, ಸೌತ್ ಎಂಡ್ ಸರ್ಕಲ್, ಬೆಂಗಳೂರು

ಅಧ್ಯಕ್ಷತೆ / ಮುಖ್ಯ ಅತಿಥಿಗಳು: ರಾಷ್ಟಕವಿ. ಜಿ. ಎಸ್. ಶಿವರುದ್ರಪ್ಪ / ಈಶ್ವರಚಂದ್ರ

ಎಲ್ಲರಿಗೂ ಆತ್ಮೀಯ ಸ್ವಾಗತ.

ಆಮೇಲೆ ನಾಳೆ ಎಚ್.ಎಸ್.ವಿ ಯವರ ಜನುಮದಿನ ಕೂಡ!

ಕಿರಂಡಲ್ ಯಾತ್ರೆ

ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣದಿಂದ ಚತ್ತೀಸ್‌ಗಡದ ಬೈಲಾದಿಲಾ ಗಣಿ ಪ್ರದೇಶಕ್ಕೆ ತೆರಳುವ ೪೪೫ ಕಿಲೋಮೀಟರು ದೂರದ ಕೊತ್ತವಲಸ-ಕಿರಂಡಲ್ ರೈಲು ಪ್ರಯಾಣ ಹಲವಾರು ರೋಮಾಂಚಕಾರಿ ಅನುಭವಗಳನ್ನು ನೀಡುತ್ತದೆ.