ಟ್ರೆಂಡ್..(-ಗಣೇಶ)
ಜನ ಏನು ಬಯಸುತ್ತಾರೋ ಅದನ್ನೇ ಕೊಡುವುದು ಈಗಿನ ಟ್ರೆಂಡ್. ಪಿ.ಯು.ಸಿ., ೯ನೇ ಕ್ಲಾಸ್, .. ..ಹುಡುಗ ಹುಡುಗಿಯರ ಪ್ರೀತಿಯ ಬಗ್ಗೆ ಸಿನೆಮಾ ಈಗಿನ ಟ್ರೆಂಡ್.
ಮಚ್ಚು ಹಿಡಿದ ಯಾವನೇ ಒಬ್ಬನ ಫೋಟೋ ತೆಗೆದು ಕೆಳಗೆ ‘ಲುಚ್ಚಾ’ ಎಂದು ಬರೆಯಿರಿ, ‘ಫಿಲ್ಮ್ ಯಾವಾಗ ರಿಲೀಸ್’ ಎಂದು ನೋಡಲು ಜನ ರೆಡಿ. ಟ್ರೆಂಡೇ ಹಾಗಿದೆ.
ಕುನಾಲ್ ಗುಂಜಾವಾಲ ಸ್ವರ ಈಗಿನ ಕನ್ನಡ ಹೀರೋಗಳಿಗೆ ಸ್ವಲ್ಪವೂ ಮ್ಯಾಚ್ ಆಗುವುದಿಲ್ಲ.ಆದರೂ ಅವರಿಂದಲೇ ಹಾಡಿಸಬೇಕು. ಟ್ರೆಂಡ್ ಸ್ವಾಮಿ..
ಸೋಪು ತೆಗೆದುಕೊಳ್ಳುವಾಗ ಹಿಂದಿನ ಕಾಲದಲ್ಲಿ, ನೊರೆ ಬಂದರೆ ಸಾಕು,ಪರಿಮಳ ಇದ್ದರೆ ಬೋನಸ್ ಎಂದು ಮೂಸಿ ನೋಡಿ ತೆಗೆದುಕೊಳ್ಳುತ್ತಿದ್ದರು. ನಂತರ ಬಂತು ಹರ್ಬಲ್ ಟ್ರೆಂಡ್-ಹತ್ತಾರು ಗಿಡಮೂಲಿಕೆಯನ್ನು ಹಾಕಿ ಮೊಡವೆ, ಚರ್ಮದ ಕಾಯಿಲೆಗಳನ್ನು ನಿವಾರಿಸಿದರು.
ಲಿಂಬೆ ಯುಗ ಬಂದಾಗ ಸೋಪು ಮಾತ್ರವಲ್ಲ,ಪೌಡರ್,ಶೇವಿಂಗ್ ಕ್ರೀಮ್,ಬಟ್ಟೆ ಸೋಪು ಎಲ್ಲಾ ಲಿಂಬೆಮಯ. ಅಲೋಯ್ ವೆರಾ ಟ್ರೆಂಡ್..ವಿಟಮಿನ್ ಈ ಟ್ರೆಂಡ್.. ಹಾಲಿನಕೆನೆ..
ಈಗ ಬಂದಿದೆ antibacterial trend. ಕೈ,ಮೈ ಸ್ವಚ್ಛವಾಗಿಡಲು antibacterial ಸೋಪು. ಹಲ್ಲುಗಳನ್ನು ದಿನವಿಡೀ ಕ್ರಿಮಿಗಳಿಂದ ಮುಕ್ತವಾಗಿಡಲು antibacterial ಟೂತ್ ಪೇಸ್ಟ್. ಇವುಗಳಿಗೆ ಅಂತಹದ್ದೇನನ್ನು ಸೇರಿಸಿದ್ದಾರೆ? ನಾವು ಯೋಚಿಸುವುದಿಲ್ಲ. ಜಾಹೀರಾತು ನೋಡುತ್ತೇವೆ, ತರುತ್ತೇವೆ. ಸೋಪು ಇತ್ಯಾದಿಗಳು antibacterial ಆಗಲು triclosan ಸೇರಿಸಿರುತ್ತಾರೆ. ಈ triclosan ಗೆ antibacterial ಮತ್ತು ಸ್ವಲ್ಪಮಟ್ಟಿಗೆ antifungal, antiviral ಗುಣಗಳು ಇವೆ. ಇಷ್ಟು ಗುಣವಿದೆ ಎಂದ ಕೂಡಲೆ ಶುರು-triclosan ಟ್ರೆಂಡ್. ಲಿಕ್ವಿಡ್ ಸೋಪು, ಸೋಪು, ಬಟ್ಟೆ ಸೋಪು,ಟೂತ್ ಪೇಷ್ಟ್,ಟೂತ್ ಬ್ರಷ್, ಕಾಸ್ಮೆಟಿಕ್ಸ್, ಡಿಯೋಡರೆಂಟ್ಸ್, ಶೇವಿಂಗ್ ಕ್ರೀಮ್ ಹೆಚ್ಚಿನವು triclosan ಯುಕ್ತವಾಯಿತು. ಇದನ್ನು ನೋಡಿ ನಾವೇನು ಕಮ್ಮಿಯೆಂದು ಮಕ್ಕಳ ಆಟದ ಸಾಮಾನುಗಳು, ಫರ್ನಿಚರ್‌ಗಳು, ಹೆಲ್ಮೆಟ್, ಪೈಂಟ್ ಇತ್ಯಾದಿ ಸಹ antibacterial ಆಗಲು ಹೊರಟವು. ಅಡುಗೆ ಮನೆಯ ಕಟ್ಟಿಂಗ್ ಬೋರ್ಡ್‌ಗಳು, ಸ್ಲೈಸರ್‌ಗಳೂ triclosan ಮೋಡಿಗೊಳಗಾದವು. ನೀವೂ ಸ್ವಲ್ಪ ಮೌಸ್ ಪ್ಯಾಡ್‌ನಿಂದ ಕೈ ಎತ್ತುವಿರಾ? ಅದರಲ್ಲಿ microban mouse pad ಎಂದಿದೆಯೋ? microban cordless keyboard ಉಪಯೋಗಿಸುತ್ತೀರೋ? Triclosan ಟ್ರೆಂಡ್ ಇಲ್ಲಿವರೆಗೆ ಮುಟ್ಟಿದೆ. ಈ triclosan ನಾವು ಉಪಯೋಗಿಸುವ ಕ್ಲೋರಿನ್‌ಯುಕ್ತ ನಳ್ಳಿನೀರಿನೊಂದಿಗೆ ಸೇರಿ ಕ್ಯಾನ್ಸರ್‌ಕಾರಕವಾಗಬಹುದಾದ ಕ್ಲೋರೋಫಾರ್ಮ್ ಉತ್ಪತ್ತಿ ಮಾಡುವುದು. ಸ್ವಿಮ್ಮಿಂಗ್ ಪೂಲ್‌ನ ನೀರಿನಲ್ಲಿ ಕ್ಲೋರಿನ್ ಪ್ರಮಾಣ ಜಾಸ್ತಿ ಇರುತ್ತದೆ. ಈಜಿ ಆದಮೇಲೆ, ಅಲ್ಲಿ ಬಂದಿರುವವರ ಚರ್ಮದ ಕಾಯಿಲೆ ತಮಗೆ ಅಂಟಬಾರದೆಂದು ಈ triclosan ಸೇರಿದ ಸೋಪುಗಳಿಂದ ಉಜ್ಜಿ,ಉಜ್ಜಿ ಸ್ನಾನ ಮಾಡಿ ಚರ್ಮದ ರೋಗ, ಅಲರ್ಜಿ ನಿಜವಾಗಿಯೂ ಬರಬಹುದು . ಯೋಚಿಸಿ.. triclosan ಸೇರಿದ ಯಾವುದೇ ವಸ್ತುವಿನ ಅಗತ್ಯವಿದೆಯೆ? ಮುಂದಿನ ಬಾರಿ ಸೋಪು.. .. ತೆಗೆದುಕೊಳ್ಳುವಾಗ ಅದರಲ್ಲಿ ಏನೇನಿದೆ ಎಂದು ಒಮ್ಮೆ ಕಣ್ಣು ಹಾಯಿಸಿ..
-ಗಣೇಶ.
Comments
ಉ: ಟ್ರೆಂಡ್..(-ಗಣೇಶ)
In reply to ಉ: ಟ್ರೆಂಡ್..(-ಗಣೇಶ) by venkatb83
ಉ: ಟ್ರೆಂಡ್..(-ಗಣೇಶ)
In reply to ಉ: ಟ್ರೆಂಡ್..(-ಗಣೇಶ) by ಗಣೇಶ
ಉ: ಟ್ರೆಂಡ್..(-ಗಣೇಶ)
ಉ: ಟ್ರೆಂಡ್..(-ಗಣೇಶ)
In reply to ಉ: ಟ್ರೆಂಡ್..(-ಗಣೇಶ) by padma.A
ಉ: ಟ್ರೆಂಡ್..(-ಗಣೇಶ)