ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಂದೆಯ ದಿನ

ನನ್ನ ತಂದೆ ಸತ್ತಾಗ ನನಗೆ ೬ ವರ್ಷ. ಆಕಸ್ಮಿಕವಾಗಿ ಹೃದಯಾಘಾತವಾಗಿ ಒಂದು ಭಾನುವಾರ ಸಾಯಂಕಾಲ ನಮ್ಮನ್ನು ಅಗಲಿದರು. ಅವರು ಎದೆನೋವು ಎಂದೊಡನೆ ನನ್ನ ಅಕ್ಕಂದಿರು ಪಕ್ಕದಲ್ಲಿದ್ದ ವೈದ್ಯರನ್ನು ಕರೆತರಲು ಓಡಿದರೆ, ನನ್ನ ಅಣ್ಣಂದಿರು ಔಷಧಿ ತರಲು ನಡೆದರು. ಹೀಗಾಗಿ ನನ್ನ ತಂದೆಯ ಕೊನೆಯುಸಿರು ನೋಡಿದ್ದು ನಾನು ಮತ್ತು ನನ್ನ ತಾಯಿ ಇಬ್ಬರೇ. ನನ್ನ ತಾಯಿ ಅವರ ಬಾಯೊಳಗೆ ಸುರಿದ ಗಂಗಾಜಲ ನೊರೆ ನೊರೆಯಾಗಿ ಆಚೆ ಇಳಿದಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಪ್ಪನನ್ನು ಚಟ್ಟಕ್ಕೆ ಬಿಗಿದು, ಅವರ ಬಾಯಿಗೆ ಅಕ್ಕಿಕಾಳು ಹಾಕಿದ್ದು, ನಮ್ಮ ಗೋಳಾಟ, ಅಸಹಾಯಕತೆಯನ್ನು ಕುತೂಹಲದಿಂದ ನೋಡಲು ಅಪರಿಚಿತರು ಮನೆಯ ಮುಂದೆ ನೆರೆದದ್ದು, ಇವೆಲ್ಲಾ ಎಂದೂ ಮರೆಯದ ದೃಶ್ಯಗಳು. ಆ ಒಂದು ರಾತ್ರಿ ನಮ್ಮ ಪರಿವಾರದ ಎಲ್ಲರ ಮೇಲೂ ಒಂದೊಂದು ರೀತಿಯ ಪರಿಣಾಮ ಬೀರಿತು.

ಆರು ವರುಷದ ಮಗುವಿಗೆ ಇದರಿಂದ ಮಾನಸಿಕವಾಗಿ ಹೆಚ್ಚೇನೂ ಬದಲಾಗಬಾರದಲ್ಲವೇ? ಏಕೆಂದರೆ, ಮಗುವಿಗೆ ಏನು ತಿಳಿದೀತು ಎಂದೆನಿಸುತ್ತಲ್ಲವೇ? ಆದರೆ, ನನಗೇ ಆಶ್ಚರ್ಯವಾಗುವಂತೆ ಆ ಘಟನೆ ನನ್ನನ್ನು ಬದುಕಿನಲ್ಲಿ ರೂಪಿಸಿದೆ. ಆ ದಿನಗಳಲ್ಲಿ ಎಲ್ಲರೂ ನನ್ನನ್ನು ಅನುಕಂಪದಿಂದ ನೋಡುತ್ತಿದ್ದಂತೆ ಭಾಸವಾಗುತ್ತಿತ್ತು ಮತ್ತು ಆ ನೋಟವನ್ನು ನಾನು ದ್ವೇಷಿಸುವಂತೆ ಮಾಡುತ್ತಿತ್ತು. ಈಗಲೂ ಸಹ ನನಗೆ ಯಾರದೇ ಸಹಾನುಭೂತಿ ಅಥವಾ ಕರುಣೆ ರುಚಿಸುವುದಿಲ್ಲ. ಹತ್ತಿರದವರ ಮುಂದೆಯೂ ನನ್ನ ದುರ್ಬಲತೆಯನ್ನು ತೆರೆದಿಡಲು ಹೆದರುತ್ತೇನೆ, ಏಕೆಂದರೆ, ಅದರಿಂದ ಅವರಲ್ಲಿ ಹುಟ್ಟುವ ಅನುಕಂಪ ನನಗೆ ಸೇರುವುದಿಲ್ಲ.

ray ಕಿರಣ ಆದ್ರೆ radiation ವಿಕಿರಣ ಅಂತೆ !?

radiation ಗೆ ವಿಕಿರಣ ಸರಿಯಾದ ಪದವೆ?

ವಿಕಿರಣ ಅಂದ್ರೆ ವಿಶೇಶ ಕಿರಣ? ....ಅಂದ್ರೆ ಇಂಗ್ಲಿಸಿನಲ್ಲಿ ಅದು special rays ಅಂತ ಆಗಬೇಕಿತ್ತು.

ಅಚ್ಚಗನ್ನಡದ ಫಲಕ

ಮದುವೆ ಮಂಟಪಗಳ ಸಂಖ್ಯೆ ಹೆಚ್ಚಿದಷ್ಟೂ ಗೊಂದಲ ಉಂಟಾಗುವುದು ಸಹಜ. ಮದುವೆಗೆ ಬಂದವರು ತಪ್ಪಾಗಿ ಬೇರೊಂದು ಛತ್ರದೊಳಕ್ಕೆ ಹೋಗುತ್ತಾರೆಂದರೆ ಈ ಗೊಂದಲವೇ ಕಾರಣ. ಅದಕ್ಕೇ ಈಗೀಗ ಮದುವೆ ಮಂಟಪದ ಮುಂದೆಯೇ ದೊಡ್ಡದಾಗಿ ವಧು ವರರ ಹೆಸರನ್ನು ಪ್ರದರ್ಶಿಸಿರುತ್ತಾರೆ. ಬಣ್ಣದ ದೀಪಗಳಿಂದ ಹಿಡಿದು ಹೂಗಳ ಅಲಂಕಾರದವರೆಗೆ ಈ ಹೆಸರುಗಳು ಬಹು ಸುಂದರವಾಗಿ ರಾರಾಜಿಸುತ್ತವೆ.

ಕನ್ನಡದಲ್ಲಿ ವಿಜ್ಞಾನ ಬರವಣಿಗೆ:ಮಿತಿ ಮತ್ತು ಪ್ರಯೋಜನ

ಈ ವಿಷಯದ ಮೇಲೆ ಉತ್ತರ ಅಮೆರಿಕಾದ ಮೇರಿಲ್ಯಾಂಡ್ ಕನ್ನಡಿಗರ ಕುಟೀರ ಭೂಮಿಕಾ ವೇದಿಕೆಯಲಿ "ವಿಚಿತ್ರಾನ್ನ" ಖ್ಯಾತಿಯ ಶ್ರೀವತ್ಸ ಜೋಷಿ ವಿಚಾರ ಮಂಡಿಸಿದರಂತೆ. ಅದರ ವರದಿ ಶಾಂತಲಾ ದಾಮ್ಲೆ ಅವರದ್ದು.
http://thatskannada.oneindia.in/nri/article/180607science_bhoomika.html

ಕಬ್ಬಿಗ = ಕವಿ

ಜೈ ಭಾರತ ಜನನಿಯ ತನು- ಜಾತೆ - ಯಲ್ಲಿ 'ಕಬ್ಬಿಗರುದಿಸಿದ ಮಂಗಳಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ' ಅನ್ನುತ್ತಾರೆ ಕುವೆಂಪು. ಕಬ್ಬಿಗ ಅನ್ನುವ ಶಬ್ದದ ಅರ್ಥ ಕವಿ ಎಂದು ಆದಲ್ಲಿ , ಒಂದೇ ಅರ್ಥ ಬರುವ ಎರಡು ಶಬ್ದಗಳನ್ನು ಪಕ್ಕ ಪಕ್ಕ ಇಟ್ಟರೆ ಕುವೆಂಪು.. ? ಅಥವಾ ಕಬ್ಬಿಗ ಅಂದರೆ ಬೇರೆ ಅರ್ಥವಿದೆಯೆ...?

ಸುಭಾಷಿತ

ಎಲ್ಲ ಕಲ್ಲುಗಳಲ್ಲಿ ಮಾಣಿಕ್ಯ ಸಿಗುವುದಿಲ್ಲ, ಎಲ್ಲ ಆನೆಗಳಲ್ಲಿ ಮೌಕ್ತಿಕ ದೊರೆಯುವುದಿಲ್ಲ, ಎಲ್ಲ ಕಾಡುಗಳಲ್ಲಿ ಶ್ರೀಗಂಧ ಸಿಗುವುದಿಲ್ಲ, ಹಾಗೆಯೇ ಎಲ್ಲ ಕಡೆ ಸಾಧುಗಳು ಇರುವುದಿಲ್ಲ. 

'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!

ಅನಂತಮೂರ್ತಿಯವರಿಗೆ ಬೇಸರವಾಗಿದೆ. ಕೋಪವೂ ಬಂದಂತಿದೆ. ತಾವಿನ್ನು ಸಾರ್ವಜನಿಕವಾಗಿ ಸಾಹಿತ್ಯ ಚರ್ಚೆ ಮಾಡುವುದಿಲ್ಲವೆಂದು ಅವರು ಘೋಷಿಸಿದ್ದಾರೆ. ದಯವಿಟ್ಟು ಹಾಗೆ ಮಾಡಬೇಡಿ ಎಂದು ಅವರ ಶಿಷ್ಯರೂ ಅಭಿಮಾನಿಗಳೂ ಬೇಡಿಕೊಳ್ಳುತ್ತಿದ್ದಾರೆ. ಈ ರಾದ್ಧಾಂತಕ್ಕೆಲ್ಲ ಕಾರಣಗಳು: ಇತ್ತೀಚೆಗೆ ಬೆಂಗಳೂರಿನಲ್ಲಿ ಭೈರಪ್ಪನವರ 'ಆವರಣ' ಕೃತಿ ಕುರಿತು ಎನ್.ಎಸ್.ಶಂಕರ್ ಬರೆದಿರುವ 'ಆವರಣದ ಅನಾವರಣ' ಎಂಬ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಅವರಾಡಿದ ಮಾತುಗಳು ಪತ್ರಿಕೆಗಳಲ್ಲಿ ವರದಿಯಾಗಿರುವ ರೀತಿ ಹಾಗೂ ಇದನ್ನು ಆಧರಿಸಿ ಒಂದೆರಡು ಪತ್ರಿಕೆಗಳು ಇವರ ವ್ಯಕ್ತಿತ್ವದ ಮೇಲೆ ವ್ಯವಸ್ಥಿತವಾಗಿ ನಡೆಸಿರುವ ದಾಳಿ.
ಎಲ್ಲವನ್ನೂ 'ಬಿಸಿ ಬಿಸಿ' ಸುದ್ದಿಯಾಗಿ ಪರಿವರ್ತಿಸಿ ಓದುಗರಿಗೆ ಉಣಬಡಿಸುವ ಚಾಳಿ ಬೆಳೆಸಿಕೊಂಡಿರುವ ಇತ್ತೀಚಿನ ವ್ಯಾಪಾರಿ ಪತ್ರಿಕೋದ್ಯಮಕ್ಕೆ ರಾಜಕಾರಣ, ಸಾಹಿತ್ಯ, ಸಂಸ್ಕೃತಿ ಎಲ್ಲ ಒಂದೇ. ಹಾಗಾಗಿಯೇ, ಸಾಹಿತ್ಯ-ಸಂಸ್ಕೃತಿಗಳಿಗೆ ಸಂಬಂಧಪಟ್ಟ ಸಮಾರಂಭಗಳಿಗೆ ವಿಶೇಷ ಒಲವು ಅಥವಾ ತರಬೇತಿಯುಳ್ಳ ವರದಿಗಾರರನ್ನು ಕಳಿಸುವ ಪರಿಪಾಠ ಎಂದೋ ನಿಂತು ಹೋಗಿದೆ. ಇಂತಹ ಪರಿಸ್ಥಿಯಲ್ಲಿ ವಿಚಾರ ಸಂಕಿರಣಗಳಲ್ಲಿ ಮಾತನಾಡುವವರು, ಸೂಕ್ಷ ಸಾಹಿತ್ಯ ಚಿಂತನೆ ಅಥವಾ ಚರ್ಚೆಗೆ ಚಾಲನೆ ನೀಡುವ ಮುನ್ನ ಎರಡು ಬಾರಿ ಯೋಚಿಸಿ ಮಾತುಗಳನ್ನಾರಂಭಿಸುವಂತಾಗಿದೆ. ಏಕೆಂದರೆ, ಮಾರನೆಯ ಬೆಳಿಗ್ಗೆ ಯಾವದೋ ಒಂದು ಪತ್ರಿಕೆ ತನ್ನ ಮಾರುಕಟ್ಟೆ ದೃಷ್ಟಿಯಿಂದಲೋ ಅಥವಾ ತಾನು ನಂಬಿರುವ ರಾಜಕೀಯ ಸಿದ್ಧಾಂತದ ದೃಷ್ಟಿಯಿಂದಲೋ, ಪ್ರಚೋದಕ ಶೀರ್ಷಿಕೆ ಕೊಟ್ಟು ಅವನ ಮಾತುಗಳನ್ನು ತಿರುಚಿಯೋ, ಸಂದರ್ಭ ಕಿತ್ತು ಉಲ್ಲೇಖಿಸಿಯೋ ವಿವಾದ ಸೃಷ್ಟಿಸುವ; ಅಥವಾ ಬೇಕೆಂದೇ ಆ ಮಾತಿನ ಮಹತ್ವವನ್ನೇ ಹಾಳು ಮಾಡುವ ರೀತಿಯಲ್ಲಿ ವರದಿ ಮಾಡುವ ಸಾಧ್ಯತೆಗಳು ಇಂದು ಹೆಚ್ಚಿವೆ. ಹೀಗಾಗಿ ಸಮಾರಂಭದ ವರದಿಗೆ ಯಾವ ಪತ್ರಿಕೆಯವರು ಮತ್ತು ಯಾವ ವರದಿಗಾರರು ಬಂದಿದ್ದಾರೆ ಎಂದು ಪತ್ತೆ ಹಚ್ಚಿ ಮಾತನಾಡಬೇಕಾದ ದುಃಸ್ಥಿತಿ ನಮ್ಮ ಸಾಂಸ್ಕೃತಿಕ ಲೋಕಕ್ಕೆ ಒದಗಿ ಬಂದಿದೆ! ಇದು ಬಹುತೇಕ ಸಂದರ್ಭಗಳಲ್ಲಿ ಅಸಾಧ್ಯವಾದುದರಿಂದ, ಪತ್ರಕರ್ತರಿದ್ದ ಸಮಾರಂಭಗಳಲ್ಲಿ ಸೂಕ್ಷ್ಮ ವಿಚಾರಗಳನ್ನು ಮಾತನಾಡದಿರುವುದು, ಚರ್ಚಿಸದಿರುವುದು ಒಳ್ಳೆಯದೆಂದು ಕೆಲವರು ಭಾವಿಸತೊಡಗಿದ್ದರೆ ಆಶ್ಚರ್ಯವಿಲ್ಲ.

ಸ"ಪದ": ಗುಣಾಣು

ಗುಣಾಣು ಎನ್ನುವ ಶಬ್ದ ಕೇಳಿದ್ದೀರಾ? ಇದರ ಜನಪ್ರಿಯ ಪರ್ಯಾಯ ಪದ ಯಾವುದು? ವೈಜ್ಞಾನಿಕ ಪದ ಎನ್ನುವುದು ಸುಳಿವು. ಗೊತ್ತಾಗದಿದ್ದರೆ ಈ ಲೇಖನ ಓದಿ.
http://vijaykarnatakaepaper.com/pdf/2007/06/18/20070618a_008101002.jpg

ನೊಣಗಳಿಗೆ ದೀರ್ಘಾಯುಸ್ಸು -ಮನುಷ್ಯರಿಗೂ?

ನೊಣಗಳ ಆಯುಸ್ಸು ಹೆಚ್ಚಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ? ಇದನ್ನು ಸಾಧಿಸಿದ್ದು ಹೇಗೆ? ಇದರಿಂದ ಏನು ಲಾಭ?
ಲೇಖನ ಓದಿ-ನೇಟ್‍ನೋಟ-ಸುಧೀಂದ್ರ ಹಾಲ್ದೊಡ್ಡೇರಿ
http://vijaykarnatakaepaper.com/pdf/2007/06/18/20070618a_008101002.jpg