ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯೂನಿಕೋಡ್

ಕಂಪ್ಯೂಟರಿನಲ್ಲಿರುವ ಇಂಗ್ಲಿಷ್ ಅಕ್ಷರಗಳಿಗೆ ASCII (American Standard Code for Infromation Interchange=ಮಾಹಿತಿ ವಿನಿಮಯಕ್ಕೆ ಅಮೆರಿಕದ ಮಾನಕ) ಅಳವಡಿಸಿರುವುದರಿಂದ ಒಂದು ಕಂಪ್ಯೂಟರಿನಲ್ಲಿ ಟೈಪಿಸಿದ ಮಾಹಿತಿಯನ್ನು ತೆಗೆದುಕೊಂಡು ಮತ್ತೊಂದು ಕಂಪ್ಯೂಟರಿನಲ್ಲಿ ತೆರೆದು ನೋಡಿದಾಗಲೂ ಅದೇ ಅಕ್ಷರಗಳನ್ನು ಕಾಣಬಹುದಾಗಿದೆ.

’ಆವರಣ’ದ ಬಗ್ಗೆ ವೀಕೆಂಡ್ ಕಾರ್ಯಕ್ರಮ : ಭೈರಪ್ಪ ಬೆಂಗಳೂರಿನಲ್ಲಿ !

ಆವರಣದ ಬಗ್ಗೆ ಬರುವ ರವಿವಾರ(೧೭ ಜೂನ್ ೨೦೦೭) ಜಯನಗರದ ಎಚ್ ಎನ್ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿರುವದಾಗಿ ವಿ.ಕ ದಲ್ಲಿ ಹೋದವಾರ ಓದಿದ ನೆನಪು. ನನಗೆ ವಿವರಗಳು ಚೆನ್ನಾಗಿ ನೆನಪಿಲ್ಲ.

’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?

ನಿನ್ನೆ ಮತ್ತೊಂದು ಆವರಣ ವಿಮರ್ಶಾ ಕೃತಿ ಎಂದು ಹೇಳಿಕೊಳ್ಲ್ವುವ ಪುಸ್ತಕ ಬಿಡುಗಡೆಯಾಗಿದೆ. ಹೆಸರೇ ’ಆವರಣ ಎಂಬ ವಿಕೃತಿ’! ವಾರೇ ವ್ಹಾ!! ಆವರಣಕ್ಕೆ ಬೇಲಿ ಹಾಕುವ ಅನೇಕ ಪ್ರಯತ್ನಗಳಲ್ಲಿ ಇದು ಮತ್ತೊಂದಷ್ಟೆ ವಿನಃ ಬೇರೆನಿಲ್ಲ.

ನನಗನಿಸಿದ್ದು - ಇದೆಲ್ಲಾ popularityಯನ್ನ cash ಮಾಡಿಕೊಳ್ಳುವ ಪ್ರಯತ್ನವಷ್ಟೆ.

ಜಂಬದ ಕಾಗೆ

ಜಂಬದ ಕಾಗೆ

ಕಿಟಕಿಯ ಆಚೆ ಇಣುಕಿದೆ ನಾನು
ಕರ್ರಗೆ ಕಾಗೆ ಕುಳಿತಿತ್ತಲ್ಲಿ

ತಕ್ಷಣವೇ ನಾ ಅಣಕಿಸ ಹೊರಟೆ
"ಅಪಸ್ವರದಾ ಪ್ರತಿಮೂರ್ತಿ ಇಲ್ಲಿ"

ಕಾ ಕಾ ಎಂದು ನಾ ಕರೆದಾಗ
ಹಾರಿತು ಕಾಗೆ ಖಾಲಿ ಆ ಜಾಗ

ಅಣಕು ಕೊಡದು ಖುಷಿಯು ಮನಕೆ
ದನಿ - ಕರ್ಣಕಠೋರವಾಗಿತ್ತದಕೆ

ಸುಶ್ರಾವ್ಯನೆಂದು ತಿಳಿದಿದ್ದೆನಗೆ
ಆಯಿತು ಮಂಗಳ ಆರುತಿ ಕೊನೆಗೆ

ನಾನಗಿದ್ದೆ ಜಂಬದ ಕಾಗೆ

ಎಲೆ ತಾವರೆ, ಹೂದಾವರೆ...

ಈಗಿನ್ನೂ ಮುಂಗಾರುಮಳೆ ಪ್ರಾರಂಭವಾಗಿದೆ. ಹೆಚ್ಚಾಗಿ ಎಲ್ಲಾ ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಆದರೆ ಈ ಒಂದು ಕೆರೆ ಮಾತ್ರ ನೋಡಿ ಅದು ಹೇಗೆ ಮಳೆಯ ಹಂಗಿಲ್ಲ ಎಂಬಂತೆ ನೀರುತುಂಬಿ ತಾವರೆತುಂಬಿ ಕಂಗೊಳಿಸುತ್ತಿದೆ. ಶಿಕಾರಿಪುರ ತಾಲೂಕಿನ ಕಲ್ಮನೆ ಯ ಸಮೀಪದ ಈ ‘ತಾವರೆಕೆರೆ’ ತುಂಬ ಸಾವಿರಾರು ತಾವರೆಗಳು.

ಉಸಿರಾಡುವುದು ಗೊತ್ತು

ಗಾಳಿ ಇರುವುದು ಗೊತ್ತು
ನಾವು ಉಸಿರಾಡುವುದರಿಂದ
ಗಿಡ,ಮರ ಎಲೆಗಳು ಅಲುಗಾಡುವುದರಿಂದ.

ಬೆಂಕಿ ಇರುವುದು ಗೊತ್ತು
ಬೂದಿ ಮುಚ್ಚಿದ್ದರೂ ಬಿಸಿ ತಟ್ಟುವುದರಿಂದ
ತರಗೆಲೆ,ಪುಳ್ಳೆ,ಬರಲುಗಳೆಲ್ಲ
ತಟ್ಟನೆ ಬುರ್ರನೆ ಉರಿದು ಬೂದಿಯಾಗುವುರಿಂದ.

ನೆರಳು

ನನ್ನ ಬಳುಕದ ಮನಸ್ಸಿನ ಮೇಲೆ ನಿನ್ನ ನೆರಳು
ನೆರಳಲ್ಲೂ ಕೆಂಪು ಹೂ
ಗಿಡದ ಚಿಗುರು.
ನಿನ್ನ ತೊನೆಯುವ ಮೈ ಮೇಲೆ ನನ್ನ ನೆರಳು
ತೇವದಲ್ಲಿ
ಮಣ್ಣುಳ
ಜಿಗಣೆ
ಇರುವೆಗೂಡು.

*ಕಗ್ಗಕ್ಕೊಂದು ಕೈಪಿಡಿ- [ ಮಂಕುತಿಮ್ಮ ಗುರುವಿನ ತತ್ವದರ್ಶನ ]- ಶ್ರೀ. ಡಿ. ಆರ್. ವೆಂಕಟರಮಣನ್

*ಕಗ್ಗಕ್ಕೊಂದು ಕೈಪಿಡಿ- [ ಮಂಕುತಿಮ್ಮ ಗುರುವಿನ ತತ್ವದರ್ಶನ]
ಕ್ರಯ : ೨೨೫ ರೂ./- ( ಒಟ್ಟು ೫೭೨ ಪುಟಗಳು)

ರಚನೆ :

ಶ್ರೀ. ಡಿ. ಆರ್. ವೆಂಕಟರಮಣನ್
ನಿತ್ಯಾನಂದ ಪ್ರಿಂಟರ್ಸ್, ಅಶೋಕನಗರ,
ಬೆಂಗಳೂರು -೫೬೦ ೦೫೦. ೨೦೦೦.

ಅತ್ಯದ್ಭುತ ಸೃಷ್ಟಿ ಯಾವುದು?

ಅತ್ಯದ್ಭುತ ಸೃಷ್ಟಿ?

ದೇವನಲಿ ಹುಟ್ಟಿಹುದು ಒಂದು ಪರಿಪ್ರಶ್ನೆ
ಬ್ರಹ್ಮಾಂಡದಿ ಭವ್ಯ ಯಾವುದು ನನ್ನ ಸೃಷ್ಣೆ?

ಉತ್ತರಕೆ ಸುತ್ತಿಹನು ಇಡೀ ನಭೋಮಂಡಲ
ಎಲ್ಲೂ ಸಿಗದು - ಕಡೆಗೆ ಕಂಡಿತು - ಸೌರ ಮಂಡಲ

ಸೂರ್ಯನ ನೋಡಿದರೆ ಸುಡುವಗ್ನಿ ಕುಂಡ
ಮಂಗಳನಿಲ್ಲಾಗಿಹನು ಕಡು ಕೆಂಪು ಕೆಂಡ

ಗುರುವಿಗೆ ಕ್ಷುದ್ರಗ್ರಹದ ಕಾಟವಿರುವುದಿಲ್ಲಿ
ನೆಪ್ಚೂನ್-ಯುರೇನಸ್ ಬಿಳಿಚಿಹರು ಅಲ್ಲಿ