ಧರೆಯೆ ಹತ್ತಿ ಉರಿಯುವಾಗ ಎಲ್ಲಿ ಓಡಿ ಹೋಗುವೆ?
ಭೂತಾಯಿಯ ತಾಪಮಾನ ಏರುತ್ತಿರುವ ವಿಷಯ ಇವತ್ತು ಕೇವಲ ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿ ಇರುವವರ ಅಥವ ತಾವು ತೆರಳುವಾಗ ತಾವು ಬಂದಾಗ ಹೇಗಿತ್ತೊ ಅದಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿ ಈ ನಿಸರ್ಗವನ್ನು ಬಿಟ್ಟು ಹೋಗಬೇಕು ಎಂದು ಹಂಬಲಿಸುವ ಸಜ್ಜನರ ಕಾಳಜಿ ಮಾತ್ರವಾಗಿ ಉಳಿದಿಲ್ಲ. ಜಾತಿ, ಮತ, ವರ್ಣ ಶ್ರೇಷ್ಠತೆ ಎಂದೆಲ್ಲ ಸಂಕುಚಿತವಾಗಿ ಕನವರಿಸುವ ಧರ್ಮಲಂಡರೆಲ್ಲ ಈಗ ಪರಿಸರ ಪರಿಸರ ಎಂದು ಕನವರಿಸುವಷ್ಟು ಭೂಮಿ ಬಿಸಿಯಾಗುತ್ತಿದೆ. ಕನ್ನಡದ ದಿನಪತ್ರಿಕೆಯೊಂದರಲ್ಲಿ ಪರಿಸರದ ಬಗ್ಗೆ ಮತಾಂಧರೊಬ್ಬರು ಬರೆದಿರುವ ಸಾಲುಗಳು ಇವು: "ಇಂದು ಪರಿಸರ ಸಂರಕ್ಷಣೆಯ ಬಗ್ಗೆ ಅನೇಕ ಯೋಜನೆಗಳನ್ನು ಹಾಕಲಾಗುತ್ತಿದೆ. ಇದು ಬರಿಯ ಜನಮೆಚ್ಚುಗೆ ಗಳಿಸುವ ನಾಟಕವಾಗಿದೆಯೇ ಹೊರತು ಕಾರ್ಯ ರೂಪದಲ್ಲಿ ಏನೂ ಆಗುತ್ತಿಲ್ಲ. ಅನೇಕ ಸಾಂಕ್ರಾಮಿಕ ರೋಗಗಳಿಂದ ಜನರು ನರಳುತ್ತಿದ್ದಾರೆ. ಪ್ರಪಂಚದ ತಾಪಮಾನವು ಸತತವಾಗಿ ದಿನೇ ದಿನೇ ಹೆಚ್ಚುತ್ತಿದೆ. ಗಾಳಿ ಮತ್ತು ನೀರು ಕಲುಷಿತವಾಗಿದೆ. ಆದರೂ ಯಾರಿಗೂ ಅದರ ಪರಿವೆಯೇ ಇಲ್ಲವಾಗಿದೆ. ಶಿವಾಜಿಯು ಪರಿಸರದ ಬಗ್ಗೆ ಎಂದೂ ಭಾಷಣವನ್ನಾಗಲೀ ಉಪದೇಶವನ್ನಾಗಲೀ ಮಾಡುವ ಗೋಜಿಗೆ ಹೋಗಲಿಲ್ಲ. ಆದರೆ ಅವನ ಪ್ರತಿಯೊಂದು ನಡೆ ನುಡಿಯೂ ಪರಿಸರದ ರಕ್ಷಣೆಯಲ್ಲಿಯೇ ಮಗ್ನವಾಗಿರುತ್ತಿದ್ದಿತು. ಹೇರಳವಾಗಿ ಮರಗಳನ್ನು ಕಡಿದು ಹಡಗು ನಿರ್ಮಾಣ ಮಾಡಬಹುದಾಗಿದ್ದಿತು. ಆದರೆ ಎಂದೂ ಒಂದು ಮರವನ್ನು ಕಡಿಯುವ ಯೋಚನೆಯನ್ನು ಮಾಡಲಿಲ್ಲ."
- Read more about ಧರೆಯೆ ಹತ್ತಿ ಉರಿಯುವಾಗ ಎಲ್ಲಿ ಓಡಿ ಹೋಗುವೆ?
- Log in or register to post comments