ಬ್ರೆಡ್ ಪಕೋಡ !
- Read more about ಬ್ರೆಡ್ ಪಕೋಡ !
- 4 comments
- Log in or register to post comments
ವಿಂಡೋಸ್ ಎಕ್ಸ್.ಪಿ. ಯಲ್ಲಿ ಇಲ್ಲಿಯವರೆಗೂ microsoft phonetic input tool ಉಪಯೋಗಿಸುತ್ತಿದ್ದೆ. ಅದರ ಇವಾಲ್ಯುಯೇಷನ್ ಅವಧಿ ಮುಗಿದಿದೆ. ಇದನ್ನು ಇನ್ನು ಮೈಕ್ರೊಸಾಫ್ಟಿನಿಂದ ಖರೀದಿಸಬೇಕೆ? ಅವರ ವೆಬ್‍ಸೈಟಿನಲ್ಲೆಲ್ಲೂ ಅದು ಕಾಣಸಿಗುತ್ತಿಲ್ಲ. ಮೈಕ್ರೋಸಾಫ್ಟ್ 'connect' ನಲ್ಲಿಯೂ ಸಹ. ಅಥವಾ, MSPhi ಯನ್ನು ರದ್ದುಗೊಳಿಸಲಾಗಿದೆಯೇ?
ಕನ್ನಡದಿಂದಲೇ ನನ್ನ ಬದುಕು
ಕನ್ನಡದಿಂದಲೇ ಅರಿವಿನ ಬೆಳಕು
ಕನ್ನಡದಲ್ಲೇ ನನ್ನ ಹುಡುಕು
ಕನ್ನಡದ ಕಣ್ಣಲ್ಲೇ ನಾನೆಲ್ಲವನ್ನು ನೋಡಬೇಕು
ಸಕ್ಕದಿಂಗಲೀಸಿನ ಹೊರೆ ಸಾಕು
ಕನ್ನಡದ ಬಳಕೆ ಹೆಚ್ಚಬೇಕು
ಕನ್ನಡದ ಸೊಗಡು ಇದರಿಂದ ಉಳಿಯಬೇಕು
ನಿನ್ನೆ ಮೈಕ್ರೋಸಾಪ್ಟ್ ನವರ ಸೈಟ್ ನಲ್ಲಿ ಕಾಲಹರಣ ಮಾಡುತ್ತಿದ್ದೆ.
ಆ ಸೈಟ್ ನಲ್ಲಿ ಭಾಷೆಗಳನ್ನು ಒ೦ದು ಮಾರುವ ಪದಾರ್ಥದ೦ತೆ ಬ್ರಾ೦ಡ್ ಇಮೇಜ್ ಕೊಟ್ಟಿದ್ದಾರೆ.
ಮರಾಠಿ - ಯೋಧರ ಭಾಷೆಯ೦ತೆ.
ತೆಲುಗು - ಪೂರ್ವ ದೇಶಗಳ ಈಟೇಲಿಯನ್ ಭಾಷೆಯ೦ತೆ.
ಸ೦ಸ್ಕೃತ - ತಾಯಿ ಭಾಷೆಯ೦ತೆ.
ಹಿ೦ದಿ - ನಮ್ಮ ದೇಶದ ರಾಷ್ಟ್ರ ಭಾಷೆಯ೦ತೆ.
ಇದು ಎಲ್ಲಾದಕ್ಕೂ ದೊಡ್ಡ ಸುಳ್ಳ್ ವಾಕ್ಯವ೦ದರೆ :
ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗತಿ; ಅದೂ ಆ ವೇಳೆಗೆ ಸರಿಯಾದ ವ್ಯವಸ್ಠೆ ಇಲ್ಲದಿದ್ದರೆ..? ಅಧೋಗತಿಯೇ! ಅಂತಹ ಕೆಲವು ಅನುಭವಗಳ ಕಂತೆಯೇ ಈ ಶೌಚನೀಯ ಕತೆ.
ಜನವರಿ ೨೦೦೬ ರಲ್ಲಿ ನಾನು ಬ್ಲಾಗ್ ಬರೆಯಲು ಆರಂಭಿಸಿದ್ದು . ಕಳೆದ ನಲವತ್ತು ವರ್ಶದಲ್ಲಿ ನಾನು ಓದಿದ್ದ ಒಳ್ಳೆ ವಿಷಯಗಳನ್ನು ಕುರಿತು ಇಲ್ಲಿ ಬ್ಲಾಗ್ ರೂಪದಲ್ಲೂ ಕೆಲವು ಲೇಖನ ರೂಪದಲ್ಲೂ ( ಸುಭಾಶಿತ , ಝೆನ್ ಕತೆ , ಪುಸ್ತಕ ವಿಮರ್ಶೆ ಇತ್ಯಾದಿ) ಬರೆದಿದ್ದೇನೆ . ಸುಮಾರು ೨೦೦ ಬ್ಲಾಗ್ ಲೇಖನಗಳಿರಬಹುದು . ಲೇಖನಗಳು ಒಂದೈವತ್ತು ಇರಬಹುದು .
೧. ನಾನು ಯಾರು ? ಏನ್ ಮಾಡ್ತಿದ್ದೀನಿ ? ಯಾಕೆ ಮಾಡ್ತಿದ್ದೀನಿ ? ಸುತ್ತ ಏನಾಗ್ತಿದೆ ? ಯಾರ್ ಏನ್ ಮಾಡ್ತಿದ್ದಾರೆ ? ಅಂತೆಲ್ಲ ವಿಚಾರ ಮಾಡ್ಲಿಕ್ಕೆ ಸ್ವಲ್ಪ ಹೊತ್ತು ಪ್ರತಿಯೊಬ್ರೂ ಪ್ರತಿದಿವಸದಲ್ಲಿ ಸ್ವಲ್ಪ ಹೊತ್ತು ತೆಗ್ದಿಡಬೇಕು .
ಕಣ್ಣು ಕಣ್ಣಲ್ಲೇ ಕಂಗೆಡಿಸಿದಳು ಕನ್ಯೆ
ಕಣ್ಣಿನ ಕಣ್ಸನ್ನೆಯಿಂದ ನಾಚಿತವಳ ಕುಳಿಗೆನ್ನೆ.
ಕಣ್ನು ಕಣ್ಣು ಒಲಿದು, ಕಲೆತು
ಕಂಕಣ ಕಟ್ಟುವ ಹೊತ್ತಿಗೆ,
ಕನಸಾದಳು ಕನ್ಯೆ !!!
ಕಣ್ತೆರೆಯಲು......
ಕನಸಾದಳು ಕನ್ಯೆ....
ಶರಣರು ತಮ್ಮ ಅನುಭಾವದಿಂದ ಮರ್ಜಿಸಿ ತೆಗೆದ ವಚನಗಳು ಒಂದೆರಡಲ್ಲ ಕೋಟಿಗೂ ಮಿಕ್ಕಿದವಂತೆ.
ಸಿದ್ಧರಾಮೇಶ್ವರನ ಈ ವಚನವನ್ನು ನೋಡಿ.
ಅಲ್ಲಯ್ಯನ ವಚನ ಎರೆಡೆಂಬತ್ತು ಕೋಟಿ
ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮುವ್ವತ್ತಾರು ಸಾಸಿರ (ಬಸವಣ್ಣನ ವಚನಬಗ್ಗೆ)
ಎಮ್ಮಯ್ಯಗಳ ವಚನ ವಚನಕ್ಕೊಂದು (???..)
ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾವಿರ
(ಅಂತರ್ಜಾಲದಲ್ಲಿ ತೇಲಿ ಬಂದ ಒಂದು ಪುಟದ ಇಂಗ್ಲಿಷ್ ಕಥೆಯ ರೂಪಾಂತರ)
ಆಸ್ಪತ್ರೆಯ ಜನರಲ್ ವಾರ್ಡು ಎಂದರೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣುವುದು ಸಾಲಾಗಿ ಜೋಡಿಸಿದ ಬಿಳಿ ಮಂಚಗಳು, ಅವುಗಳ ಮೇಲೆ ಮಲಗಿರುವ ರೋಗಿಗಳು, ಬಿಳಿ ಹೊದಿಕೆ, ಕೆಂಪು ಕಂಬಳಿ, ರೋಗನಿದಾನದ ವಿವರಪಟ್ಟಿ, ಬಾಟಲಿಯಿಂದ ನಳಿಕೆಯ ಮೂಲಕ ನಿಧಾನವಾಗಿ ರೋಗಿಯ ಮೈಗೆ ಇಳಿಯುತ್ತಿರುವ ಗ್ಲೂಕೋಸು, ಮಂಚದ ಪಕ್ಕದ ಸಣ್ಣ ಕಪಾಟು, ಅದರ ಮೇಲೆ ಥರ್ಮಾಸ್ ಫ್ಲಾಸ್ಕು, ಕಾಫಿಲೋಟ, ಬ್ರೆಡ್ಡು. ಕೆಲ ರೋಗಿಗಳು ನೋವಿನಿಂದ ನರಳುತ್ತಿದ್ದರೆ, ಇನ್ನು ಕೆಲವರು ಆರಾಮವಾಗಿ ಆಸ್ಪತ್ರೆಗೆ ಹೊಂದಿಕೊಂಡಿದ್ದಾರೆ ಒಂದಿಬ್ಬರು ತಮ್ಮ ಮಂಚದಿಂದ ಬೇರೊಂದು ಮಂಚದ ಬಳಿ ಬಂದು ಕುಳಿತು ಹರಟೆಯಲ್ಲಿ ತೊಡಗಿದ್ದಾರೆ. ಇನ್ನು ರೋಗಿಗಳನ್ನು ನೋಡಲು ಬರುವ ಹಿತೈಷಿಗಳ ದಂಡು ಬಂದರಂತೂ ಆ ವಾರ್ಡು ಒಂದು ವಠಾರವಾಗುತ್ತದೆ. ಪರಸ್ಪರ ಕುಶಲೋಪರಿ, ಊರು, ಮನೆ, ಮಕ್ಕಳು, ಮದುವೆ, ಆಸ್ತಿಪಾಸ್ತಿ ಒಟ್ಟಿನಲ್ಲಿ ಏನೆಲ್ಲ ವಿವರಗಳನ್ನು ಅಲ್ಲಿ ಕಲೆಹಾಕಬಹುದು. ಆದರೆ ಒಂದು ವಿಷಯ ಮಾತ್ರ ಸತ್ಯ, ಆಸ್ಪತ್ರೆಯ ವಾರ್ಡುಗಳಲ್ಲಿ ಇಷ್ಟೆಲ್ಲ ಜನ ಸೇರಿ ಏನೆಲ್ಲ ಮಾತುಕತೆಯಾಡಿದರೂ ಅಲ್ಲಿ ಜಗಳವೆಂಬುದೇ ಇರುವುದಿಲ್ಲ. ಜಗಳ ಮಾಡಲು ಎರಡು ವಿರುದ್ಧ ಅನಿಸಿಕೆಗಳಿರಬೇಕಲ್ಲ. ಆದರೆ ರೋಗಿಗಳೂ ಸೇರಿದಂತೆ ಬಂದವರೆಲ್ಲರೂ ಸಮಾನ ಹೃದಯಿಗಳೇ ಆಗಿರುವುದರಿಂದ ಅಲ್ಲಿ ಜಗಳಕ್ಕೇ ಆಸ್ಪದವೇ ಇಲ್ಲ ಬಿಡಿ. ಜಗಳವೇನಿದ್ದರೂ ಆಸ್ಪತ್ರೆಯ ವೈದ್ಯರ ಮೇಲೆ, ನರ್ಸುಗಳ ಮೇಲೆ ಇಲ್ಲವೇ ಇನ್ಯಾರೋ ಸಿಬ್ಬಂದಿಯ ಮೇಲೆ ಮಾತ್ರ.