ಭಾಷೆಗೆ ಬ್ರಾ೦ಡ್ ಇಮೇಜ್ ಬೇಕೆ ??
ನಿನ್ನೆ ಮೈಕ್ರೋಸಾಪ್ಟ್ ನವರ ಸೈಟ್ ನಲ್ಲಿ ಕಾಲಹರಣ ಮಾಡುತ್ತಿದ್ದೆ.
ಆ ಸೈಟ್ ನಲ್ಲಿ ಭಾಷೆಗಳನ್ನು ಒ೦ದು ಮಾರುವ ಪದಾರ್ಥದ೦ತೆ ಬ್ರಾ೦ಡ್ ಇಮೇಜ್ ಕೊಟ್ಟಿದ್ದಾರೆ.
ಮರಾಠಿ - ಯೋಧರ ಭಾಷೆಯ೦ತೆ.
ತೆಲುಗು - ಪೂರ್ವ ದೇಶಗಳ ಈಟೇಲಿಯನ್ ಭಾಷೆಯ೦ತೆ.
ಸ೦ಸ್ಕೃತ - ತಾಯಿ ಭಾಷೆಯ೦ತೆ.
ಹಿ೦ದಿ - ನಮ್ಮ ದೇಶದ ರಾಷ್ಟ್ರ ಭಾಷೆಯ೦ತೆ.
ಇದು ಎಲ್ಲಾದಕ್ಕೂ ದೊಡ್ಡ ಸುಳ್ಳ್ ವಾಕ್ಯವ೦ದರೆ :
"Kannada - The Language of India's Silicon Valley".
# Telugu Script – Italian of the East
# Sanskrit - The Mother of All Languages
# Marathi - The Language of Warriors
# Malayalam - From God's Own Country
# Kannada - The Language of India's Silicon Valley
# Hindi - The Language of a Nation
# Tamil Script - A Living Legacy
# Kharoshthi - The Forgotten Script
1 > ನನ್ನ ಪ್ರಶ್ನೆ ಒ೦ದು ಕ೦ಪನಿ ತನ್ನ ಕಣ್ಣಿನಿ೦ದ ನೋಡಿ , ಪೂರ್ವಿಕ ಭಾಷೆ + ಸ೦ಸ್ಕೃತಿಯನ್ನು ಪಾಶ್ಚಿಮಾತ್ಯ
ಸ೦ಸ್ಕೃತಿಯ ಮೂಲಕ ನೋಡುವುದು ಸರಿಯೇ ?? ಅ೦ದರೆ ಇಡ್ಲಿಯನ್ನು " ಬ್ರೆಡ್ ಆಪ್ ಥೀ ಈಸ್ಟ್" ಅ೦ದು ಕರೆದರೆ ಇಡ್ಲಿಗೆ ನ್ಯಾಯ ಒದಗಿಸಿದ೦ತಾಗುವುದೇ ??
2> ಕಾರ್ಪೋರೇಟ್ ಮನಸ್ಸಿನ ಛಾಯೆ ಭಾಷೆಯ ಮೇಲೆ ಯಾವ ಪರಿಣಾಮವನ್ನು ಬೀರಬಹುದು ??
3> ಭಾಷೆಗೆ ಬ್ರಾ೦ಡ್ ಇಮೇಜ್ ಬೇಕೆ ??