ಮುಕ್ತ ಸಂವಾದಗಳ ಅವಶ್ಯಕತೆ
ಇತ್ತೀಚಿನ ಕೆಲವು ತಿಂಗಳುಗಳಲ್ಲಿ SLB/URA ಮತ್ತು ಬಂಜಗೆರೆ/ತುಂಬಿದಕೆರೆ ವಿಷಯ ಬಿಸಿಬಿಸಿ ಚರ್ಚೆಯಾಗುತ್ತಿರುವುದು ತುಂಬಾ ಸಂತೋಷದ ಸಂಗತಿ.
ನಿಜವಾಗಿಯೂ ನಾನು ಬ್ಲಾಗರನಾಗಲು ಕಾರಣವೇ ಮಾನ್ಯ URA ಯವರ ಹಾಗೂ ಅವರ ಮೇಲಿನ ವಾಕ್ ದಾಳಿ.
ಬ್ಲಾಗ್ ಲೋಕದಲ್ಲಿ ನಮಗೆ ಮನಸ್ಸಿಗೆ ಬಂದದ್ದನ್ನು ಬರೆದು ಪ್ರಕಟಿಸುವ ಮುಕ್ತ ಅವಕಾಶ ಮಾತ್ರವಲ್ಲ, ಇತರರ ಬ್ಲಾಗುಗಳ ಮೇಲೂ ಕಾಮೆಂಟಿಸುವ ಅವಕಾಶವಿದೆ - ಯಾವ ತರಹದ ಕತ್ತರಿ ಪ್ರಯೋಗದ ಭಯವಿಲ್ಲದೆ.
ಈ ರೀತಿ ಮುಕ್ತ ಸಂವಾದಗಳು ನಡೆಯುವುದರಿಂದ ನಮ್ಮ ತರ್ಕಶಕ್ತಿ, ಪ್ರತಿಭಟನಾಶಕ್ತಿಗಳು ಹರಿತವಾಗುತ್ತವೆ ಎಂದು ನನ್ನ ನಂಬಿಕೆ.
ಪ್ರತಿವಾದಿಗಳನ್ನು ಮನಒಲಿಸಿ ಗೆಲ್ಲುವುದು ಬಹಳ ಕಷ್ಟಸಾಧ್ಯ.
ಹಾಗೆಂದು ಅವರನ್ನು ತೀರ ಮೂದಲಿಸಿ ಅವರ ವಾದಗಳನ್ನು ಅತಿಯಾಗಿ ಖಂಡನೆ ಮಾಡಿ ಅವರ ಬಾಯಿಯನ್ನೇ ಸದಾಕಾಲಕ್ಕೂ ಬಂದ್ ಮಾಡುವುದೂ ಅಪೇಕ್ಶಣೀಯವಲ್ಲವೆಂದು ನನ್ನ ಅನಿಸಿಕೆ.
ಉದಾಹರಣೆಗೆ: ಶ್ರೀ DS ನಾಗಭೂಷಣರು ತಮ್ಮ ಸುದೀರ್ಘವಾದ ಲೇಖನಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿದ್ದಾರೆ.
ಅದೇ ರೀತಿ ಮಾನ್ಯ ಜೋಸೆಫ್ ರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ವಾದ ಸರಿ ಇರಲಿ ತಪ್ಪಿರಲಿ, ಅವರ ಶೈಲಿ, ಕನ್ನಡಭಾಷೆಯ ಮೇಲಿನ ಅವರ ಪ್ರಭುತ್ವ, ವಿಷಯ ಮಂಡನೆ, ಇತ್ಯಾದಿಗಳು ಪ್ರಶಂಸಾರ್ಹ.
ಇವರೆಲ್ಲರೂ ಚರ್ಚೆಗೆ ವಿಷಯಗಳನ್ನು ಒದಗಿಸಿದ್ಚರಿಂದಲೇ ಅಲ್ಲವೇ ನಮ್ಮ ತಲೆಗೆ ಕೆಲಸ ಸಿಕ್ಕಿದ್ದು!
ದಾಸಶ್ರೇಶ್ಟರು ಹಾಡಿದ ಹಾಗೆ ನಿಂದಕರಿರಬೇಕು. ಕವಿವರ್ಯರು (ಬೇಂದ್ರೆ ?) ಹೇಳಿದ ಹಾಗೆ ಹಂದಿಗಳಿದ್ದರೆ ಊರು ಕೇರಿಗಳು ಶುದ್ದವಾಗಿರುತ್ತವೆ.
- Read more about ಮುಕ್ತ ಸಂವಾದಗಳ ಅವಶ್ಯಕತೆ
- 17 comments
- Log in or register to post comments