ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ
ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ
- Read more about ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ
- Log in or register to post comments
ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ
ಆಗ ನನ್ನ ೧೦ನೇ ತರಗತಿ ಒಮ್ಮೆ ಕವನ ವಾಚನ ಸ್ಪರ್ಧೆ (ಸಿದ್ದಯ್ಯ ಪುರಾಣಿಕರವರ ಸ್ಮರಣಾರ್ಥವಿರಬೇಕು) ಮತ್ತೊಬ್ಬ ಹುಡುಗಿ (ನಾವಿಬ್ಬರೇ ಹುಡುಗಿಯರು) ಒಂದು ಕವನ ಓದಿದಳು. ಹೆಂಗಸರ ಆದ್ಯತೆಗಳು ಹೇಗೆ ಬದಲಾಗುತ್ತವೆ ಎಂಬುದರ ಬಗ್ಗೆ . ಆಗ ಅದರ ಅರ್ಥ ನನಗೆ ಅಷ್ಟು ನನಗೆ ಆಗಲಿಲ್ಲ .
ಇದೀಗ ತೂಗುಕತ್ತಿ ನೆತ್ತಿಯಮೇಲಿದೆ. ನನ್ನ ಮಡದಿ ತೊಗರಿನುಚ್ಚಿನುಂಡೆ ತಟ್ಟೆಗೆ ಹಾಕಿ ಟೀಪಾಯ್ ಮೇಲಿಟ್ಟದ್ದನ್ನು ಕಾಣದವನಂತೆ ಈಸೀಚೇರಿನಲ್ಲಿ ಕೂತು ಅದಾಗಲೇ ಮೂರು ಬಾರಿ ತಿರುವಿಹಾಕಿದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯನ್ನು ತೀರ ಆಸಕ್ತಿಯಿಂದ ಓದುತ್ತಿರುವಂತೆ ನಟಿಸಿದೆ.
ಮದುವೆಯಾದ ಹೊಸದರಲ್ಲಿ ನಮ್ಮ ಸಂಸಾರ ಹೂಡಿಸಿಕೊಡಲು ನನ್ನಮ್ಮ ನನ್ನಪ್ಪನೊಡನೆ ಬಂದಿದ್ದಳು. ನಾಲ್ಕು ದಿನ ಮುಳ್ಳಿನ ಮೇಲಿದ್ದಂತೆ ಇದ್ದು ಹೊರಟ ನನ್ನಪ್ಪನಂತೂ ಹೊರಡುವ ಗಳಿಗೆಯಲ್ಲಿ ಏಕಾಂತದಲ್ಲಿ ನನ್ನ ಕೈಹಿಡಿದು ಬಿಸುಸುಯ್ದರು. "ಕೋಟೆ ಆಂಜನೇಯ ನಿನ್ನನ್ನು ಕಾಪಾಡಲಿ" ಎಂದಷ್ಟೆ ಚುಟುಕಾಗಿ ಹಾರೈಸಿದರು.
ಶರಣ್ರಿಯಪ್ಪಾ. ನನ್ನ ಹೆಸರ ಮಂಜುನಾಥ ಕುಲಕರ್ಣಿ.ಗುಲ್ಬರ್ಗಾದವಾ. ಈಗ ದೇಶಾ ಬಿಟ್ಟ ಬಂದಿನಿ.ಈವತ್ತ ಮೊದಲ್ನೆ ಸರ್ತಿ ಕಂಪ್ಯುಟರ್ನಾಗ ಕನ್ನಡದಾಗ ಬರಿಲಿಕ್ ಹತ್ತಿನಿ. ಇಷ್ಟ ದಿನಾ ನೀವೆಲ್ಲ ಬರ್ದಿದ್ದ ನೊಡಿ ನನಗೂ ಬರಿಬೇಕಂತ ಭಾಳ ಮನಸ್ಸಾಗ್ತಿತ್ತು. ಈವತ್ತ್ ಒಂದ ಪೊಣ ಘಂಟಾ ಕುಂತ ಇದನ್ನ ಕುಟ್ಟಿನಿ. ಮುಂದ ಇನ್ನಮುಂದ ಬರೀಬೇಕಂತ ಆಶಾ ಅದ.
ಸಂತ್ಯಾಗ ಕಾಯಿಪಲ್ಲೇ ಕುಟ್ರಿ ಹಾಕಿದಂಗ ಇಲ್ಲಿ ಒಂದಿಷ್ಟು ಶಬ್ದ ಕುಟ್ರಿ ಹಾಕೇನಿ , ನೋಡ್ರಿ , ನಿಮಗ ಎಷ್ಟು ಗೊತ್ತ್ ಅವ ಅಂತ , ನಿಮಗ ಏನಾದ್ರೂ ಉಪಯೋಗ ಆಗ್ತಿದ್ರ ತಕೊಂಡು ಬಳಸ್ಲಿಕ್ಕೆ ಶುರು ಮಾಡ್ರಿ !
ಕುಟ್ರಿ = ಗುಡ್ಡೆ
ವಸ್ತ= ಒಡವೆ
ಒಡವಿ-ವಸ್ತ = ಒಡವೆ( ಜೋಡುಪದವಾಗಿ )
ಜಿನ್ನೆ - ಅಟ್ಟ ?
ಸೆಲ್ಲೆ = ಶಲ್ಯ
ದೈನಾಸಪಡು = ದೈನ್ಯಭಾವ ಹೊಂದು
ಪಟ್ಟಣದಲ್ಲಿ ಕ್ರಿಸ್ಮಸ್ ದೀಪಗಳು..
- ಗೆಳೆಯರೆಲ್ಲಾ ಒಂದು ಕಡೆ ಸೇರಿ ಪಿಕ್ನಿಕ್ ಹೋಗಲು ರೆಡಿಯಾಗಿದ್ದೆವು.ರಾಜು(ನಿಜ ಹೆಸರಲ್ಲ) ಇನ್ನೂ ಬರದಿದ್ದುದರಿಂದ, ಮೊಬೈಲ್ ಸಹ ರಿಸೀವ್ ಮಾಡದಿದ್ದುದರಿಂದ “ನಾನು ಹೋಗಿ ಅವನೊಂದಿಗೆ ಬರುವೆ,ನೀವು ಕಾಯುವುದು ಬೇಡ” ಎಂದು ರಾಜು ಮನೆಗೆ ಹೋದೆ. ಬಾಗಿಲು ತೆರೆದೇ ಇತ್ತು. ಹೊರಟು ರೆಡಿಯಾಗಿದ್ದ ರಾಜು ವಾಂತಿ ಮಾಡುತ್ತಿದ್ದನು.
ಎಕಾದೆ?
ಕತ್ತಲೆಯ ಕಣ್ಣಲ್ಲಿ ಬೆಳಕಾಗಿ ನೀ ಬಂದೆ
ಬತ್ತಲೆಯ ಬಾನಲ್ಲಿ ಚುಕ್ಕಿ ಚಂದ್ರಮನಾದೆ
ಬಿತ್ತರ ಹೊಲದಲ್ಲಿ ಚಿಕ್ಕ ಸಸಿಯೂದೆ
ಎಲ್ಲವಾಗಿ ಕಡೆಗೆ ಕಡುಕ್ರೂರಿ ಎಕಾದೆ?
ಲೆಕ್ಕ
ನನ್ನ ಜೀವನವೆಂಬ ಗಣಿತ ಪುಸ್ತಕದಲ್ಲಿ
ಕೂಡು ಕಳೆಯುವ ಲೆಕ್ಕ...
ಕೂಡಿದೆಷ್ಟೂ... ಕಳೆದಿದೆಷ್ಟೂ...
ಗುಣಿಸಿ ಭಾಗಿಸದಿದ್ದರು ಉಳಿದಿದೆ ಶೇಷ
ಮದುವೆಗೆ ಮುಂಚೆ "ಗಂಡಹೆಂಡಿರ ಜಗಳ ಗಂಧ ತೀಡಿಧ್ಹಾಂಗ" ಎಂಬ ಯಾವುದೋ ಕವಿಯ ಉತ್ಸ್ಫೂರ್ತ ಕವಿವಾಣಿಯ ಮೋಡಿಗೆ ಮರುಳಾಗಿ ಫಣಿರಾಯನಂತೆ genuine appreciationನಿಂದ ತಲೆದೂಗಿದ್ದೆ. ಅದು ಅನುಭವದ ನುಡಿಯೆಂದೂ, ಆದ್ದರಿಂದಲೇ ಗಾದೆಗಳಂತೆ ವೇದಾತೀತ ಸತ್ಯವೆಂದೂ ಮುಗ್ಧವಾಗಿ ನಂಬಿದ್ದೆ. ಈ "ಗಂಧ"ದ ಎಲರು ನನ್ನ ಮೂಗಿಗೆ ತೀಡುವುದೋ ಇಲ್ಲವೋ ಎಂಬ ಸಂಶಯವೂ ಮದುವೆಗೆ ಮೊದಲು ನನಗಿತ್ತು.