ಇದೇಕೆ ಹೀಗೆ?

ಇದೇಕೆ ಹೀಗೆ?

ಆಗ ನನ್ನ ೧೦ನೇ ತರಗತಿ ಒಮ್ಮೆ ಕವನ ವಾಚನ ಸ್ಪರ್ಧೆ (ಸಿದ್ದಯ್ಯ ಪುರಾಣಿಕರವರ ಸ್ಮರಣಾರ್ಥವಿರಬೇಕು) ಮತ್ತೊಬ್ಬ ಹುಡುಗಿ (ನಾವಿಬ್ಬರೇ ಹುಡುಗಿಯರು) ಒಂದು ಕವನ ಓದಿದಳು. ಹೆಂಗಸರ ಆದ್ಯತೆಗಳು ಹೇಗೆ ಬದಲಾಗುತ್ತವೆ ಎಂಬುದರ ಬಗ್ಗೆ . ಆಗ ಅದರ ಅರ್ಥ ನನಗೆ ಅಷ್ಟು ನನಗೆ ಆಗಲಿಲ್ಲ .
ಈಗ ಬೆಳೆದಂತೆಲ್ಲ ಅದರ ಅರ್ಥ ಅರಿವಾಗುತ್ತಿದೆ. ಅದರ ಸಾರಾಂಶ ನನ್ನ ಬದುಕಿಗೆ( ಪ್ರೊಬಾಬಲಿ ಎಲ್ಲ ಹುಡುಗಿಯರ ಬದುಕಿಗೆ) ತುಂಬ ಹತ್ತಿರವಾಗಿದೆ.
ಓದುವಾಗ ನನ್ನ ಗುರಿ ಓದಬೇಕು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವಳನ್ನು ಬಿಟ್ಟು ಒಂದು ನಿಮಿಷ ಕಾಲ ಇರಲಾಗುತ್ತಿರಲಿಲ್ಲ. ಅವಳಿಲ್ಲದೆ ಪ್ರಪಂಚವೇ ಶೂನ್ಯ ಎನಿಸುತಿತ್ತು.
ನಂತರ ಬಂತು ಪ್ರೊಫೆಶ್‌ನಲ್ ಲೈಫ್.
ಗಮನವೆಲ್ಲಾ ಕೆಲಸ ಹಾಗು ಗುರಿಯೆಡೆಗೆ ಇತ್ತು .

ಮದುವೆಯ ದಿನ ಬಂತು.
ಅಮ್ಮನನ್ನು ಬಿಟ್ತು ಇರುವುದು ಹೇಗೆ.
ಅಂದು ನಾನು ಅತ್ತಿದ್ದನ್ನು ನೋಡಿದ್ದನ್ನು ನೋಡಿ ಮದುವೆ ನನಗೆ ಇಷ್ಟವಿಲ್ಲವೇನೋ ಅಂದುಕೊಂಡವರು ಬಹಳ
ಹನಿಮೂನಗೆಂದು ಹೋದ ೨ ದಿನಕ್ಕೆ ವಾಪಸ್ ಅಮ್ಮನ ಮನೆಗೆ.
ಮೊದಲ ಚಿತ್ರ (ಜೋಕ್‌ ಫಾಲ್ಸ್) ಕ್ಕೆ ಹೋಗಿ ಅಮ್ಮನಿನ್ನು ನೆನೆಸಿಕೊಂಡು ಅರ್ಧ ಘಂಟೆಗೆ ಎದ್ದು ಬಂದಿದ್ದೆವು.
ಹೀಗಿದ್ದ ನಾನು ನಂತರ------------------------------------
ಮದುವೆಯಾದ ೩ ತಿಂಗಳಿಗೆ ಬಂತು ಆಷಾಡ . ತವರಿಗೆ ಹೋಗಬೇಕಿತ್ಥು. ಅಂದು ಮತ್ತೆ ಅತ್ತೆ . ಆದರೆ ಅಮ್ಮನಿಗಾಗಿ ಅಲ್ಲ . ನನ್ನವರನ್ನು ಬಿಟ್ಟು ಹೊಗಬೇಕಲ್ಲ ಎಂದು. ಆಷ್ಟರಲ್ಲಾಗಲೇ ನನ್ನ ಪ್ರಿಯಾರಿಟಿ ಬದಲಾಗಿತ್ತು.

------------ಈಗ ನನ್ನ ಮಗಳು ಎರೆಡು ವರ್ಷ
ಈಗ ನಾನು ಅಮ್ಮನನ್ನು ಬಿಟ್ಟು ಇರಬಲ್ಲ್ಲೆ . ನನ್ನವರನ್ನು ಬಿಟ್ಟು ಇರಬಲ್ಲೆ.
ಆದರೆ ನನ್ನ ಮಗಳನ್ನು ----------------- ಇಲ್ಲ ಸಾಧ್ಯವೇ ಇಲ್ಲ . ಅವಳೇ ನನ್ನ ಸರ್ವಸ್ವ. ಅವಳನ್ನು ಖುಶಿಯಾಗಿಡಬೇಕು. ನನ್ನ ಜೀವನದ ಮಹತ್ತರ ಗುರಿ ಈಗ ಅವಳೇ
ಈಗ ನನ್ನ ಪ್ರಯಾರಿಟಿ ಬದಲಾಗಿದೆ.
ಇದೇಕೆ ಹೀಗೆ?

Rating
No votes yet

Comments