ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ನನ್ನಿ'ಯ ಮೂಲ???

'ನನ್ನಿ'ಯ ಮೂಲ???

ಸಂಪದದಲ್ಲಿ ಸುತ್ತಲು ಶುರು ಮಾಡಿದ ಮೇಲೆ ಕೇಳ್ಪಟ್ಟ ಪದ - 'ನನ್ನಿ'.
ನಾನು 'ನನ್ನಿ' ಎಂಬುದು ಕನ್ನಡದಲ್ಲಿ Thanks ಹೇಳಲು ಬಳಸುತ್ತಾರೆಂದು ಸ್ನೇಹಿತರಿಗೆ ತಿಳಿಸಿದಾಗ ನನಗೆ ತಿಳಿದು ಬಂದಿದ್ದು ಮಲಯಾಳದಲ್ಲಿ ಇಂದಿಗೂ 'ನನ್ನಿ'ಯ ಬಳಕೆ ಇದೆಯೆಂದು.
'ನನ್ನಿ' ಯ ಕನ್ನಡದ ಮೊದಲ ಉಪಯೋಗ ಎಲ್ಲಿ ಆಗಿದೆ?

ನಾಳೆ

ನಾಳೆ
ಎಂಬುದು ಬರಿ ಕನಸು
ನನಸಾಗುವುದೊ ಇಲ್ಲವೋ
ಬಲ್ಲವರಾರು...

ಆದರೂ
ಕನಸು ಬೇಕು ಬಾಳಿನುದ್ದಕೂ
ಗುರಿ ಮುಟ್ಟಲು,
ಮತ್ತೆ ನಾಳೆಯ ಕನಸು ಕಾಣಲು!!!

ಯಾವ ಊರಿನ ಚೆಲುವೆ

ಯಾವ ಊರಿನ ಚೆಲುವೆ

ನಿನ್ನ ಮನವ ಕದ್ದಿಹಳು

ನಿನ್ನೆದೆಯ ಒಲವೆಲ್ಲ

ತಾನೊಬ್ಬಳೆ ಬಾಚಿಕೊ೦ಡವಳು

ಹುಣ್ಣಿಮೆಯ ಹಾದಿಯಲಿ

ಜೊತೆಯಾಗಿ ಬ೦ದವಳು

ಚೆ೦ದಿರನ ಕಾ೦ತಿಯೆನೆ

ನಾಚುವ೦ತೆ ಮಾಡಿದವಳು

ಮು೦ಗಾರು ಮಳೆಯಲ್ಲಿ

ಮಿ೦ಚಾಗಿ ಸುಳಿದವಳು

ಸ್ವಾತಿಯ ಹನಿಗಳ ಹಾಗೆ

ನಿನ್ನೆದೆಯಲ್ಲಿ ಮುತ್ತಾದವಳು

ಯಾರವಳು ಯಾರವಳು

ಬೆಳ್ಮುಗಿಲಿನ ಒಡತಿಯೊ

ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !

ವಿದ್ಯೆ ಮನುಷ್ಯನನ್ನು ವಿಶ್ವ ಮಾನವನನ್ನಾಗಿಸಬೇಕು. ನಾನು ಬೇರೆ, ನೀನು ಬೇರೆ ಎಂಬ ಭಾವ ಹೋಗಿ 'ವಸುಧೈವ ಕುಟುಂಬಕಂ' ಎನ್ನುವುದನ್ನು ವಿದ್ಯಾವಂತರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಅಂತಹ ವಿದ್ಯೆಯನ್ನು ನಮಗೆ ಕೊಡುತ್ತಿಲ್ಲವಾದರೂ, ವಿದ್ಯಾವಂತರಿಗೆ ಇಂತಹ ಉದಾತ್ತ ವಿಚಾರಗಳಿಗೆ ತೆರೆದುಕೊಳ್ಳುವ ಅವಕಾಶ ಹೆಚ್ಚಾಗಿರುತ್ತದೆ.

ಜಗತ್ತಿನ ಅತಿ ಸಣ್ಣ ದಂತ ಕಥೆ

ಇದು ಜಗತ್ತಿನ ಅತೀ ಸಣ್ಣ ದಂತಕಥೆಯಂತೆ ! ಒಂದೇ ಸಾಲಿನದು!
..
..
..
..
They lived happily thereafter .
( ಆ ನಂತರ ಅವರು ಬಹುಕಾಲ ಸುಖವಾಗಿ ಬಾಳಿದರು.)

ಅಂದ ಹಾಗೆ ದಂತಕಥೆ ಅಂದರೇನು ? ಹಲ್ಲಿಗೇನು ಸಂಬಂಧ ?ಯಾರಾದರೂ ಬಲ್ಲವರು ಹೇಳುವಿರಾ ?

ಗೆಳತಿ

ಗೆಳತಿ

ಗೆಳತಿ ನಿನ್ನದೇ ಮುಖ..

ಮರೆತೇ ಹೊಗಿತ್ತು

ಅ೦ತರಾಳದಲಿ ಸೆರಿಕೊ೦ಡು

ಅಲೆ ಎಬ್ಬಿಸದೆ ಮಲಗಿತ್ತು.

ತುಟಿಯ೦ಚಿನಲಿ

ಅರಳಿದ ಆ ನಗೆ

ಸಹಜವಾಗಿಯೇ ಇತ್ತು

ನಿನ್ನದೇ ಆದ ಆ ಮುಖವನು

ಮರೆ ಮಾಚುವ ತವಕದಲಿತ್ತು

ಬದುಕು ಸಹಜವಾದುದು

ಅದಕೇಕೆ ಬಣ್ಣ ಬಳಿಯಬೇಕು

ಇದ್ದದೆಲ್ಲವನು ಇದ್ದ ಹಾಗೆ

ಹೇಳಲಾಗದ ಯಾತನೆ ಯಾಕೆ ಬೇಕು?

ಹೌದು!

ನಾ ಸೊತಾಗಲೆಲ್ಲಾ

ನಾ ಸೊತಾಗಲೆಲ್ಲಾ, ನಾ ಎಡವಿದಾಗಲೆಲ್ಲಾ,

ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ

ನಾ ಬಿದ್ದಾಗಲೆಲ್ಲಾ, ನಾ ಖಿನ್ನನಾದಾಗಲೆಲ್ಲಾ

ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ.

ಜೊತೆಯಾಗಿ ಬಾಳುವನು, ಹೊರಾಡುವನು,

ಬಾಳೆ೦ಬ ಕದನದಲ್ಲಿ, ಗೆಲುವ ತ೦ದಿಡುವವನು,

ತನ್ನೆಲ್ಲಾ ಜಾಣತನದಿ೦ದ, ತನ್ನಮಿತ ಶಕ್ತಿಯಿ೦ದ,

ಅವನೇ ಅವನು ನನ್ನೊಳಗೆ ನೆಲೆಸುವ೦ತವನು

ನಾ ನಡೆದ ಹಾದಿಯಲಿ - ಮಗುವಿಗೊಂದು ಸಂದೇಶ

ನಾ ನಡೆದ ಹಾದಿಯಲಿ …..

ನಾ ನಡೆದ ಹಾದಿಯಲಿ
ನೀ ನಡೆಯಬೇಕೆಂದು
ಕಟ್ಟಳೆಯನು ನಿನಗೆ
ವಿಧಿಸುವುದು ಇಲ್ಲ ಮಗು

ಇದು ನಿನ್ನ ಹಾಡು
ಇದು ನಿನ್ನ ಬದುಕು
ನಿನ್ನ ಬದುಕಿನ ಅರ್ಥವನು
ನೀನೆ ಹುಡುಕು

ನಾ ತೊರಬಹುದು
ಹಾದಿಯನ್ನು ನಿನಗೆ
ನಾ ನಡೆ ಯಲಾದೀತೇ
ನಿನ್ನೊಡನೆ ಕಡೆಯ ವರೆಗೆ

ನನ್ನ ದಾರಿ ನಿನ್ನ ದಾರಿ
ಒಂದೆಯಾಗಬೇಕಿಲ್ಲ
ನನ್ನ ಗುರಿ ನಿನ್ನ ಗುರಿ
ಒಂದೇ ಇರಲು ಬೇಕಿಲ್ಲ

ನಾನು ನಾನಾಗಬೇಕು

ನಾನು ನಾನಾಗಬೇಕು,

ನನ್ನದಲ್ಲದ ಹಾಡ ನಾನು ಹಾಡಲಿ ಹೇಗೆ,
ನನ್ನದಲ್ಲದ ನುಡಿಯ ನಾನು ನುಡಿಯಲಿ ಹೇಗೆ
ನನ್ನದಲ್ಲದ ಕನಸ ನಾನು ಕಾಣಲಿ ಹೇಗೆ
ನಾನು ನಾನಾಗಬೇಕು, ಅವರಿವರಂತಾಗದೆ.

ನನ್ನದಲ್ಲದ ಒಲವ ನಾನು ಬಯಸಲಿ ಹೇಗೆ
ನನ್ನದಲ್ಲದ ಮುಖವ ನಾ ಹೇಗೆ ತೊರಲಿ
ನನ್ನಲಿಲ್ಲದ ಚೆಲುವ, ನಾನು ತೋರಲಿ ಏಕೆ?
ನಾನು ನಾನಾಗಬೇಕು, ಅವರಿವರಂತಾಗದೆ.