ಚತುರ ಶಿಖಾಮಣಿ
ಬರಹ
ಅಡ್ಡ ಗೋಡೆಯ ಮೇಲಿನ
ದೀಪದಂತೆ ನುಡಿವವನ,
ನಡೆವವನ ಮನದಾಳ
ಅವಿಶ್ವಾಸದ ಕೊಳ
ಅಭದ್ರತೆಯಿಂದ ನರಳುವ
ಪರಾವಲಂಭಿಯಾಗಿರುವ
ದೃಢ ನಿರ್ಧಾರದ ಕೊರತೆ
ಅಸ್ಪಷ್ಟ ವಿಚಾರಗಳ ಸಂತೆ
ತಾತ್ಕಾಲಿಕ ತಂತ್ರಗಳು
ನಡೆದಾಡುವ ಯಂತ್ರಗಳು
ಸಿಹಿಲೇಪಿತ ವಿಷಗುಳಿಗೆ
ಬಳಸಿ ಮಾಡುವರು ಸುಳಿಗೆ
ಸ್ಥಿರ ಚಿತ್ತ ಇವರಿಗೆ ಪಿತ್ತ
ತೋರುಂಭ ಪರಿಶ್ರಮದತ್ತ
ಗಮನ ಹರಿಸುವ ಚತುರರು
ಎಲ್ಲೆಲ್ಲೂ ವಿಜ್ರುಂಭಿಸುತಿಹರು