ನೆಪ

ನೆಪ

ಬರಹ

ನೆನಪಾಗುವುದು
ನಿನ್ನ ಚಿಗುರು ಬೆರಳುಗಳು
ಮೂಡಿಸಿದ ಮಧುರ
ಭಾವನೆಗಳು
ಹೂವಿಂದ ಉದುರಿ ಧರೆಯ
ಮೈಯ ಸ್ಪರ್ಷಿಸಿದಾಗೆಲ್ಲಾ
ಹಸಿ ಹಸಿ ಹೂವ
ಎಸಳುಗಳು

ಮತ್ತೆ ನೆನಪಾಗುವುದು
ನನ್ನ ಬಳಸಿ, ಗಲ್ಲಕೆ
ನೀನಿತ್ತ ಬಿಸಿಯುಸಿರಿನ
ಮುತ್ತುಗಳು
ಹಿಂಡು ಹಿಂಡಾಗಿ ಬಂದು
ಹೂವ ಮುತ್ತಿಕ್ಕಿದಾಗೆಲ್ಲಾ
ಬಣ್ಣ ಬಣ್ಣದ
ದುಂಬಿಗಳು

ನೆಪವಿಲ್ಲದೆ ಬಳಿ ಬಂದು
ತುಂಬಿರಲು
ನೀ ನನ್ನ ಬದುಕಲಿ
ನವಿರಾದ ನಗು ತಂದು
ಅವಿತಿರಲು
ಹಿತವಾಗಿ ನನ್ನೆದೆಯಲಿ
ನೆನಪುಗಳಿಗ್ಯಾಕೆ
ನೆಪವೊಂದು ಬೇಕು?