ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!

http://thatskannada.oneindia.in/movies/controversy/2007/2112-mano-murthy-deeply-hurt-telugu-movie.html

http://thatskannada.oneindia.in/movies/controversy/2007/2212-mano-murthy-reply-to-piracy.html 

ಮುಂಬೈ ನ ಚೆಂಬೂರ್ ಕರ್ನಾಟಕ ಸಂಘ, ಇಂದು, ಬಂಗಾರದ ಹಬ್ಬವನ್ನು ಆಚರಿಸುತ್ತಿದೆ !

ಚೆಂಬೂರ್ ಕರ್ನಾಟಕ ಸಂಘದ ಸ್ಥಾಪನೆಯಾಗಿ ೫೨ ವರ್ಷಗಳಾಗಿವೆ. ಅದರ ಬಂಗಾರದ ಹಬ್ಬವನ್ನು ಈದಿನ ಆಚರಿಸಲಾಗುತ್ತಿದೆ.

ಚಂಚಲ ಮನದ ದೊರೆ

ಕಡಿವಾಣವಿಲ್ಲದ ಕುದುರೆ
ಏರಿ ಬಂದ ನೋಡಿ
ಚಂಚಲ ಮನದ ದೊರೆ
ಮಾಡುವ ಏನ ಮೋಡಿ

ಚಂಗ ಚಂಗನೆ ಎಗರುವನೀತ
ಸಾವಿರ ಸುಳ್ಳು ಹೇಳುವನೀತ
ಸುಮ್ಮ ಸುಮ್ಮನೆ ನಗುತಿರುವ
ಚಕು ಬುಕು ರೈಲು ಬಿಡುತಿರುವ

ಸೂಟು ಬೂಟು ದರಿಸಿರುವ
ಕಣ್ಣಿಗೆ ಕನ್ನಡಕ ಇಟ್ಟಿರುವ
ಮರಳು ಮಾಡುವ ತಂತ್ರಗಾರ
ಇರುವನಿಲ್ಲಿ ಬಲು ಎಚ್ಚರ

ಮುಂದುವರಿದ ಹುಚ್ಚುಹುಚ್ಚಾದ ಕತೆ

--ರೈಲು ಓಡುವಲ್ಲಿ ಒಂದೊಂದು ಕಡೆ ಒಂದೊಂದೇ ಹಳಿ ಇದ್ದು ಅಸಾಧ್ಯ ಕುಲುಕಾಟ ಆಗುತ್ತದೆ . ಇನ್ನು ಕೆಲವು ಕಡೆ ಎರಡೂ ಹಳಿಗಳಿಲ್ಲದೇ , ಟ್ರೇನು ಅಪಘಾತವಾಗಿ ನಿಲ್ಲುವವರೆಗೆ ಸಾಗುತ್ತದೆ .
-- ಓ ದೇವರೇ

ಸೋಲು ಗೆಲುವು

ಸೋಲು ಗೆಲುವು
ಗೊಂದಲಮಯವೋ
ಎಂದಿಗೂ ಅರಿಯದ
ಸಾಗರದ ಆಳವೋ

ಈ ಪದಗಳ ವ್ಯಾಪ್ತಿ
ಅರ್ಥೈಸುವ ಯುಕ್ತಿ
ಮತ್ತೆ ಬಳಸುವ ಶಕ್ತಿ
ಅವರವರಿಗಿರುವ ಆಸಕ್ತಿ

ಅಂತಸ್ತು, ಆಸ್ತಿ, ಹಣ
ಇದ್ದವರೆಲ್ಲಾ ಗೆದ್ದವರಲ್ಲ
ಸಹನೆ, ಸಂಯಮ, ಸದ್ಗುಣ
ಇರುವವರೆಲ್ಲಾ ಸೋತವರಲ್ಲ

ಗೆದ್ದವರು ಸೋತವರು
ಎಂಬ ಪದಗಳಿಗೆ ಅರ್ಥವಿಲ್ಲ
ಈ ಬಾಳ ಹಾದಿಯಲ್ಲಿ
ಸಾಗುವ ಪಯಣಿಗರು ನಾವೆಲ್ಲಾ

ನೆನಪು

ಮನದ ತಟದಿ,
ಬಡಿವ ನಿನ್ನ ನೆನಪಿನಲೆಗಳು,
ಬಿಡದೆ ನನ್ನನು ಕಾಡಿ,
ಮಾಡುತಿವೆ ಅದೇನೋ ಮೋಡಿ..

ಹೊತ್ತು ತಂದ,
ಮುತ್ತು, ಚಿಪ್ಪು, ರತ್ನಗಳ,
ಎದೆಯ ತುಂಬೆಲ್ಲಾ ಹರಡಿ..
ಮಾಡಿದೆ ಅಳಿಸಲಾಗದಂತೆ..ರಾಡಿ..

ಅಲೆಗಳಪ್ಪಳಿಸುವಿಕೆಗೆ ಆಗಿರುವಾಗ,
ಬಂಡೆಗಳೇ ಪುಡಿ ಪುಡಿ..
ನಾ ಅದಾವ ಲೆಕ್ಕ ಹೇಳೇ ??
ಈ ನಿನ್ನ ಪ್ರೀತಿ ರಭಸದಡಿ..

ನನ್ನವ

ಅವ,
ನನ್ನೆದೆಯ ಗೂಡೊಳಗಿನ,
ನಿರಂತರ ಕಲರವ..

ಅವನ ಕಣ್ಣಲ್ಲಿ ಕಣ್ಣ,
ಇಟ್ಟು ಮಾತನಾಡಲು..
ಅದೆನೋ ಢವ..ಢವ..

ಎದುರಿದ್ದಕ್ಕಿಂತ,
ಮರೆಯಾದಾಗಲೇ..ಹೆಚ್ಚು,
ಕಾಡುವನವ..

ಅವನಿದ್ದ ದಿನ,
ನನ್ನೆದೆಯ ಗುಡಿಯ,
ದೇವನಿಗದೋ..ಬ್ರಹ್ಮೋತ್ಸವ..

ಅವ, ನನ್ನೊಳಗೆ,
ನನಗರಿವೇ ಇಲ್ಲದಂತೆ..
ಬೆರೆತು ಹೋದಂತಹ..
ಒಂದು..ಭಾವ.

"ತ್ರಿಮೂರ್ತಿ ಸ್ವರೂಪಿ ಶ್ರೀ ದತ್ತಾತ್ರೇಯ...

"ತ್ರಿಮೂರ್ತಿ ಸ್ವರೂಪಿ ಶ್ರೀ ದತ್ತಾತ್ರೇಯ...
"ಗುರುಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರ!
ಗುರು: ಸಾಕ್ಷಾತ್ ಪರಂತತ್ವಂ ತಸ್ಮಾದ್ಗುರು ಮುಷಾಶ್ರಯೇತ್!!!

ಗುರುವು ಬ್ರಹ್ಮನು: ಗುರುವು ವಿಷ್ಣುವು: ಗುರುವೇ ಮಹೇಶ್ವರ ಮತ್ತು ಗುರುವೇ ಪ್ರತ್ಯಕ್ಷ ಎಲ್ಲಕ್ಕೂ ಹೆಚ್ಚಿನ ತತ್ವರೂಪನು. ಆದ್ದರಿಂದ ಗುರುವನ್ನು ಆಶ್ರಯಿಸಬೇಕು.

ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ- ರಘೋತ್ತಮ್ ಕೊಪ್ಪರ

ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ- ರಘೋತ್ತಮ್ ಕೊಪ್ಪರ