ಮುಂದುವರಿದ ಹುಚ್ಚುಹುಚ್ಚಾದ ಕತೆ

ಮುಂದುವರಿದ ಹುಚ್ಚುಹುಚ್ಚಾದ ಕತೆ

--ರೈಲು ಓಡುವಲ್ಲಿ ಒಂದೊಂದು ಕಡೆ ಒಂದೊಂದೇ ಹಳಿ ಇದ್ದು ಅಸಾಧ್ಯ ಕುಲುಕಾಟ ಆಗುತ್ತದೆ . ಇನ್ನು ಕೆಲವು ಕಡೆ ಎರಡೂ ಹಳಿಗಳಿಲ್ಲದೇ , ಟ್ರೇನು ಅಪಘಾತವಾಗಿ ನಿಲ್ಲುವವರೆಗೆ ಸಾಗುತ್ತದೆ .
-- ಓ ದೇವರೇ
--ಅದ್ರಲ್ಲೇನೂ ಆಶ್ಚರ್ಯ ಇಲ್ಲ ಈ ಹಳ್ಳಿ ಇದೆಯಲ್ಲ ಇದು ಇಂಥ ಒಂದು ಅಪಘಾತದಿಂದಲೇ ಹುಟ್ಟಿದ ಹಳ್ಳಿ . ಟ್ರೇನು ಮುಂದೆ ಹೋಗಲಾಗದೇ ನಿಂತು ಹೋಯಿತು .ಪ್ರಯಾಣಿಕರೆಲ್ಲ ಎಷ್ಟೋ ಕಾಲ ಒಟ್ಟಿಗೆ ಇರಬೆಕಾಗಿ ಬಂದು ಸ್ನೇಹಿತರಾಗಿ ಬಿಟ್ರು . ಇಲ್ಲೇ ಬದುಕೋಕ್ಕೆ ಶುರು ಮಾಡಿದ್ರು . ಹೀಗೆ ಹುಟ್ಟಿಕೊಂಡ ಎಷ್ಟೋ ಹಳ್ಳಿಗಳು ಇವತ್ತು ಪ್ರಗತಿ ಹೊಂದಿ ಟ್ರೇನಿನ ಅವಶೇಷಗಳಲ್ಲಿ ಮಕ್ಕಳು ಆಟ ಆಡೋದನ್ನ ನೋಡಬಹುದು .
..... ಟ್ರೇನು ಬಂದಾಗ ಜನ ಅದಕ್ಕೆ ಲಗ್ಗೆ ಇಡ್ತಾರೆ , ನೂಕುನುಗ್ಗಲು , ಸಾವು ನೋವು ಸಾಮಾನ್ಯ .
-- ಇಲ್ಲಿ ಜನರನ್ನ ನಿಯಂತ್ರಿಸಿ ಸಹಾಯ ಮಾಡಲು ಪೋಲೀಸರಿಲ್ವೆ
-- ಇದ್ದಾರೆ , ಆದ್ರೆ ಅವರು ಹಣ ತಗೊಂಡು ಶ್ರೀಮಂತರಿಗೆ ಸಹಾಯ ಮಾಡ್ತಾರೆ , ಅವರಿಗೆ ಒಳ್ಳೇ ಸೀಟೂ ಹಿಡಿದು ಕೊಡ್ತಾರೆ . ಅಕಸ್ಮಾತ್ ನೀವು ಡಬ್ಬಿ ಒಳಸೇರ್ಕೊಂಡ ಮೇಲೆ ನೀವು ಸ್ಟೇಶನ್ ಗಳನ್ನು ಗಮನಿಸ್ತಾ ಇರ್ಬೇಕು . ನಿಮ್ಮ ಸ್ಟೇಶನ್ ತಲುಪಿದೀರಾ ಅಂತ ಅನ್ನಿಸಬಹುದು . ಅದರೆ ಅದು ನಕಲಿ ಸ್ಟೇಶನ್ ಆಗಿರಬಹುದು . ಸೂಕ್ಷ್ಮವಾಗಿ ಗಮನಿಸಿದ್ರೆ ನಿಮಗೆ ಕಪಟ ಗೊತ್ತಾಗಿಬಿಡೋದು. .... ಕೆಲವೊಂದ್ಸಲ ಹೀಗೂ ಆಗೋದೂ ಉಂಟು ಕೆಲವರು ತಾವು ತಲುಪಬೇಕಾದ ಸ್ಥಳ ತಲುಪಿಯೇ ಬಿಡೋದೂ ಉಂಟು . ಅದು ಅಪರೂಪ ಅನ್ನೋದೇನೋ ನಿಜ , ಆದರೆ ಅದೂ ಸಾಧ್ಯ . ... ಕೆಲವೊಂದು ಕಡೆ ಟ್ರೇನು ಮುಂದಕ್ಕೆ ಹೋಗ್ದೇ ಇದ್ರೂ ಮುಂದಕ್ಕೆ ಹೋಗ್ತಾ ಇದೆ ಅನ್ನೋ ತರ ಗಾಡಿಯ ಸದ್ದು , ಕುಲುಕಾಟ , ಕಿಟಕಿಯಲ್ಲಿ ದ್ರಶ್ಯಗಳ ಚಲನೆಯ ವ್ಯವಸ್ಥೇನೂ ಮಾಡಿರ್ತಾರೆ , ಜನಕ್ಕೆ ಸಮಾಧಾನ ಇರ್ಲಿ ಅಂತ . ವೃಥಾ ಉದ್ವೇಗ ಬೇಡ ಅಂತ ರೇಲ್ವೇಯವರು ಈ ತರ ಮಾಡ್ತಾರೆ . ಜನ ಸರ್ವಶಕ್ತ ಕಂಪನಿಯ ಕೈಲಿ ಸಿಕ್ಕು ತಾವು ಎಲ್ಲಿಗೆ ಹೋಗ್ತಾ ಇದೇವೆ , ಎಲ್ಲಿಂದ ಬರ್ತಿದೇವೆ ಎನ್ನುವ ಪರಿವೆಯೂ ಇಲ್ಲದೆ , ಸಂಪೂರ್ಣವಗಿ ಕೈಚೆಲ್ಲಿ ತಮ್ಮ ವಿಧಿಗೆ ಶರಣಾಗ್ತಾರೆ . .....

ಹೀಗೇ ಕತೆ ಇದೆ .
ಈಗ ಹೇಳಿ ಈ ಹುಚ್ಚುಹುಚ್ಚು ಕತೆಗೆ ಏನಾದರೂ ಅರ್ಥ ಕಂಡಿರಾ ? ನಮ್ಮ ಜೀವನ , ಅದ್ರ ಗತಿ , ವಿಧಿ , ನಾವು ಮಾಡಬೇಕಂದುಕೊಂಡಿರೋದು , ಆಗಬೇಕಂದುಕೊಂಡಿರೋದು , ಕಡೆಗೆ ಆಗೋದು ಎಲ್ಲ ಇದೇ ತರ ಅಲ್ವೆ ? ಅಣುವಿಜ್ಞಾನದಲ್ಲಿ ಪಿ.ಎಚ್.ಡಿ ಮಾಡಿದೋರು , ಎಂ. ಬಿ. ಏ ಮಾಡಿದೋರು, ಮತ್ತೇನೇನೋ ಮಾಡಿದೋರು ಮತ್ತೇನೋ ಮಾಡ್ಕೊಂಡಿರೋದು ಎಲ್ಲೋ ಸೇರಬೇಕಾದವರು ಇನ್ನೆಲ್ಲೋ ಸೇರೋದು ನಾವು ನೋಡಲ್ವೆ ?

ಇದು ಮೆಕ್ಸಿಕೋದ ಒಂದು ಕತೆ .
ಇಂಥ ಕತೆಗಳಿಗೆ ಅಸಂಗತ ಕತೆಗಳು ಅಂತಾರೆ .

ನೀವೂ ಇಂಥ ಕತೆ ಓದಿ , ಮೇಲ್ನೋಟಕ್ಕೆ ಹುಚ್ಚು ಹುಚ್ಚಾಗಿದೆ ಅನ್ಸಿದರೂ ಅದಕ್ಕೊಂದು ಅರ್ಥ ಕಂಡಿದ್ದರೆ ನಮಗೂ ತಿಳಿಸಿ .

( ಹಿಂದಿನ ಭಾಗ ಇಲ್ಲಿ http://www.sampada.net/blog/shreekantmishrikoti/21/12/2007/6732 )

Rating
No votes yet

Comments