ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದಲ್ಲಿ ಶುದ್ಧ ಸ್ವರಾಕ್ಷರಗಳಿಂದ ಕೊನೆಗೊಳ್ಳುವ ಪದಗಳಿವಿಯೆ?

ಗೆಳೆಯರೆ/ಹಿರಿಯರೆ,

   ನಾನು ಹಾಗೆ ಯೋಚಿಸುತ್ತಿದ್ದಾಗ ನನಗೆ ಈ ವಿಷಯ ತಿಳಿದು ಬಂತು. ಕನ್ನಡದಲ್ಲಿ ಶುದ್ಧ ಸ್ವರಗಳಿಂದ ಕೊನೆಗೊಳ್ಳುವ ಪದಗಳೇ ಇಲ್ಲ(ನನಗಂತೂ ಇನ್ನೂ ಹೊಳೆದಿಲ್ಲ). ಇದು ಅಲಿಖಿತ/ಲಿಖಿತ ನಿಯಮವೆ? ಅಥವ ಆಕಸ್ಮಿಕವೆ? ಅಥವ ನಮ್ಮ ಕನ್ನಡದ ವೈಶಿಷ್ಟ್ಯವೆ?

ಹಾಸ್ಯ .. ಒಮ್ಮೆ ನಕ್ಕು ಬಿಡಿ ...

ಅಪ್ಪ: ನಿನಗೆ ಮೊದಲೇ ಭಯ ಜಾಸ್ತಿ. ರಾತ್ರಿ ಭೂತ-ಗೀತ ಬಂದರೆ ಏನ್ ಮಾಡ್ತೀಯಾ?

ಮಗ: ಭೂತ ಬಂದ್ರೆ ಹೋಡೆದೋಡಿಸ್ತೀನಿ.... ಗೀತ ಬಂದ್ರೆ ನಾಳೆ ಬೆಳಿಗ್ಗೆ ಕಳಿಸ್ತೀನಿ ...

ಕರ್ನಾಟಕ ಸಂಗೀತದ ರಸಾನುಭವ - ರಾಗ ಮೋಹನ (ಭಾಗ ೧)

ಕೆಲವು ದಿನಗಳ ಹಿಂದೆ ಬರೆದಿದ್ದಂತೆ ಇಂದು ಸಂಗೀತದ ರಸಾನುಭೂತಿಯ ಬಗ್ಗೆ ನನ್ನ ಬರಹವನ್ನು ಆರಂಭಿಸುತ್ತೇನೆ. ನನ್ನ ಉದ್ದೇಶ ಜನಪ್ರಿಯ ಗೀತೆಗಳ ಉದಾಹರಣೆಗಳನ್ನು ತೆಗೆದುಕೊಂಡು ಕೆಲವು ಶಾಸ್ತ್ರೀಯ ರಾಗಗಳ ಪರಿಚಯ ಮಾಡಿಕೊಡುವುದು. ಈಗಾಗಲೇ ಅಂತರ್ಜಾಲದಲ್ಲಿ ಸಂಗೀತದ ಬಗ್ಗೆ ಹಲವಾರು ಫೋರಮ್ ಗಳು ಇವೆ. ಸ್ವಲ್ಪಮಟ್ಟಿಗಾದರೂ ಸಂಗೀತದ ಪ್ರವೇಶ ಇರುವವರು ಅಂತಹ ಜಾಲತಾಣಗಳಲ್ಲಿ ಭಾಗವಹಿಸುವುದರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನನ್ನ ಈ ಮಾಲಿಕೆಯಲ್ಲಿ ಸಾಧ್ಯವಾದಷ್ಟೂ ಸರಳವಾಗಿ ರಾಗಗಳ ಪರಿಚಯ ಮಾಡುತ್ತ, ಹೆಚ್ಚಿನ ವಿವರಣೆಗಳಿಗೆ ಇತರ ಕೊಂಡಿಗಳನ್ನು ಕೊಡುವುದು ನನ್ನ ಉದ್ದೇಶ.

ಸೂರ್ಯಾಸ್ತಮಾನ

ಸೂರ್ಯಾಸ್ತಮಾನದ ಚಿತ್ರ ಎಲ್ಲಿ ತೆಗೆದರೂ ಒಂದೇ ಬಿಡಿ. ಅದು ಸ್ಥಳಾತೀತ. ಆದರೆ ಈ ಚಿತ್ರವನ್ನು ನನ್ನ ಮನೆಯ ಸಮೀಪವೇ ತೆಗೆಯಲಾಗಿದ್ದುದರಿಂದ ೨ ವಾಕ್ಯ ಬರೆಯುತ್ತೇನಷ್ಟೆ..

ಚಿತ್ರದುರ್ಗದ ಪಾಳೆಯಗಾರರು - ಶ್ರೀ ಎಮ್. ಎಸ್. ಪುಟ್ಟಣ್ಣ. ಬಿ. ಎ ;

ಚಿತ್ರದುರ್ಗದ ಪಾಳೆಯಗಾರರು - ಶ್ರೀ ಎಮ್. ಎಸ್. ಪುಟ್ಟಣ್ಣ. ಬಿ. ಎ ;

* ಈ ಶೀರ್ಶಿಕೆಯಲ್ಲಿ ಈಗಾಗಲೇ ’ಡಿಜಿಟಲ್”ಆವೃತ್ತಿಯನ್ನು ಶ್ರೀ ಎಚ್. ಪಿ. ನಾಡಿಗ್ ರವರು ನಮಗೆ ಕೊಟ್ಟಿದ್ದಾರೆ. ಅದನ್ನು ಎಲ್ಲರಿಗೂ ಕಾಣಿಸಲು ಇದನ್ನು ನಕಲುಮಾಡಿದ್ದೇನೆ. ಉಪಯೋಗವಾಗಬಹುದೇನೋ !

ಮಳೆಯ ಆಗಮನ!!

ಈಗ ಬೇಸಿಗೆ ಶುರುವಾಗಿ ಎಲ್ಲೆಲ್ಲೂ ಬಿಸಿಲಿನ ಝಳಝಳ.....ನಮ್ಮ ಮನಸು ಆಗಲೆ ಮುಂದೆ ಬರುವ ಮಳೆಗಾಲಕ್ಕೆ ಅತುರದಿಂದ ಕಾದು ನಿಲ್ಲುವುದು ಸಹಜ. ಈ ಆಲೋಚನೆಗಳು ಬಂದಾಗ ನಾನು 'ಹಾಗೆ ಸುಮ್ಮನೆ' ಹೀಗೆ ಗೀಚಿದೆ.Smile

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಗಳು ಎಲ್ಲರಿಗೂ ಸುಲಭವಾಗಿ ದೊರೆಯುವಂತಾಗಲಿ

ಗೆಳೆಯರೇ,
"ನ ಹಿ ಜ್ಞಾನೇನ ಸದೃಶಮ್' ಎನ್ನುವ ಧ್ಯೇಯ ವಾಕ್ಯ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯವು, ಹಲವಾರು ಅಪರೂಪದ ಪ್ರಕಟಣೆಗಳನ್ನು ಮಾಡಿದೆ. ಕನ್ನಡದ ಪಠ್ಯಪುಸ್ತಕಗಳು, ಕನ್ನಡ ವಿಶ್ವಕೋಶ, ಇಂಗ್ಲಿಷ್-ಕನ್ನಡ ನಿಘಂಟು, ವಿಷಯ ವಿಶ್ವಕೋಶಗಳು ಹೀಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆಗಳಲ್ಲಿ ಹಲವಾರು ಅನರ್ಘ್ಯ ರತ್ನಗಳೇ ಅಡಗಿವೆ. ಇವುಗಳಲ್ಲಿ ಹಲವು ವಿದ್ವತ್ತುಂಗಗಳಾದರೆ ಕೆಲವು ರಸಪೂರ್ಣ ಗ್ರಂಥಗಳು. ಅವುಗಳು ತಮ್ಮ ಜ್ಞಾನ ಪ್ರವೃತ್ತಿಯಿಂದ ಅಮರವಾದರೂ ನಶ್ವರ ಕಾಗದದ ಮೇಲೆ ಮುದ್ರಿತಗೊಂಡು ಕಾಲನ ಹೊಡೆತಕ್ಕೆ ಸಿಲುಕಿ, ನಲುಗಿ, ಯಾರಿಗೂ ಲಭ್ಯವಿಲ್ಲದೆ ಹೋಗುವ ಸಾಧ್ಯತೆಗಳಿವೆ.
ಹಾಗಾಗಿ ಅವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ಮುಕ್ತವಾಗಿ ಹಂಚಿಕೊಂಡರೆ, ವಿಶ್ವವಿದ್ಯಾನಿಲಯದ ಜ್ಞಾನಪ್ರಸಾರದ ಉದ್ದೇಶವೂ ಈಡೇರುತ್ತದೆ, ರಸಿಕರಿಗೆ ರಸದೂಟವೂ ಸಿಗುತ್ತದೆಯಲ್ಲವೇ?

ಅದಕ್ಕಾಗಿಯೇ, ಹಲವು ಸಮಮನಸ್ಕರು ವಿಶ್ವವಿದ್ಯಾನಿಲಕ್ಕೊಂದು ಅಪೀಲು ಸಲ್ಲಿಸಲು ಯೋಚಿಸಿ, ಇದರ ಪ್ರತಿಯನ್ನು ಇಲ್ಲಿಟ್ಟಿದ್ದಾರೆ. ಇದನ್ನು ಡೌನ್ ಲೋಡ್ ಮಾಡಿಕೊಂಡು ನಿಮ್ಮ, ನಿಮ್ಮ ಸ್ನೇಹಿತರ, ಸಹಮನಸ್ಕರ ಸಹಿಯೊಂದಿಗೆ, ವಿಶ್ವವಿದ್ಯಾನಿಲಯಕ್ಕೆ ಫ್ಯಾಕ್ಸ್/ ಅಂಚೆ / ಕೊರಿಯರ್/ಇಮೇಲ್ ಮುಖಾಂತರ ತಲುಪಿಸಿದರೆ ಇದೊಂದು ಸಮಷ್ಠಿ ದನಿಯಾಗಬಹುದು. ಈ ಕಾರ್ಯದಲ್ಲಿನ ಯಶಸ್ಸು ಕಂಪ್ಯೂಟರಿನಲ್ಲಿ ಕನ್ನಡದ ಅಳವಡಿಕೆಗೆ ಸಹಕಾರಿಯಾಗಬಹುದು. ಕನ್ನಡದ ಕಹಳೆ ಮೊಳಗಬಹುದು. ಕನ್ನಡ ವಿದ್ವತ್ತಿನ ಹಿರಿಮೆ ಬೆಳಗಬಹುದು. ವಿಶ್ವವಿದ್ಯಾನಿಲಯದ ಗ್ರಂಥಗಳು ಸುಲಭವಾಗಿ ಎಲ್ಲರ ಮನೆ ಮನ ತಲುಪಬಹುದು.

ಅಹುದೆನ್ನಿಸಿದರೆ ಈಗಲೇ ಕಾರ್ಯಪ್ರವೃತ್ತರಾಗಿ. ಈ ಕಾರ್ಯದಲ್ಲಿ ನೀವು ಸಹಾಯಮಾಡಬಲ್ಲಿರಾದರೆ, ಈ ಅಪೀಲಿಗೆ ಸಹಿ ಮಾಡಿ ಕುಲಪತಿಗಳಿಗೆ ನೇರ ಫ್ಯಾಕ್ಸ್ ಮಾಡಿ ಈ ಯಜ್ಞದಲ್ಲಿ ಭಾಗಿಗಳಾಗಿ.

ಪೆಟಿಶನ್ ಡೌನ್ಲೋಡ್ ಮಾಡಲು ಕ್ಲಿಕ್ಕಿಸಿ: [:http://hpnadig.net/pet-kn-nvol.pdf|ಪೆಟಿಶನ್ನಿನ ಕನ್ನಡ ಆವೃತ್ತಿ] | [:http://hpnadig.net/pet-en-nvol.pdf|ಪೆಟಿಶನ್ನಿನ ಇಂಗ್ಲಿಷ್ ಆವೃತ್ತಿ]

(ಕೆಳಗಿನ ಆವೃತ್ತಿ ಡಿಜಿಟೈಸ್ ಮಾಡುವಲ್ಲಿ ಸಹಾಯ ಮಾಡಬಯಸುವ, ಪಾಲ್ಗೊಳ್ಳಬಯಸುವವರಿಗೆ)
[:http://hpnadig.net/pet-kn-vol.pdf|ಪೆಟಿಶನ್ನಿನ ಕನ್ನಡ ಆವೃತ್ತಿ] | [:http://hpnadig.net/pet-en-vol.pdf|ಪೆಟಿಶನ್ನಿನ ಇಂಗ್ಲಿಷ್ ಆವೃತ್ತಿ]

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯವರ ಫ್ಯಾಕ್ಸ್ ನಂಬರು: +91-821-2419363

ಕುಲಪತಿಯವರ ಇ-ಮೇಯ್ಲ್ ವಿಳಾಸ (vc@uni-mysore.ac.in)