ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?
ಮಕರ ಸಂಕ್ರಾಂತಿಯನ್ನು ಅನಾದಿ ಕಾಲದಿಂದ ಜನವರಿ ೧೪ ರಂದು ಆಚರಿಸುತ್ತೇವೆ. ಈ ದಿನದಂದು ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಜೊತೆಗೆ ಸೂರ್ಯನು ತನ್ನ ಉತ್ತರ ದಿಕ್ಕಿನ ಪ್ರಯಾಣವನ್ನು ಆರಂಬಿಸುತ್ತಾನೆ. ಪ್ರಕೃತಿಯಲ್ಲಿ ಇರುಳಿನ ಅವಧಿ ಕಡಿಮೆಯಾಗುತ್ತದೆ. ಚಳಿಯತೀವ್ರತೆ ಕುಗ್ಗುತ್ತಾ ನಡೆಯುತ್ತದೆ. ಬೆಳಕು ಹೆಚ್ಚಾಗಿ, ಸೂರ್ಯನ ಶಾಖ ಹೆಚ್ಚಾಗಿ ಪಕೃತಿಯಲ್ಲಿ ನವಚೈತನ್ಯ ಮೂಡುತ್ತದೆ. ಹಾಗಾಗಿ ಮಕರ ಸಂಕ್ರಾಂತಿಯು ಪುಣ್ಯ ಕಾಲವೂ ಹೌದು! (ಇದು ದೇವತೆಗಳ ಹಗಲಿನ ಆರಂಭ! ಸ್ವರ್ಗದ ಬಾಗಿಲು ತೆರೆಯುವ ದಿನ. ಭೀಷ್ಮ ಈ ದಿನಕ್ಕಾಗಿಯೇ ಕಾದಿದ್ದ) ಹಾಗಾಗಿ ಇದು ಉತ್ತರಾಯಣದ ಪುಣ್ಯಕಾಲ!
ನಾವು ಒಂದು ಸಲ ಬಾನನ್ನು ನೋಡಿದರೆ, ಸೂರ್ಯನು ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಡಿಸೆಂಬರ್ ೨೧ ರಂದು ಪ್ರವೇಶಿಸುವುದು ಕಾಣುತ್ತದೆ. ಜನವರಿ ೧೪ ರಂದು ಅಲ್ಲ! ಆದರೆ ನಾವು ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುತ್ತಿದ್ದೇವೆ.
ಸಾವಿರಾರು ವರ್ಷಗಳ ಹಿಂದೆ ಸೂರ್ಯನು ಜನವರಿ ೧೪ ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದನು. ಈಗ ಕಾಲ ಬದಲಾಗಿದೆ. ಕೇವಲ ಮಕರ ಸಂಕ್ರಾಂತಿ ಮಾತ್ರವಲ್ಲ ಎಲ್ಲ ಸಂಕ್ರಾಂತಿಗಳ ಘಟನಾ ಕಾಲವೂ ವ್ಯತ್ಯಾಸವಾಗಿದೆ.
೧. ಮಕರ ಸಂಕ್ರಮಣವು ಜನವರಿ ೧೪ ರ ಬದಲು ಡಿಸೆಂಬರ್ ೨೧ ರಂದು ನಡೆಯುತ್ತದೆ.
೨. ಮೇಷ ಸಂಕ್ರಾಂತಿಯು ಏಪ್ರಿಲ್ ೧೪ ರ ಬದಲು ಮಾರ್ಚ್ ೨೧ ರಂದು ನದೆಯುತ್ತದೆ.
೩. ಕರ್ಕಾಟಕ ಸಂಕ್ರಾಂತಿಯು ಜುಲೈ ೧೫ ರ ಬದಲು ಜೂನ್ ೨೨ ರಂದು ನಡೆಯುತ್ತದೆ.
೪. ತುಲಾ ಸಂಕ್ರಮಣವು ಅಕ್ಟೋಬರ್ ೧೬ ರ ಬದಲು ಸೆಪ್ಟೆಂಬರ್ ೨೩ ರಂದು ನಡೆಯುತ್ತಿದೆ.
ಬಾನಿನಲ್ಲಿ ಸೂರ್ಯ ಬದಲಾದರೂ ಭೂಮಿಯಲ್ಲಿ ನಾವು ಬದಲಾಗಿಲ್ಲ!
ಮಕರ ಸಂಕ್ರಾಂತಿಯನ್ನು ಜನವರಿ ೧೪ ಬದಲು, ದಿಸೆಂಬರ್ ೨೧ ರಂದು ಆಚರಿಸಿ ಹೊಸ sumಕ್ರಾಂತಿಯನ್ನು ಮಾಡಲು ನಮ್ಮಲ್ಲಿ ಎಷ್ಟು ಜನರು ಸಿದ್ದವಿದ್ದಾರೆ?
Comments
ಉ: ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?
In reply to ಉ: ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ? by hamsanandi
ಉ: ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?