ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ಪದದ ಮೂಲ

ನಮಸ್ಕಾರ,

ಪ್ರಣೌತಿ ಅನ್ನೊ ಪದ ಕನ್ನಡದ್ದು ಎಂದು ಹಲವಾರು websites ನಲ್ಲಿ ಬರೆದಿದೆ.

http://www.hamaranews.com/babynamehome.jsp?typ=hindu&bg=girl&ltr=P
http://www.nameandfame.org/p.html
http://www.eknazar.com/Parenting/viewbabynames.php?&g=F&n=P&r=Hindu
http://indianames.indviews.com/indian-hindu-girl-name-p.htm
http://www.hiren.info/indian-baby-names/Girl/P

ಆದರೆ, ಈ ಪದ ಸಂಸ್ಕೃತದಿಂದ ಬಂದಿರಬಹುದು ಅಂತ ನನ್ನ ಗೇಳೆಯನೊಮ್ಮ ಅಭಿಪ್ರಾಯಪಟ್ಟ.

ಅಚ್ಚ ಕನ್ನಡದ ಹೆಸರುಗಳು

ನಮ್ಸ್ಕಾರ ಎಲ್ಲರಿಗು,

ನನಗೆ ಒಂದು ಚಿಕ್ಕ ಸಹಾಯ ಬೇಕಾಗಿದೆ.

ಅಚ್ಚ ಕನ್ನಡದ ಹುಡುಗ ಹುಡುಗಿ ಹೆಸರುಗಳನ್ನ ಪಟ್ಟಿ ಮಾಡುವಲ್ಲಿ ನನಗೆ ಸಹಾಯ ಮಾಡುತ್ತೀರ? ಉದಾಹರಣೆಗೆ, ದೊರೆ, ಅರಸು ಅನ್ನೊ ಹೆಸರುಗಳು ಅಚ್ಚ ಕನ್ನಡದ್ದು ಎಂದು ನಾನು ಭಾವಿಸಿದ್ದೇನೆ. ಆದರೆ, ಸೂರ್ಯ, ಚಂದ್ರ, ಪವನ್ ಅನ್ನೊ ಹೆಸರುಗಳು ಸಂಸ್ಕೃತದಿಂದ ಬಂದಿರುವಂತದ್ದು.

ಹುಡುಗ:
ದೊರೆ
ಅರಸು

ಹುಡುಗಿ:

ಕತ್ತಲೆ...

ಕತ್ತಲೆ...
ನಾ ಎನಿಸಿದ್ದೆ
ನೀ ನನ್ನ ಬಾಳ ಬೆಳಗುವ
ಬೆಳಕಾಗುವೆಂದು
ಆದರೆ ನೀ ನನ್ನ ಬಾಳಿನಲ್ಲಿ
ಬೆಳಗಿನ ಬೆಳಕಿನಂತೆ ಬಂದು
ರಾತ್ರಿಯಾಗುತ್ತಲೆ ನನ್ನ ಕತ್ತಲೆಯಲ್ಲಿ
ಬಿಟ್ಟು ಹೋದೆಯಲ್ಲ....?

: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ

ಇಂಟರ್ನೆಟ್ ಮೂಲಕ ಕನ್ನಡ ಪುಸ್ತಕಗಳ ಖರೀದಿ

ಸಂಪದ ಸದಸ್ಯರ ಗಮನಕ್ಕಾಗಿ....

http://books.yulop.com/

ಈ ತಾಣದ ಮೂಲಕ ಕನ್ನಡ ಪುಸ್ತಕಗಳನ್ನು ಖರೀದಿಸಬಹುದಾಗಿದೆ. ಭಾರತ ಮತ್ತು ವಿದೇಶದಲ್ಲಿರುವವರಿಗೆ ಅವರು ಪುಸ್ತಕಗಳನ್ನು ೩-೪ ದಿನಗಳ ಒಳಗೆ ಕಳಿಸಿಕೊಡುತ್ತಾರಂತೆ.

ನಿನ್ನೆಯ(೦೯ ಡಿಸೆಂಬರ್ ೦೭) ಕನ್ನಡಪ್ರಭದಲ್ಲಿ ಈ ವಿಷಯ ಬಂದಿದೆ.

ಹನಿಗವನಗಳು...(2)

ಹನಿಗವನಗಳು...

ಭಾರವೇ...?
ಧರಣಿಗೆ ಗಿರಿ
ಗಿರಿಗೆ ಮರ
ಮರಕ್ಕೆ ಬಳ್ಳಿ
ಬಳ್ಳಿಗೆ ಕಾಯಿ
ಹೆತ್ತ ತಾಯಿಗೆ ಮಗು
ಭಾರವೇ...?

*** ಸುನಾಮಿ...
ಭಾರತಕ್ಕೆ
ಬಂದಪ್ಪಳಿಸಿದಳು
ತಾಯಿ
ಸುನಾಮಿ...
ಅಮೇರಿಕಾಗೆ
ಹೋಗಿ ಅಪ್ಪಳಿಸಿದಳು
ಮಗಳು
ಕತ್ರಿನಾ...?

-ಕಾದಿ-ಖಾಕಿ-
ನಮ್ಮ ದೇಶದ
ಖಾಕಿ
ಕಾದಿಯ
ಗುಲಾಮವೇ...?

ಮಳೆ - ಕಲೆ
ಮುಂಬಾಯಿಯ
ಕಲೆ
ಮಳೆಗೆ
ತೇಲಿ
ಹೋಯಿತೇ...?

ಕರ್ನಾಟಕ ಕ್ರಿಕೆಟ್ - ೯

ಮುಲೆವಾ ಧಾರ್ಮಿಚಂದ್: ರಾಜಸ್ಥಾನದಿಂದ ವಲಸೆ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡ ಎರಡನೇ ತಲೆಮಾರಿನ ಹುಡುಗ ಧಾರ್ಮಿಚಂದ್. ೧೫ನೇ ವಯಸ್ಸಿನಲ್ಲೇ ಅಂಡರ್-೧೯ ಭಾರತ ತಂಡವನ್ನು ಪ್ರತಿನಿಧಿಸಿ ಎದುರಾಳಿ ತಂಡಗಳನ್ನು ತನ್ನ ಮಾಂತ್ರಿಕ ಆಫ್ ಸ್ಪಿನ್ ದಾಳಿಯಲ್ಲಿ ನುಚ್ಚುನೂರು ಮಾಡಿದವರು ಧಾರ್ಮಿಚಂದ್. ಕರ್ನಾಟಕದ ಪರವಾಗಿ ಎಲ್ಲಾ ವಯೋಮಿತಿಯ ತಂಡಗಳಲ್ಲಿ ಆಡಿದ ಧಾರ್ಮಿಚಂದ್ ಭರ್ಜರಿ ಯಶಸ್ಸು ಕಂಡರು. ಯಾವುದೇ ತರಹದ ಪಿಚ್ ಇರಲಿ, ಅವುಗಳ ಮೇಲೆ ಧಾರ್ಮಿಚಂದ್ ಪಡೆಯುತ್ತಿದ್ದ ಸ್ಪಿನ್ ಕಂಡು ಈರಪ್ಪಳ್ಳಿ ಪ್ರಸನ್ನ ನಿಬ್ಬೆರಗಾಗಿದ್ದರು. ಈ ಹುಡುಗನಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಉಜ್ವಲ ಭವಿಷ್ಯವಿದೆ ಎಂದು ಈರಪ್ಪಳ್ಳಿ ಪ್ರಸನ್ನ ೧೯೯೯ನೇ ಇಸವಿಯಲ್ಲಿ ನುಡಿದಿದ್ದರು. ಅಲ್ಲೇ ಆದದ್ದು ಎಡವಟ್ಟು. ಸರಿಯಾದ ಮಾರ್ಗದರ್ಶನವೆಂಬುವುದು ಧಾರ್ಮಿಚಂದ್-ಗೆ ಮರೀಚಿಕೆಯಾಗಿಯೇ ಉಳಿಯಿತು.

೨೦೦೦-೦೧ ಋತುವಿನಲ್ಲಿ ೧೬ನೇ ವಯಸ್ಸಿನಲ್ಲೇ ಕರ್ನಾಟಕದ ಪರವಾಗಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಧಾರ್ಮಿ, ಯಶಸ್ಸು ಕಾಣಲಿಲ್ಲ. ೨೦೦೦-೦೧ ಮತು ೨೦೦೧-೦೨ ಋತುಗಳಲ್ಲಿ ಕೇವಲ ೫ ಪಂದ್ಯಗಳಲ್ಲಿ ಧಾರ್ಮಿಯನ್ನು ಆಡಿಸಲಾಯಿತು. ಈ ೫ ಪಂದ್ಯಗಳಲ್ಲಿ ಒಟ್ಟಾರೆ ೭೦ರಷ್ಟು ಓವರ್-ಗಳನ್ನು ಮಾತ್ರ ಎಸೆದು ಕೇವಲ ೨ ವಿಕೆಟ್ ಗಳಿಸಿದ ಸಾಧನೆ ಯುವ ಆಟಗಾರ ಧಾರ್ಮಿಚಂದ್ ಅವರದ್ದು. ಈ ವೈಫಲ್ಯದಿಂದ ಎದೆಗುಂದಿದ ಧಾರ್ಮಿಗೆ ಸರಿಯಾದ ಮಾರ್ಗದರ್ಶನ ಎಲ್ಲೂ ದೊರೆಯಲಿಲ್ಲ.