ಕನ್ನಡದ ಕಷ್ಠಗಳು;-

ಕನ್ನಡದ ಕಷ್ಠಗಳು;-

ರಘುನಾಥ ಚ,ಹ. ಇವರ ಲೇಖನ(ಪ್ರಜಾವಾಣಿ ದಿನಾಕ ೩೧-೧೦-೨೦೦೭) ‘ಇ’ ಸವಿಗನ್ನ ಡ.....॒॒ ವನ್ನು ಓದಿದಾಗ ಬಂದ ಬಾವನೆಗಳು

ಕನ್ನಡದ ಕಷ್ಠಗಳು;-

ಇಲೆಕ್ಟ್ರೋನಿಕ್ ಮಾಧ್ಯಮದಲ್ಲಿ ಬರೆಯುವುದಕ್ಕಾಗಿ ಕನ್ನಡದಲ್ಲಿ ಸಾಕಷ್ಟು ಫೋಂಟ್‌ಗಳು ಲಭ್ಯವಿದೆ. ಅವುಗಳು ಇಂಗ್ಲೀಷಿನಂತೆ ಮುಫತ್ತಾಗಿ ಸಿಗುವುದಿಲ್ಲ. ಬರಹ ಹಾಗೂ ನುಡಿ ಬರಹಗಳು ಮಾತ್ರ ಉಚಿತ ತಂತ್ರಾಶಗಳು. ನುಡಿಯು ಸರಕಾರವು ಮಾನ್ಯಮಾಡಿರುವ ಉಚಿತ ಲಿಪಿ(ಅದಕ್ಕೆ ಯಾಕೆ ಮಾನ್ಯತೆ ಕೊಟ್ಟರೋ ದೇವರೇ ಬಲ್ಲ). ತಂತ್ರಾಶವನ್ನು ಖರೀದಿಮಾಡಲು ನಾನು ವೃತ್ತಿಪರನಲ್ಲ. ನಮ್ಮಂತ ಪ್ರವೃತ್ತಿದಾರರಿಗೆ ಬರಹವೇ ವರ (ಶೇಷಾದ್ರಿ ವಾಸನ್ ನೂರ್ ಕಾಲ ಬಾಳಲಿ).
ನಿವೃತ್ತಿ ವಯಸ್ಸಿನಲ್ಲಿ ಕಂಪ್ಯೂಟರ್ ಹಿಡಿದ ನಾನು, ಕಷ್ಠಪಟ್ಟು ನುಡಿಯಲ್ಲಿ ಲೇಖನಬರೆದಾಗ ಇಷ್ಠಪಟ್ಟು ಬರಹದಲ್ಲಿ ಬರೆದಾಗ ಆದದ್ದೆಂದರೆ ಒಂದೇ. ಊರೆಲ್ಲಾ (ಡಿಪಿಟಿ) ಸೆಂಟರುಗಳು ಪ್ರಿನ್ಟ್ ಮಾಡುವವರು ಯಾರೂ ಇಲ್ಲ. ಎಲ್ಲಾ ವೃತ್ತಿ ಪರ ಡಿಪಿಟಿ ದಾರರು. ಪ್ರತಿಯೊಬ್ಬರೂ ತಮಗೆ ಅನುಕೂಲವಾದ ಲಿಪಿಗಳನ್ನು ಖರೀದಿಸಿ ಉಪಯೋಗಿಸುತ್ತಿದ್ದಾರೆ.
ಇಂಗ್ಲೀಷಾದರೆ ಎಲ್ಲಾಕಡೆ ಪ್ರಿನ್ಟ್ ಮಾಡಿಸಬಹುದು. ಕನ್ನಡವಾದರೆ ಊರೆಲ್ಲಾ ಹುಡುಕಾಡ ಬೇಕು. ಬೆಳಗಾವಿಯಲ್ಲಿ ಹಾಗೂ ಶಿವಮೊಗ್ಗೆಯಲ್ಲಿ ಒಂದೆರಡು ಡಿಪಿಟಿ ಅಂಗಡಿಗಳನ್ನು ಹುಡುಕಿಟ್ಟಿದ್ದೇನೆ. ಆದರೆ ಕಂಪ್ಯೂಟರ್ ಕ್ಲಾಸ್ ನಡೆಸುವ ಆ ಸಂಸ್ಥೆಗೆ ನಾನು ಅವರಿಗೆ ಅನುಕೂಲವಾದ ಸಮಯದಲ್ಲಿ ಮಾತ್ರ ಹೋಗಬೇಕಾಗುತ್ತಿದೆ. ಜೊತೆಗೆ ಪ್ರತಿ ಪೇಜಿಗೆ ೩ರಿಂದ ೫ ರೂ. ಖರ್ಚು ಮಾಡಬೇಕು. ಇಂಗ್ಲೀಶಾದರೆ ೧ಅಥವಾ೨ ರೂ. ಸಾಕು. ಕನ್ನಡಕ್ಕಾದರೆ ದಂಡ ಕಟ್ಟಬೇಕು.
ಫೋಟೊಗಳೊಂದಿಗೆ ಲೇಖನವನ್ನು ತಯಾರಿಸಿ ಒಂದು ಪತ್ರಿಕೆಗೆ ಮೊದಲಸಾರೆ ಸಿ.ಡಿ ಯಲ್ಲಿ ತುಂಬಿ ಕಳುಹಿಸಿ ಕೊಟ್ಟೆ. ಮರುದಿನ ಸಂಪಾದಕರಿಂದ ಒಂದು ಫೋನು ಬಂದಿತು. ‘ನಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಲೇಖನ ಓದಲು ಸಾಧ್ಯವಾಗುತ್ತಿಲ್ಲ. ಲೇಖನವನ್ನು ಪ್ರಿಂಟ್‌ಮಾಡಿ ಕಳುಹಿಸಿ’. ಕಳುಹಿಸಿದೆ. ನನ್ನ ಹಣ ಅನವಶ್ಯಕ ವ್ಯಯವಾಯಿತು.ಸಮಯ ಒಂದು ವಾರ ಹಾಳಾಯಿತು,
ಇ ಮೇಲಿನಲ್ಲಿ ನನ್ನ ಬಂದುಬಳಗಕ್ಕೆ ಇಂಗ್ಲೀಷಿನಲ್ಲಿ ಪತ್ರಬರೆದರೆ ಅವರು ಸಂತೋಷ ಪಡುತ್ತಾರೆ.ಕನ್ನಡದಲ್ಲಿ ಬರೆದಾಗ ‘ಸಾರಿ. ಆಯ್ ಕೆನೋಟ ರೀಡ ಯುವರ್ ಲೆಟರ. ಪ್ಲೀಸ್ ಸಿನ್ಡ್ ದಿ ಸೇಮ್ ಇನ್ ಇಂಗ್ಲೀಷ್’ ಎಂದು ಮರು ಮೇಲ್ ಮಾಡುತ್ತಾರೆ. ಅಥವಾ ಚಾಟಗೆ ಸಿಕ್ಕಾಗ ಪಾಠಾ ತಗೋತಾರೆ.
ಅದಕ್ಕೆ ಪರಿಹಾರಮಾಗಿ ಬರಹ ಆಯ್ ಎಮ್ ಇ ಎಂಬಲಿಪಿ (ಶೇಷಾದ್ರಿ ವಾಸುರವರ ಕೃಪೆ) ಸಹಾಯಕ್ಕೆ ಬಂದಿತು.
ಮೊನ್ನೆ ನನ್ನ ಮಿತ್ರರು ಒಂದು ಲೇಖನ ಕಳುಹಿಸಿ ಅಭಿಪ್ರಾಯ ಕೇಳಿದರು ಅದನ್ನು ಅವರು ಬರಹ ಲಿಪಿಯಲ್ಲೇ ಬರೆದಿದ್ದರೂ ಅವರು ಬರೆದಿದ್ದು ಬರಹ ವೇದಿಕ್ ನಲ್ಲಿ. ಹೀಗಾಗಿ ನನ್ನಿಂದ ಅದನ್ನು ಓದಲು ಸಾದ್ಯವಾಗಲಿಲ್ಲಿ. ಇಂಟರ್‌ನೆಟ್ ಮೂಲಕ ಲಿಪಿಯನ್ನು ನನ್ನ ಕಂಪ್ಯೂಟರಿಗೆ ಇಳಿಸಿಕೊಂಡೆ. ಓದುವುದು ಸುಲಭ ವಾಯಿತು. ಕೆಲವು ತಿದ್ದು ಪಡಿಗಳು ಅವಶ್ಯಕವಾಗಿತ್ತು. ಆದರೆ ನನ್ನಿಂದ ಅದನ್ನು ತಿದ್ದಲಾಗಿಲ್ಲ. ಗುರು ಇಲ್ಲದ ಏಕಲವ್ಯ ನಂತೆ ಕಂಪ್ಯೂಟರ್ ಹಿಡಿದಿರುವ ನನಗೆ ಅದಕ್ಕೆ ಬೇಕಾದ ಸಪೋರ್ಟ್‌ರ್ ಗಳನ್ನು ಹೊಂದಿಸುವುದು ಸಾಧ್ಯವಾಗಲಿಲ್ಲ.
ತಿದ್ದು ಪಡಿ ಮಾಡಬೇಕಾದ ಶಬ್ಧಗಳನ್ನು ಕಾಪಿ ಮಾಡಿ ಅದನ್ನು ಇ ಮೇಲ್‌ನಲ್ಲಿ ಕಂಪೋಸ್‌ಮೇಲ್ ಮೇಲೆ ಪೇಸ್ಟ್ ಮಾಡಿದೆ. ಅಲ್ಲಿ ಆ ಶಬ್ಧಗಳ ಎದುರಿಗೆ ಸರಿಯಾದ ಪದಗಳನ್ನು ಬರಹ ಆಯ್ ಎಂ ಇ ಬಳಸಿ ತಿದ್ದುಪಡಿಮಾಡಿದೆ. ಇದು ನನ್ನ ಅಪಾರ್ ಸಮಯ ಹಾಗೂ ಶಕ್ತಿಯನ್ನು ತಿಂದು ಹಾಕಿತು.(ತಾಳ್ಮೆ ಎಂಬ ಶಬ್ಧಕ್ಕೆ ಬೆಲೆ ಇಲ್ಲ) ಅಲ್ಲೂ ಕನ್ನಡದಜೊತೆಗೆ ಕೆಲ ಚಿತ್ರ ಲಿಪಿಯೂ ಉದ್ಭವವಾಯಿತು. ಹಾಗೇ ಕಳುಹಿಸಿದೆ. ಇನ್ನೂ ಮರು ಮೇಲು ಬಂದಿಲ್ಲ.ಏನಾಗಿದೆಯೋ ಗೊತ್ತಿಲ್ಲ. ಲೇಖನವು ಇಂಗ್ಲೀಷಿನಲ್ಲಿದ್ದರೆ ಇಷ್ಟು ಕಷ್ಟ ಇತ್ತೇ?
ವರ್ಡ್ ಡಾಕ್ಯೂಮೆಂಟಿನಲ್ಲಿಲೇಖನ ಬರೆದಿಟ್ಟುಕೊಂಡು ಅನಂತರ ಅದರ ಕಾಗುಣಿತ ಅರ್ಥ ಅನರ್ಥಗಳನ್ನು ಸರಿಪಡಿಸಿಕೊಂಡು ಮನಸ್ಸಿಗೆ ಸಮಾಧಾನವಾದ ಮೇಲೆ ಲೇಖನವನ್ನು ಕಳುಹಿಸುವುದು ಬರಹ ಆಯ್ ಎಂ ಇ ಇಂದ್ಲ ಸಾಧ್ಯವಿಲ್ಲ. ಆ ಲಿಪಿಯು ನಮಗೆ ದೊರಕುವುದು ಆನ್ ಲೈನಿನಲ್ಲಿರುವಾಗ ಮಾತ್ರ. ಆನ್ ಲೈನ್ ಎಂದರೆ ಆಟೋರಿಕ್ಷಾದ ಮೀಟರ್ ಇದ್ದ ಹಾಗೆ, ಆಟೋ ನಿಂತಾಗಲೂ ಮೀಟಾರ್ ಓಡುತ್ತಲೇ ಇರುತ್ತದೆ. ಹಾಲ್ಟಿಂಗ್ ಚಾರ್ಜೂ ಕೊಡಲೇಬೇಕು! ಪುಗುಸಟ್ಟೆ ಇಂಗ್ಲೀಷಿರುವಾಗ ದುಡ್ಡುಕೊಟ್ಟು ಕನ್ನಡಯಾರಿಗೆ ಬೇಕು.?

ಕನ್ನಡ ಹಾಗೂ ಇಂಗ್ಲೀಶ್ ಸೇರಿಸಿ ಬರೆಹಗಳನ್ನು ಪ್ರಿಂಟ್‌ಮಾಡುವಾಗ ಎಚ್ಚರಿಕೆ ವಹಿಸದಿದ್ದರೆ ಕನ್ನಡದ ಭಾಗಗಳು ಸರಿಯಾಗಿ ಮೂಡಿದರೂ ಇಂಗ್ಲೀಷಿರುವ ಜಾಗದಲ್ಲಿ ಖ್‌ಛ್‌ಠ್‌ಥ್‌ಫ್ ಉತ್ಯಾದಿ ಅರ್ಥವಿಲ್ಲದ ಶಬ್ಧಗಳು ಮೂಡುತ್ತದೆ. ವಾಚಕರಲ್ಲಿ ಗೊಂದಲ ಉಂಟು ಮಾಡುತ್ತದೆ.

ಇಂದು ಮೊದಲ ಬಾರಿಗೆ ಇಂಟರನೆಟನಲ್ಲಿಯೂ ಪ್ರಜಾವಾಣಿ ಓದಿದೆ. ಪ್ರಿಂಟಿನಲ್ಲಿ ಮೂಡದ ದೋಷವು ಇಂಟರ್‌ನೆಟ್ ಪ್ರತಿಯಲ್ಲಿ ಮೂಡಿತ್ತು, ಅದರಲ್ಲಿ ಎರಡು ಮೂರುಕಡೆ ಇಂಗ್ಲೀಷ್ ಪದದ ಜಾಗದಲ್ಲಿ ಉದಾ;-‘ದಟ್ಸ್ ಕನ್ನಡದ’ ಎದುರಿಗೆ ಅರ್ಥವಿಲ್ಲದ ಕೆಲ ಸಂಖ್ಯೆಗಳು ಇದ್ದವು.

ಇಂಗ್ಲೀಷ್ ತಂತ್ರಾಶಗಳಲ್ಲಿರುವ ಶಿಸ್ಥು ಸಮಾನತೆಗಳು ಕನ್ನಡದಲ್ಲಿ ಇಲ್ಲ. ಘೋಡಾಹೈ ಮೈದಾನ ಹೈ ಅನ್ನೋ ಪರಿಸ್ಥಿತಿ. ಯಾರು ಬೇಕಾದರೂ ಹೇಗಾದರೂ ತಂತ್ರಾಶ ತಯಾರಿಸಬಹುದು. ಪುಣ್ಯಕಟ್ಟಿಕೊಳ್ಳಬಯಸಿವವರೂ ತಂತ್ರಾಶ ತಯಾರಿಸಬಹುದು. ದುಡ್ಡು ಮಾಡುವವರೂ ತಂತ್ರಾಶ ಬಿಡುಗಡೆ ಮಾಡಬಹುದು. ಗಣಕ ಪರಿಷತ್‌ನವರಿಗೆ ವೃತ್ತಿ ಪರರ ಬಗ್ಗೆ ಮಾತ್ರ ಚಿಂತೆ. ಪ್ರವೃತ್ತಿ ಪರರ ಬಗ್ಗೆ ನಿಶ್ಕಾಳಜಿ. ಸರಕಾರಕ್ಕೆ ? ನವಂಬರ ತಿಂಗಳಲ್ಲಿಎಷ್ಟು ಎಷ್ಟು ಹಣ ಎಲ್ಲೆಲ್ಲಿ ಹೇಗೆ ಹೇಗೆ ಖರ್ಚು ಮಾಡಿ ಮಾದ್ಯಮದಲ್ಲಿ ಮಿಂಚಬಹುದೆಂಬ ಚಿಂತೆ.
ಲೇಖನ ಬರೆದಮೇಲೆ ಇ ಮೇಲ ಮಾಡಲು ಕಷ್ಟ ಬಂದಿತು. ಮಗನನು ಕೇಳಿದೆ ಏನು ಮಾಡಲಿ? ( ಈ ಹಿಂದೆ ಕಷ್ಟಗಳು ಬಂದಾಗ ಅಪ್ಪನನ್ನು ಕೇಳುತ್ತಿದ್ದರು. ಈಗ ಮಗನನ್ನು ಕೇಳಬೇಕು. ಎಂತಾಕಾಲ ಈ-ಇ-ಕಾಲ. ) ಆತ ಶೇಷಾದ್ರಿ ವಾಸನನ್ನು ನೆನೆಸಿಕೋ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದ. ಅವನ ಸಲಹೆಯಂತೆ ಬರಹ-೭ ಡೌನಲೋಡ ಮಾಡಿಕೊಂಡು ಲೇಖನವನ್ನು ಕನ್ವರ್ಟ್ ಮಾಡಿ ಸಂಪದಕ್ಕೆ ಕಳುಹಿಸುತ್ತಿದ್ದೇನೆ.
ಅಲ್ಲಿಗೆ ನನ್ನ ಕಷ್ಠವು ಮುಗಿಯಲಿಲ್ಲ. ವರ್ಡನಲ್ಲಿರುವುದನ್ನು ಯೂನಿಕೋಡಗೆ ವರ್ಗಾಯಿಸಲು ಹದಿನೈದು ದಿನ ಕಷ್ಠ ಪಟ್ಟೆ.ಮೊದಲೇ ಹೇಳೀದ್ದೇನಲ್ಲ .ನಾನು ಏಕಲವ್ಯ ಎಂದು. ಅಂತೂ ಇಂತೂ ಇಂದಿಗೆ ಈ ಲೇಖನ ಮುಗಿಯಿತೆಂದು ಕೊಂಡು ಕಣ್ಣು ಮುಚ್ಚಿ ಪ್ರಕಟಿಸಿ ಬಿಡುತ್ತೇನೆ.
ಇಂತಹ ಪರಿಸ್ಥಿತಿಯಲ್ಲೂ ನಾನು ರಘುನಾಥ ಚ,ಹ. ಇವರ ಲೇಖನ ಓದಿ ‘ಇ’ ಸವಿಗನ್ನ ಡ.....॒॒ ಹಾ ಸವಿಗನ್ನಡ ಎಂದು ಹೇಗೆ ಹೇಳಲಿ?

Rating
No votes yet