ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸುಭಾಷಿತ

ಹುಡುಗಿ ವರಿಸುವುದು ರೂಪವನು, ಆಕೆಯ ತಾಯಿ ಹಣವನು, ತಂದೆ ಕೀರ್ತಿಯನು |

ನೆಂಟರಿಚ್ಛಿಸುವರು ಕುಲವನು ಇತರರು ಸುಭೋಜನವನು ||

"ಆವರಣ ಎಂಬ ಕೆಟ್ಟ ಕೃತಿ ಮತ್ತು ತಲೆಕೆಟ್ಟ ಭೈರಪ್ಪ" - ’ಅಗ್ನಿ’ ಉವಾಚ

ನನಗನಿಸ್ತದ ಬಹುಶ: ಅನಂತಮೂರ್ತಿಗಳು ಸೈತ ಈ ಥರದ ವಿಕೃತಿಯನ್ನು ವಿರೋಧಿಸುತ್ತಾರ ಅಂತ!

ಆಕಿ ನನ್ನಾಕಿ...

ತಾನು ತಂಗಳು ತಿಂದು
ಬಿಸಿ ಅನ್ನ ತಿನ್ನಿಸಿದಾಕಿ,
ಆಕಿ ನನ್ನಾಕಿ;

ತನ್ನ ಬದುಕ ನಮಗಾಗಿ ಮೀಸಲಿಟ್ಟು
ಪ್ರೀತಿಯ ಧಾರೆಯೆರೆದಾಕಿ
ಆಕಿ ನನ್ನಾಕಿ;

ತನಗೆ ಚಳಿಯಾದರೆ
ನನಗೆ ಚಾದರ ಹೊದಿಸಿದಾಕಿ
ಆಕಿ ನನ್ನಾಕಿ;

ಸಕಲ ವಿಕೋಪಗಳ
ಧರೆಯ ಹಾಗೆ
ಸಹಿಸಿಕೊಂಡಾಕಿ
ಕ್ಷಮೆಯಾ ಧರಿತ್ರಿ
ಆಕಿ ನನ್ನಾಕಿ;

ನಗೆಹನಿ

ಈ-ಮೇಲ್ ನಲ್ಲಿ ಬಂದದ್ದು. :) ಯಾವ ಪೇಪರಿನವರದೋ ತಿಳಿಯದು. ಬಲ ಮೂಲೆಯಲ್ಲಿರುವ + ಗುರುತನ್ನು ಬಳಸಿ ದೊಡ್ಡದು ಮಾಡಿ ಓದಬಹುದು.

 

ನೆನಪು...

ನೆನಪ ಮಳೆಯಲಿ
ಮಿಂದಿದ್ದೆ ನಾನೂ ಅಂದು;
ಹಾಗೆ ಮುಂದೆ ಸಾಗುತಲಿ
ನೆನಪ ನೆನೆಗುದಿಗೆ ಬಿದ್ದಾಗ
ಅರಿವಾಯ್ತು,
ನಾನು ನೆನೆದದ್ದು
ಗಗನದಿಂದಿಳಿದ ಮಳೆಯಿಂದಲ್ಲ;
ಅಲ್ಲೆ ಮರದಲ್ಲೆ ಅವಿತಿದ್ದ
ಹನಿಗಳಿಂದ!

ನೆನಪೊಂದು ನೆಪ
ನೆನೆಯಲು,
ನೆನಪೊಂದು ನೆಪ
ಸಮಯ ಕಳೆಯಲು!

---ಅಮರ್

ನಾ ಕೊಂಡ ಹೊತ್ತಗೆಗಳು

ಕಳೆದ ವಾರದ ಕೊನೆಯಲ್ಲಿ 'ಅಂಕಿತ'ಕ್ಕೆ ಹೋಗಿ ನಾಲ್ಕು ಹೊತ್ತಗೆಗಳನ್ನು ಕೊಂಡೆ

ಈಗಾಗಲೆ ಸಂಪದದಲ್ಲಿ ಬಹಳ ಸಾರಿ ಮಾತಿಗೆ ಬಂದಿರುವ ಡಿ.ಎನ್.ಶಂಕರಬಟ್ಟರ

೧) ಕನ್ನಡ ಬರಹ ಸರಿಪಡಿಸೋಣ

೨) ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ

ಸುಭಾಷಿತ

ಜನಕಂಜಿ ನಡಕೊಂಡರೇನುಂಟು ಲೋಕದಿ ಮನಕಂಜಿ ನಡಕೊಂಬುದೇ ಚಂದ |

ಜನರೇನು ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲವಲ್ಲ ||

ಹಿತನುಡಿ

ನೀವು ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದರೆ, ನೀವೇನನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕಾಗಿಲ್ಲ.