ಸಿನಿಮಾ ಕತೆ ಕೇಳಿ- ಸತ್ಯಕಾಮ -೨

ಸಿನಿಮಾ ಕತೆ ಕೇಳಿ- ಸತ್ಯಕಾಮ -೨

ಈ ಕತೆಯನ್ನು ನೀವು ನಿಧಾನವಾಗಿ ಒಂದೊಂದೇ ಸಾಲು ಓದಿ .
(ವಿವರವಾಗಿ ಬರೆಯಲು ನನಗೂ , ಓದಲು ನಿಮಗೂ ಸಮಯ, ಸಹನೆ ಇಲ್ಲ . :) )
( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ
( http://www.sampada.net/blog/shreekantmishrikoti/20/11/2007/6340 ) )

ಸರಿ , ನಮ್ಮ ಧೀರೋದಾತ್ತ ಕಥಾ ನಾಯಕ ಸತ್ಯವೃತನು ಈಗ ಒಂದು ಸಂಸ್ಥಾನದಲ್ಲಿ ಇಂಜಿನೀಯರ್ರಾಗಿ ಕೆಲಸ ಮಾಡುತ್ತಿದ್ದಾನೆ .
ಅಲ್ಲಿಯ ರಾಜನಿಗೆ ಹೆಣ್ಣು ಮಕ್ಕಳ ಚಟ .
ಅವನ ಕಣ್ಣು ಈಗ ಒಬ್ಬ ನವತರುಣಿಯ ಮೇಲೆ ಬಿದ್ದಿದೆ . ಅವಳು ಸುಂದರಿ . ಶರ್ಮಿಳಾ ಟಾಗೋರ್ , ಕಥಾ ನಾಯಕಿ.
ರಾಜನ ಸಂಗಕ್ಕೆ ಅವಳ ಸಮ್ಮತಿ ಇಲ್ಲ ;ಇವತ್ತೇನೋ ಅವನ ಕೈಯಿಂದ ತಪ್ಪಿಸಿಕೊಂಡು ನಮ್ಮ ನಾಯಕನ ಬಳಿಗೆ ಕಾಪಾಡಿ ಎಂದು ಬಂದಿದ್ದಾಳೆ .
ರಾಜನ ದುಸ್ಸಾಹಸಕ್ಕೆ ಅವಳ ಸಾಕುತಂದೆಯ ಕುಮ್ಮಕ್ಕಿದೆ.
ನಮ್ಮ ನಾಯಕ ಈ ಸಾಕು ತಂದೆಯ ಬಳಿ ಇದನ್ನು ಪ್ರಶ್ನಿಸಿದಾಗ ’ ಬಾಬೂಜಿ , ಅವಳಿಗೆ ಇದೇ ಒಳ್ಳೆಯದು , ರಾಜ ಹಣ, ಸಂಪತ್ತು ನೀಡುತ್ತಾನೆ , ಅವಳ ಜೀವನ ನಡೆಯುತ್ತದೆ . ನಮಗೆ ಬೇರೆ ಗತಿಯಾದರೂ ಏನಿದೆ ?’ ಎಂದು ಕೇಳುತ್ತಾನೆ .
ಸತ್ಯವೃತ ’ ಏಕಿಲ್ಲ ? ನೀವು ಅವಳ ಮದುವೆ ಏಕೆ ಮಾಡಬಾರದು ? ’ ಎಂದರೆ
ಅವನು ’ಬಾಬೂಜಿ , ನಿಮಗೆ ಗೊತ್ತೇ , ಅವಳು ಒಬ್ಬ ವೇಶ್ಯೆಯ ಮಗಳು . ಯಾರು ಅವಳನ್ನು ಮದುವೆ ಆಗುವರು ?’ ಅನ್ನುವನು .
ಆಗ ಸತ್ಯವೃತನು ’ ಈಗ ಕಾಲ ಬದಲಾಗುತ್ತಿದೆ. ಯಾರಾದರೂ ಒಳ್ಳೆಯ ಸ್ವಭಾವದ ಹುಡುಗ , ಆದರ್ಶವಾದಿ ಅವಳನ್ನು ಮದುವೆ ಆಗಲು ಮುಂದೆ ಬರಬಹುದು ’ ಅನ್ನುವನು .
ಅವನು ’ ಯಾರು ಬರುತ್ತಾರೆ , ಬಾಬೂಜಿ? ಉದಾಹರಣೆಗೆ , ನೀವು ಸಿದ್ಧ ಇದ್ದೀರಾ ? ಹೇಳಿ ? ’

ಆಗ ?
ಏನಾಗಬಹುದು ? ನಮ್ಮ ಆದರ್ಶವಾದಿ ಧೀರೋದಾತ್ತ ಕಥಾ ನಾಯಕ ಏನು ಮಾಡುತ್ತಾನೆ ?
ನೀವು , ಹೌದು ನೀವೇ , ಉದಾಹರಣೆಗೆ , ಏನು ಮಾಡುತ್ತಿದ್ದಿರಿ ?

ನಾಳೆಯವರೆಗೆ ನಿಮಗೆ ಅವಕಾಶ ಇದೆ ! ಉತ್ತರ ಹೇಳಲು :) .
ನಾಳೆ ಮುಂದಿನ ಭಾಗ ನಿರೀಕ್ಷಿಸಿ !!

ಮುಂದಿನ ಭಾಗಕ್ಕೆ ಇಲ್ಲಿನೋಡಿ
( http://www.sampada.net/blog/shreekantmishrikoti/22/11/2007/6365 )

Rating
No votes yet