ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಂಬಾರ ಒಂದು ಮಣಿಪು

ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ
ನಿನ್ನ ಮೊಗವನು ತೊರೇ|
ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ|

ಹೀಗೆಂದು ಶಂಬಾ ಜೋಶಿಯವರು ಅವರ 'ಮಹಾರಾಷ್ಟ್ರದ ಮೂಲ' ಹೊತ್ತಗೆಯಲ್ಲಿ ಬೇಡಿಕೊಂಡಿದ್ದಾರೆ. ಇದನ್ನು ಬಿಡಿಸಿ ಹೇಳ್ತಿರಾ? 

ನಕ್ಕರದೇ ಸ್ವರ್ಗ

ಸಿಪ್ಪೆ ಸಮೇತ ತಿನ್ನುವುದು

" ಬಾಳೆಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು"
" ಯಾಕೆ? ಅಂದರೆ ಸಿಪ್ಪೆಯಲ್ಲಿ ವಿಟಾಮಿನ್ನುಗಳು ಇರುತ್ತವಂತಲಾ?"
" ಅಲ್ಲಲ್ಲ, ಇದರಿಂದ ಬೇರೆಯವರ ಕೈ ಕಾಲುಗಳು ಸುರಕ್ಷಿತವಾಗಿರುತ್ತವೆ."

ನನ್ನದಲ್ಲ ನಮ್ಮದು

"ನನ್ನ ಮಕ್ಕಳು, ನನ್ನ ಮನೆ, ನನ್ನ ಗಾಡಿ ಅಂತ ಹೇಳ್ತಾ ಇರ್ತೀಯಲ್ಲ ಎಲ್ಲವೂ ನಿನ್ನದೇನಾ?  ನಾನೂ ನಿನ್ನೊಟ್ಟಿಗೇ ಇದ್ದೇನೆಂದು ನಿಮಗೆ ಅನ್ನಿಸೋಲ್ವಾ?" ಸಿಟ್ಟಾಗಿ ಕೇಳಿದಳು ತ್ಯಾಂಪಿ ಗಂಡನನ್ನೊಮ್ಮೆ.
" ಹಾಗಾದರೆ ನಾನು ಏನು ಮಾಡಬೇಕು ಅಂತ ನಿನ್ನ ಮಾತಿನ ಅರ್ಥ?" ಕೇಳಿದ ತ್ಯಾಂಪ.
"ಯಾವಾಗಲೂ ನನ್ನ ಅನ್ನುವ ಬದಲಿಗೆ ನಮ್ಮ ಅಂತ ಹೇಳಿ ನೋಡಿ ಎಷ್ಟು ಚೆನ್ನಾಗಿರುತ್ತೆ ಅಂತ".

ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ?

ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ?

ವರ್ತುಲ ರಸ್ತೆಯಲ್ಲಿ, ಪ್ರತಿ ದಿನದ ದಿನಚರಿಯಲ್ಲಿ

ಆ ಹಳ್ಳಿಯ ಜೀವನ

ನಾನು ಸಣ್ಣವನಿದ್ದಾಗ ನನ್ನ ತಂದೆಯವರು ಅವರ ಅಣ್ಣ
ತಮ್ಮಂದಿರೊಡನೆ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈಗ ಎಣಿಸಿದರೆ ಆಗಿನ ಹಳ್ಳಿಯ ಜೀವನ
ನಮಗೆಲ್ಲ ತುಂಬಾ ಮಜಾ ತರುವಂತಹದಿದ್ದಿತ್ತು. ಹಳ್ಳಿಯ ಆರೋಗ್ಯಮಯ ವಾತಾವರಣ ಮೈಬಗ್ಗಿಸಿ
ದುಡಿಯಲು ಎಲ್ಲರನ್ನೂ ಪ್ರೆರೇಪಿಸಿ ಅರೋಗ್ಯಮಯ ದೇಹ, ಕೌಟುಂಬಿಕ ಪರಿಸರ ಉಂಟು
ಮಾಡುತ್ತಿತ್ತು. ಆದರೆ ಆಗ ಎಲ್ಲರೂ ಉತ್ತಮರೇ ಎಂದೋ ಅಥವಾ ಎಲ್ಲ ಕಡೆ ನ್ಯಾಯಯುತ ಜೀವನವೇ
ನಡೆಯುತ್ತಿತ್ತು ಅಂತಲ್ಲ. ಅಂದರೆ ಕುಟುಂಬದ ಹಿರಿಯರಿಂದಾಗಿ ಎಲ್ಲರೂ ಹೊಂದಿಕೊಂಡು
ಹೋಗುವುದು ಅನಿವಾರ್ಯವಾಗಿತ್ತು ಅನ್ನಿಸುತ್ತೆ.
ಆಗೆಲ್ಲ ಮಕ್ಕಳು ಹಿರಿಯರು
ಒಬ್ಬರನ್ನೊಬ್ಬರು ಹೊಂದಿಕೊಂಡು, ಅರಿತುಕೊಂಡು, ಸಹಬಾಳ್ವೆ, ಸಹಜೀವನ,ಎನ್ನುವ
ಮಾತುಗಳೆಲ್ಲಾ ಒಂದರ್ಥದಲ್ಲಿ ಸರಿಯಾಗಿಯೇ ಹೊಂದುತ್ತಿದ್ದವು ಆ ಹಳ್ಳಿಯ
ಜೀವನಕ್ಕೆ.ಒಂದೊಮ್ಮೆ ಪರಸ್ಪರ ಏನಾದರೂ ವೈಮನಸ್ಸು ಉಂಟಾಗಿದ್ದರೂ ಹೊರಗಡೆ
ತೋರಿಸಿಕೊಳ್ಳುವಂತಹ ಜಾಯಮಾನ ಇರುವುದಿಲ್ಲವಿತ್ತು.ಹಾಸ್ಯ ಎಲ್ಲದರಲ್ಲಿಯೂ ಹಾಸು
ಹೊಕ್ಕಾಗಿರುತ್ತಿತ್ತು. ನಾನಂತೂ ಹಳ್ಳಿಯ ಜೀವನ ತುಂಬಾನೇ ಅನುಭವಿಸಿದ್ದೆ. ಕೆಲವೊಂದು
ಪ್ರಸಂಗಗಳು ಈಗಲೂ ನೆನಪಿಸಿಕೊಂಡರೆ ನಗುವಿನ ಅಲೆಯೆದ್ದು ನಾನು ಅದರಲ್ಲೇ ಮುಳುಗಿ
ಬಿಡುತ್ತೇನೆ.