ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)

ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)

ಗೋದಾವರಿ, ನರ್ಮದೆಗಳ ನಡುವಿನ ನಾಡು, ದಿಟವಾದ, ಬುಡ ಕರ್ನಾಟ ಅನ್ನುತ್ತಾರೆ ಶಂಬಾ ಜೋಶಿಯವರು. ಅದು ಸುಮ್ಮನೇ ಎದೆ ಉಬ್ಬಿಸಿ ಬೀಗಿ ಹೇಳುವದಕ್ಕಲ್ಲ. ಅವರ 'ಕಣ್ಮರೆಯಾದ ಕನ್ನಡ' ಹೊತ್ತಗೆಯಲ್ಲಿ ಈ ಬಗ್ಗೆ ಹಲವು ಪುರಾವೆಗಳನ್ನಿತ್ತಿದ್ದಾರೆ. 'ಶಂಬಾ ಕ್ರುತಿ ಸಂಪುಟ-೧' ರಲ್ಲಿ ಅವರ ಬಿಡಿ ಹೊತ್ತಗೆಗಳನ್ನು ಕೂಡಿಸಿ ಸಂಪುಟ ಮಾಡಿದ್ದಾರೆ. ಅವರು ಮಹಾರಸ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಬರುವ kurumvar ಜನಾಂಗದ ಬಗ್ಗೆ ಬರೆದಿದ್ದಾರೆ.

ನಾನು ಈ ಜನಾಂಗದ ಬಗ್ಗೆ ನೆಟ್ಟಿನಲ್ಲಿ ಏನಾದರೂ ಸಿಗುತ್ತಾ ಅಂತ ತಡಕಾಡಿದಾಗ ನನಗೆ ಸಿಕ್ಕಿದ್ದು ಮಹಾರಾಸ್ಟ್ರ ಗೋರ್ಮೇಂಟಿನ ಈ e-ಹಾಳೆ, http://www.maharashtra.gov.in/english/gazetteer/CHANDRAPUR/places_Keljhar.html

 

ಇಲ್ಲಿರುವ ಮಾಹಿತಿಯಂತೆ, ಚಂದ್ರಾಪುರ ಜಿಲ್ಲೆಗೆ ಸೇರುವ KELJHAR ಎಂಬೂರಲ್ಲಿ ಎರಡು ವೀರಗಲ್ಲುಗಳಿದ್ದವಂತೆ. ಅವುಗಳನ್ನು ಹೂಡಿದವರು ಕುರುಂವಾರ (ಇದು 'ಕುರುಂಬ'ದ ಬಹುವಚನ. ಕುರುಂಬ=ಕುರುಬ ಏಕೆಂದರೇ ಒಂದು ಕಾಲದಲ್ಲಿ ಕನ್ನಡದಲ್ಲಿ ಅನುನಾಸಿಕಗಳ ಮೇಲ್ಗೈ ಹೆಚ್ಚಿತ್ತು, ಬೆಡಂಗು, ತುರುಂಬ, ದಾಂಟು ಇಂತ ಹಲವಾರು ಒರೆಗಳಿವೆ) ಮಂದಿ. ಅವರು ಮಲ್ಲನದೇವ ಮತ್ತು ಮಲ್ಲಾನಿದೇವಿ ಎಂಬೀರ್ವರ ನೆನಪಲ್ಲಿ ಅವುಗಳಿಗೆ ಪೂಜೆ ಸಲ್ಲಿಸುತ್ತಿದ್ದರಂತೆ.

ಈ ಮಂದಿಯ ನುಡಿ ಕನ್ನಡ, ಮತ್ತು ತಾವು ಕರ್ನಾಟದಿಂದ ಬಂದವರೆಂದು ಅವರು ಹೇಳಿಕೊಳ್ಳುತ್ತಾರಾದರೂ ಅದೇ ತಮ್ಮ ಕರ್ನಾಟವೆಂಬುದನ್ನು ಅವರೇ ಮರೆತಿದ್ದಾರೆ.

ಚಂದ್ರಾಪುರ ಜಿಲ್ಲೆ, ಗೋದಾವರಿ ಹೊಳೆಯಿಂದ ಅತ್ತತ್ತ ಎಸ್ಟೊಂದು ಉತ್ತರಕ್ಕಿದೆ ಅಂಬುದನ್ನು ನೀವೇ ನೋಡಿ, http://maps.live.com/?v=2&sp=Point.m9m7q7qmhpnn_ChandraPur___&encType=1  

Rating
No votes yet

Comments