ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇ-ಲೋಕ-೪

ಕುಡುಕ ಚಾಲಕನೊಲ್ಲದ ಟೊಯೋಟಾ ಕಾರು
ಕುಡಿದು ಬಂದು ಕಾರು ಚಲಾಯಿಸಲು ಯತ್ನಿಸಿದರೆ ಚಾಲೂ ಆಗಲು ನಿರಾಕರಿಸುವ ಕಾರು ಬಂದರೆ ಕುಡಿದು ಚಲಾಯಿಸಿ ವಾಹನ ಅಪಘಾತವಾಗುವುದನ್ನು ಸುಲಭವಾಗಿ ನಿಯಂತ್ರಿಸಬಹುದು ತಾನೇ? ಕಾರು ತಯಾರಿಕೆಯಲ್ಲಿ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಟೊಯೊಟಾ ಕಂಪೆನಿಯು ಇಂತಹ ಕಾರು ತಯಾರಿಸಿದೆ. ಈ ಕಾರಿನ ಸ್ಟಿಯರಿಂಗ್ ವೀಲಿನಲ್ಲಿ ಬೆವರಿನಲ್ಲಿ ಬೆರೆತಿರುವ ಮದ್ಯದ ವಾಸನೆ ಪತ್ತೆ ಹಚ್ಚುವ ಸಂವೇದಕಗಳಿವೆ. ಕುಡಿದ ಚಾಲಕ ಕಾರು ಚಲಾಯಿಸಿದರೆ, ಕಾರಿನ ಸಂವೇದಕಗಳು ಕಾರಿನ ಇಂಜಿನನ್ನು ಸ್ಥಗಿತಗೊಳಿಸಲು ಸೂಚನೆ ನೀಡುವ ಕಾರಣ, ಕಾರು ಚಾಲೂ ಆಗುವುದೇ ಇಲ್ಲ.
ಅಷ್ಟು ಮಾತ್ರವಲ್ಲದೆ ಕುಡಿಯದೆ ಎರ್‍ರಾಬಿರ್‍ರಿ ಕಾರು ಚಲಾಯಿಸಿದರೂ ಕಾರಿನ ಇಂಜಿನ್ ಸ್ಥಗಿತವಾಗುವ ವ್ಯವಸ್ಥೆ ಇದರಲ್ಲಿದೆ. ಅಡ್ಡಾದಿಡ್ಡಿ ಕಾರು ಚಲಾಯಿಸಲಾರಂಭಿಸಿದರೆ, ಕಾರು ಮುಂದೆ ಹೋಗಲು ನಿರಾಕರಿಸುತ್ತದೆ. ಕಣ್ಣಿನ ಪಾಪೆಗಳನ್ನು ಕ್ಯಾಮೆರಾದ ಮೂಲಕ ಗಮನಿಸಿ, ಚಾಲಕ ಕಾರುಗಳನ್ನು ರಸ್ತೆ ಮೇಲೆ ನೆಡಲು ವಿಫಲನಾದರೂ ಕಾರು ಸ್ಥಗಿತವಾಗುವ ಆಧುನಿಕ ವ್ಯವಸ್ಥೆ ಈ ಕಾರಿನಲ್ಲಿರುವುದರಿಂದ ಟೊಯೊಟಾದ ಈ ಕಾರು ಅಪಘಾತಕ್ಕೊಳಗಾಗುವುದು ಬಹು ಕಠಿನ.

ವಿಜ್ಞಾನಿಗಳ ನುಡಿಮುತ್ತುಗಳು

ವಿಜ್ಞಾನಿಗಳ ದೃಷ್ಟಿಯಲ್ಲಿ ಅಮೀಬಾದಿಂದ ಮನುಷ್ಯನವರೆಗೆ ಜೀವದ ವಿಕಾಸಾವಾಗುತ್ತಾ ಬಂದಿದೆ. ಆದರೆ ಅಮೀಬಾ ಈ ಮಾತನ್ನು ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ!

ವಿಜ್ಞಾನಿಗಳ ನುಡಿಮುತ್ತುಗಳು

ನಿಮ್ಮ ಅಭಿಪ್ರಾಯಗಳು ಇತರರ ಅಭಿಪ್ರಾಯಗಳಿಗಿಂತ ವಿಭಿನ್ನವಾಗಿದ್ದಲ್ಲಿ ಹೆದರಬೇಡಿ, ಅವನ್ನು ಬದಲಾಯಿಸಲೂ ಬೇಡಿ. ಈಗ ಯಾವ ಅಭಿಪ್ರಾಯಗಳನ್ನು ನಾವು ಒಪ್ಪಿಕೊಂಡಿದ್ದೇವೆಯೋ ಆ ಅಭಿಪ್ರಾಯಗಳು ಮೊದಲು (ಆಗಿನ ಕಾಲಕ್ಕೆ) ವಿಭಿನ್ನವಾಗಿಯೇ ಇದ್ದವು ಅನ್ನುವುದನ್ನು ಮರೆಯದಿರಿ.

ವಿಜ್ಞಾನಿಗಳ ನುಡಿಮುತ್ತುಗಳು

ನಾವು ಯಾವುದನ್ನು ಕುರಿತು ಚಿಂತಿಸುತ್ತಿದ್ದೇವೆಯೋ ಅದರ ಪ್ರಾಮುಖ್ಯತೆಯನ್ನು ಸರಿಯಾಗಿ ವಿಚಾರ ಮಾಡಿದಲ್ಲಿ ನಮ್ಮ ಚಿಂತೆ ತಾನಾಗಿಯೇ ಕಡಿಮೆಯಾಗುತ್ತದೆ!

ಹೀಗೊಂದು ಚಿಂತನೆ

ಮೊನ್ನೆ ನಾನು ತೆಗೆದುಕೊಂಡ ವಿಷಯಗಳಿಗೆ ಗ್ರೇಡುಗಳು ಬಂದಿದ್ದವು. ಹೀಗೆ ಗ್ರೇಡುಗಳು ಬಂದಾಗಲೆಲ್ಲಾ ನನಗೆ ಈ ಪ್ರಪಂಚದ ನಶ್ವರತೆ-ವೈರಾಗ್ಯ ಮುಂತಾದ ಯೋಚನೆಗಳು ಹೆಚ್ಚಾಗುತ್ತವೆ. ಇದೂ ಒಂದು ರೀತಿಯ ಮಸಣ ವೈರಾಗ್ಯ.ಮಹಾಭಾರತ ಯುದ್ಧ ಮುಗಿದ ನಂತರ ಯುಧಿಷ್ಟಿರನಿಗೆ ಆದಂತೆ. ಇರಲಿ.. ಹೆಚ್ಚಿಗೆ ಹರಟೆ ಹೊಡೆಯದೇ ನೇರವಾಗಿ ಮಾತಿಗೆ ಬರುತ್ತೇನೆ.

ಪ್ರಶ್ನೆ:
ಜೀವ (ಅಥವಾ ಆತ್ಮ??) ಎಂದರೆ ಏನು? ಜೀವಿಗೆ ಒಂದೇ ಜೀವವೇ? ಅನೇಕ ಜೀವಗಳು ಸೇರಿ ಉನ್ನತ ಜೀವಿವೇ?

ಒಳನೋಟ:
ಉದಾಹರಣೆಗೆ ಮನುಷ್ಯನನ್ನೇ ತೆಗೆದುಕೊಳ್ಳೋಣ. ಮನುಷ್ಯ ಜೀವಿಸುತ್ತಿದ್ದಾನೆ ಎಂದರೆ ಅವನ ಮುಖ್ಯವಾದ ಎಲ್ಲಾ ಅಂಗಗಳೂ ಕೆಲಸ ಮಾಡುತ್ತಿವೆ ಎಂದರ್ಥ. ಅಂಗಗಳ ಕೆಲಸಕ್ಕೆ ಜೀವಕೋಶಗಳು ಬದುಕಿರಬೇಕು ಅಲ್ಲವೇ? ಜೀವಕೋಶಗಳು ಬದುಕಿವೆ ಎಂದರೆ ಜೀವಾಣುಗಳು ಬದುಕಿರಬೇಕು ತಾನೆ? ಅಷ್ಟಕ್ಕೂ ಜೀವಾಣುಗಳಿಗೆ ಕಾರಣವಾಗುವ ಇಂಗಾಲದ ಅಣು - ಅದರ ಎಲೆಕ್ಟ್ರೊನ್ ಬದುಕಿವೆಯೇ? ಇಲ್ಲ ಎಂದಾದರೆ ಬದುಕಿರದ ವಸ್ತುಗಳು ಸೇರಿ ಬದುಕನ್ನು ಹುಟ್ಟಿಸುತ್ತಿವೆಯೇ?ಎಲ್ಲಿಂದ?ಹೇಗೆ?

ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ

     ಸಂಪದ ಓದುತ್ತಾ ಕುಳಿತಿದ್ದವನನ್ನು ನೋಡಿದ ನನ್ನಾಕಿ "ಎಲಾ ಇವರ! ಎಷ್ಟು ಹೊತ್ತಿಂದ ಲ್ಯಾಪ್‌ಟಾಪ್ ಮುಂದೆ ಕೂತು ನನ್ನನ್ನೂ ಮರೆತಿದ್ದಾರಲ್ಲ" ಅಂತ ಯೋಚಿಸಿ, ಸುಮ್ಮನಿರಲಾರದೆ, "ಇವತ್ತು ಏನು ಅಡುಗೆ ಮಾಡಲಿ?" ಅಂತ ಕೇಳಬೇಕೆ?! ಇತ್ತೀಚಿಗೆ ಸಂಪದದಲ್ಲಿ ನಡೆಯುತ್ತಿರುವ "ಕನ್ನಡದ ಏತ್ವಗಳು, ಕಾಗುಣಿತ ಕಲಿತದ್ದು" ಇತ್ಯಾದಿ ಚರ್ಚೆಗಳ ಬಗ್ಗೆಯೇ ಏನೋ ಯೋಚಿಸಿ ಟೈಪಿಸುತ್ತಾ ಕುಳಿತವನು, ಅದೆಲ್ಲಿಂದ ಹೊಳೆಯಿತೋ ನನಗೇ ಗೊತ್ತಿಲ್ಲ, "ಕೊಟ್ಟೆ ಮಾಡು" ಅಂದೆ. ಒಂದು ಕ್ಷಣ ತಬ್ಬಿಬ್ಬಾದ ನನ್ನಾಕಿ "ಅಯ್ಯೋ ರಾಮ; ಅದೇನದು ಕೊಟ್ಟೆ? ನಾನು ಕೇಳಿದ್ದು ಅಡುಗೆಯ ಬಗ್ಗೆ. ಹೋಗೀ ಹೋಗೀ ನಿಮ್ಮನ್ನು ಕೇಳಿದ್ನಲ್ಲಾ..." ಅಂತಂದಳು.

ಅಜ್ಜ ಎಂದೊಡನೆ....

ಅಜ್ಜ ಎಂದೊಡನೆ - ನರೆಗೂದಲು, ಕುರುಚಲು ಗಡ್ಡ,
ಎಳೆಯ ಕೆನ್ನೆಗುಜ್ಜಿ ತುರಿಸುತ್ತಿದ್ದ ನೆನಪು.
ಒಳಮನೆಯಲ್ಲಿ ಅವರ ಅಗ್ನಿಹೋತ್ರದ ಜ್ವಾಲೆ
ನಡುಮನೆಯಲ್ಲಿ ನನ್ನ ಮುಖದ ಮೇಲೆಲ್ಲ ಕುಣಿದ ನೆನಪು.

ಕರ್ನಾಟಕ ಕ್ರಿಕೆಟ್ - ೧

ನಿನ್ನೆ ಕರ್ನಾಟಕ - ತಮಿಳುನಾಡು ತಂಡಗಳ ನಡುವಿನ ಪಂದ್ಯದ ಬಗ್ಗೆ ಸಂಪದದಲ್ಲಿ ಪ್ರತಿಕ್ರಿಯೆ ಇತ್ತು. ಸಂಪದದಲ್ಲಿ 'ಕರ್ನಾಟಕ ಕ್ರಿಕೆಟ್' ಬಗ್ಗೆ ಓದಿ ಬಹಳ ಆನಂದವಾಯಿತು. ಸಣ್ಣಂದಿನಿಂದಲೂ ರಣಜಿ ಪಂದ್ಯಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ರಣಜಿ ಟ್ರೋಫಿ, ಕರ್ನಾಟಕ ಕ್ರಿಕೆಟ್ ಮತ್ತು ಕೆಲವು ಆಟಗಾರರ ಬಗ್ಗೆ ಸಂಪದದಲ್ಲಿ ನನಗೆ ತಿಳಿದಷ್ಟು ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ.

ವೀಕ್ಷಕ ವಿವರಣೆ - ಆಗ ಬೆಂಗಳೂರು ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಲ್ಲಿ ಕರ್ನಾಟಕದಲ್ಲಿ ನಡೆಯುತ್ತಿದ್ದ ಎಲ್ಲಾ ರಣಜಿ ಪಂದ್ಯಗಳ ವೀಕ್ಷಕ ವಿವರಣೆ ಕನ್ನಡದಲ್ಲಿ ಇರುತ್ತಿತ್ತು. ನನಗೆ ಸಮೀಪವಿದ್ದ ಮಂಗಳೂರು ಆಕಾಶವಾಣಿ ಕೆಲವೊಂದು ಆಯ್ದ ಪಂದ್ಯಗಳ ವೀಕ್ಷಕ ವಿವರಣೆಯನ್ನು ಮಾತ್ರ ಪ್ರಸಾರ ಮಾಡುತ್ತಿತ್ತು. ಕಷ್ಟದಿಂದ ಬೆಂಗಳೂರು ಅಥವಾ ಧಾರವಾಡ ಕೇಂದ್ರಗಳ ಸಿಗ್ನಲ್ ಸಿಗುತ್ತಿತ್ತು. ಆದರೂ ಬಿಡದೆ ವೀಕ್ಷಕ ವಿವರಣೆ ಕೇಳುವ ಗೀಳು ಹತ್ತಿತ್ತು. "ಮತ್ತೊಮ್ಮೆ ರಘುರಾಮ್ ಭಟ್, ಈ ಬಾರಿ ಕ್ರೀಸ್ ಹಿಂದಿನಿಂದ ಎಸೆದ ಎಸೆತ, ಆಫ್ ಸ್ಟ್ಂಪಿನ ಹೊರಗೆ ಪುಟಿದು ಮತ್ತಷ್ಟು ಹೊರಕ್ಕೆ ತೆರಳುತ್ತಿದ್ದ ಚೆಂಡನ್ನು ಹರಿಹರನ್ ಆಡದೆ ಹಾಗೆ ಬಿಟ್ಟಿದ್ದಾರೆ. ಚೆಂಡು ನೇರವಾಗಿ ಸದಾನಂದ್ ವಿಶ್ವನಾಥ್ ಕೈಗೆ..." ಹೀಗಿರುತ್ತಿತ್ತು ಕನ್ನಡ ವೀಕ್ಷಕ ವಿವರಣೆ. ಇನ್ನೆಲ್ಲಿ ಅದನ್ನು ಕೇಳುವ ಭಾಗ್ಯ?

ನುಡಿಮುತ್ತುಗಳು - ಪ್ರಸ್ತುತ ಅಪ್ರಸ್ತುತಗಳ ನಡುವೆ

[:http://sampada.net/user/shyam_kishore|ಶ್ಯಾಮ್ ಕಿಶೋರ್ ರವರು] ಕೆಲವು ದಿನಗಳಿಂದ ಸಂಪದದಲ್ಲಿ ಬಹಳ ಚೆನ್ನಾಗಿರುವ [:http://sampada.net/quotes/1261|ಕೆಲವು ನುಡಿಮುತ್ತುಗಳನ್ನ ಹಾಕ್ತಾ ಇದ್ದಾರೆ]. ಅದರಲ್ಲಿ ಆಲ್ಬರ್ಟ್ ಐನ್‍ಸ್ಟೈನ್ ರ ಕೆಲವು ನುಡಿಗಳು ನನಗೆ ಬಹಳ ಇಷ್ಟವಾದವು. ಅವನ್ನೋದುವಾಗ ಓ ಎಲ್ ಎನ್ ಸ್ವಾಮಿಯವರು ಈ ಹಿಂದೆ ಬರೆದಿದ್ದ [:http://sampada.net/kannada/archive/52|ಝೆನ್ ಕಥೆಗಳು ನೆನಪಿಗೆ ಬರುತ್ತೆ].

ಆಲ್ಬರ್ಟ್ ಐನ್‍ಸ್ಟೈನ್ ರವರ ಈ ಮಾತು ಚಿಂತನೆಯಲ್ಲಿ ಮುಳುಗಿಸಿಬಿಡುತ್ತದೆ:

ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಹೀಗೊಂದು ನುಡಿಮುತ್ತು ಕೇಳಿ ನಿಮಗೂ ಪ್ರಸ್ತುತ, ಅಪ್ರಸ್ತುತಗಳ ನಡುವೆ ಅವಲೋಕನ ಮಾಡಿ ಚಿಂತನೆ ಮಾಡುವಂತಾಗಿದೆಯೋ? ಹಾಗೊಂದು ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ ನೋಡೋಣ!