ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಬ್ಬನ್ ಪಾರ್ಕ ಉಳಿಸಿ.

ಕಬ್ಬನ್ ಪಾರ್ಕ ಉಳಿಸಿ.
ಸ೦ಪದ ಬಳಗದವರಿಗೆಲ್ಲಾ ನಮಸ್ಕಾರ.
ವಿಷಯ ೧ :
ನೀವು ರಸ್ತೆಯ ಬದಿಯಲ್ಲಿ ಯಾವುದಾದರೂ ಮರವನ್ನು ಕಡಿಯುತ್ತಿದ್ದರೆ ನಿರ್ಲಕ್ಷ್ಯದಿ೦ದ
ಮು೦ದೆ ಸಾಗಬೇಡಿ. ಅಲ್ಲಿಯೆ ನಿ೦ತು ಮರವನ್ನು ಕಡಿಯುವುದಕ್ಕೆ ಅನುಮತಿ ಇದೆಯೇ ??
ಇ೦ದು ಪ್ರಶ್ನಿಸಿ. ಇಲ್ಲದಿದ್ದ ಪಕ್ಷದಲ್ಲಿ ಕೃಷ್ಣ ಉಡುಪುಡಿ ಯವರನ್ನು ಸ೦ಪರ್ಕಿಸಿ.
ಕೃಷ್ಣ ಉಡುಪುಡಿ Tree Officer ---9880583109.

ಪುಸ್ತಕನಿಧಿ (೮)-ಕನ್ನಡ ಭಾಷಾ ಸಂಪದ ಎಂಬ ಪುಸ್ತಕ

ಕನ್ನಡ ಭಾಷಾ ಸಂಪದ ಎಂಬ ಪುಸ್ತಕವನ್ನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಿದೆ .
೯೦ ಪುಟಗಳ ಪುಟ್ಟ ಪುಸ್ತಕ ಇದು .
ಭಾಷೆಗಳು , ದ್ರಾವಿಡ ಭಾಷೆಗಳು , ಕನ್ನಡ ಕುರಿತಾದ ಎಷ್ಟೋ ಸಂಗತಿ ಇಲ್ಲಿದೆ.

ನಾನು ಗಮನಿಸಿದ ಕೆಲ ವಿಷಯಗಳು .

ದ್ರಾವಿಡರೂ ಹೊರಗಿನಿಂದ ಬಂದವರು!
ಕನ್ನಡದಲ್ಲಿ ಭೌಗೋಲಿಕ, ಸಾಮಾಜಿಕ ಎಂದು ಎಪ್ಪತ್ತು ಪ್ರಭೇದಗಳನ್ನು ಗುರುತಿಸಿದ್ದಾರೆ.

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ .. (ರಾಗ ಮೋಹನ - ಭಾಗ ನಾಲ್ಕು)

ಅಂತೂ ಮತ್ತೊಮ್ಮೆ ಮೋಹನದ ಬಗ್ಗೆ ನಾಲ್ಜು ಸಾಲು ಬರೆಯುವ ಹೊತ್ತು ಬಂದೇ ಬಂದಿತು. ಈ ಸಲ ಇನ್ನು ಕೆಲವು ಮೋಹಕ ಚಿತ್ರ ಗೀತೆಗಳನ್ನು ಕೇಳಿ, ಆಮೇಲೆ ಕೆಲವು ಇತರ ಪ್ರಕಾರಗಳನ್ನೂ ನೋಡೋಣ. ನಾನು ಮೊದಲೇ ಹೇಳಿದ ಹಾಗೆ, ಮೋಹನ ಆ ಕಾಲದ ಟಿ.ಜಿ.ಲಿಂಗಪ್ಪ ಅವರಿಂದ ಈ ಕಾಲದ ಗುರುಕಿರಣ್ ತನಕ ಎಲ್ಲರೂ ಕೈಯಾಡಿಸಿರುವ ರಾಗ. ಈಗ ಮೊದಲು ೬೦ರ ದಶಕದಲ್ಲಿ ಬಂದ ಚಿತ್ರ ಗೌರಿಯಿಂದಾಯ್ದ ಗೀತೆ. ಜಿ.ಕೆ.ವೆಂಕಟೇಶ್ ಅವರ ನಿರ್ದೇಶನದಲ್ಲಿ ಕುವೆಂಪು ಅವರ ಒಂದು ಭಾವಗೀತೆ, ಜಾನಕಿಯವರ ಧ್ವನಿಯಲ್ಲಿ ಎಷ್ಟು ಸುಂದರವಾಗಿ ಮೂಡಿಬಂದಿದೆ!

ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು

ಮೋಹನ ರಾಗ ಹಲವು ಭಾವನೆಗಳನ್ನು, ರಸಗಳನ್ನು ಉಂಟು ಮಾಡಬಲ್ಲದು. ಬಹುಶಃ ದುಃಖ,ಶೋಕರಸವನ್ನುಳಿದು, ಎಲ್ಲಾ ಭಾವನೆಗಳಿಗೂ ಈ ರಾಗವನ್ನು ಉಪಯೋಗಿಸಲಾಗಿದೆ ಎನ್ನಿಸುತ್ತೆ. ಆದರೂ, ಶೃಂಗಾರ, ವೀರ ರಸಗಳಿಗೆ, ಮಾದುರ್ಯ, ಶಾಂತ ಭಾವನೆಗಳಿಗೆ ಈ ರಾಗ ಹೇಳಿಸಿದ್ದೇ.

ಚಿತ್ರಗೀತೆಗಳಲ್ಲಿ, ಹಲವು ಬಾರಿ, ಒಂದು ರಾಗದಿಂದ ಆರಂಭಿಸಿ ಮತ್ತೆ ಬೇರೆ ಬೇರೆ ರಾಗಗಳಿಗೆ (ಅಥವಾ ಕೆಲವು ಬಾರಿ ಯಾವ ರಾಗವೆಂದೂ ತಿಳಿಯುವಂತಿರುವುದಿಲ್ಲ). ಈಗ ಕುವೆಂಪು ಅವರ ಇನ್ನೊಂದು ಗೀತೆ. ಮಾವನ ಮಗಳು ಚಿತ್ರದಿಂದ. ಚಲಪತಿ ರಾವ್ ಅವರ ಸಂಯೋಜನೆಯಲ್ಲಿ ಹಾಡಿರುವವರು ಪಿ.ಬಿ.ಶ್ರೀನಿವಾಸ್ ಮತ್ತು ಜಾನಕಿ. ಈ ಹಾಡಿನ ಕೆಲವು ಭಾಗಗಳು ಮೋಹನರಾಗದಲ್ಲಿವೆ. ಈಗ ಓದುಗರಿಗೆ (ಕೇಳುಗರಿಗೆ) ಒಂದು ಪ್ರಶ್ನೆ. ಯಾವ ಭಾಗ ಮೋಹನದಲ್ಲಿದೆ ಎಂದು ಗುರುತಿಸಬಲ್ಲಿರಾ?

ಮಗನೆಲ್ಲಿ ಬೇರೆ ಹೋದ...

ಆತ ಬರುವ ಗತ್ತು ನೋಡಿ
ಅವ ನಮ್ಮ ಮಗನಲ್ವೆ
ಮಲ್ಲಿಗೆ ಕಂಪು ಕಾಲ್ಗೆಜ್ಜೆ ನಾದ
ನಿಮ್ಮ ಪ್ರೀತಿಯ ಸೊಸೆಯದಲ್ವೆ?
ಆಡುವ ಮಕ್ಕಳ ನಡುವೆ
ಕೈಬೀಸಿದಾತ ಪುಟ್ಟನಲ್ವೆ?
ಅಳಬೇಡ ಮುದ್ದು ಮುನ್ನ
ಇಗೊ ಈಗ ಬಂದೆ ಚಿನ್ನ
ಹೇಳ್ರೀ ಮಗನೆಲ್ಲಿ ಬೇರೆ ಹೋದ?
ಎಲ್ಲಾ ಇರುವರಿಲ್ಲೇ ಅಲ್ವಾ?

ಜೀವ ಸಮುದ್ರ

ಹೇಶ ಮುಂಬೈಗೆ ಬಂದವನು ಜುಹೂ ಬೀಚಿಗೆ ಹೋಗಿ ಅಲ್ಲೆ ಕುಳಿತನೆಂದರೆ ಬಹಳ ಹೊತ್ತಿನವರೆಗೆ ಮೇಲೇಳುವುದೇ ಇಲ್ಲ. ದಡಕ್ಕೆ ಅಪ್ಪಳಿಸುವ ನೀಲ ಸಮುದ್ರದ ಅಲೆಗಳನ್ನು ನಿಟ್ಟಿಸುತ್ತಿರುತ್ತಾನೆ.

ರಾತ್ರಿಯ ರೋಡು

ಕಥೆ ಬರೆಯೋಕೆ ನನಗೆ ಬರೋದಿಲ್ಲ ಅಂತ ತಿಳಿದಿದ್ದೂ ಕಥೆ ಬರೆಯಲು ನಡೆಸಿರುವ ಪ್ರಯತ್ನ ಇದು. ಪ್ರಸಂಗಗಳನ್ನು ನನ್ನ ದೃಷ್ಟಿಯಲ್ಲೇ ನೋಡಿದಂತೆ ಬರೆದಿದ್ದೇನೆ. ನಿಜ ಜೀವನದಲ್ಲಿ ನಡೆದಿರಲೇಬೇಕೆಂದೇನಿಲ್ಲ.

ಸ್ನೇಹಿತನೊಂದಿಗೆ ಮಾತು ಮುಗಿಸಿ ನಾನು ಬೈಕು ಸ್ಟಾರ್ಟ್ ಮಾಡಿದ್ದೆ. ಅವ ನಮ್ಮೆದುರಿಗೆ ಬಂದ ಆಟೋ ನಿಲ್ಲಿಸಿ "ಬಿ ಟಿ ಎಂ ಲೇಔಟ್" ಎಂದು ಹೇಳಿ ಹತ್ತಿದ್ದ. "ಒನ್ನೆಂಡ್ ಹಾಫು ಸಾರ್" ಎಂದು ತಿಳಿಸಿ ಉತ್ತರ ಪಡೆದ ನಂತರವೇ ಆಟೋದವ ಆಟೋ ಹೊರಡಿಸಿದ್ದು.

ನಾನು ಬೈಕನ್ನು ವಿರುದ್ಧ ದಿಕ್ಕಿನಲ್ಲಿ ಮೇಯ್ನ್ ರೋಡಿಗೆ ತಿರುಗಿಸಿದಂತೆ ಆಟೋ ಅತ್ತ ದೂರವಾಗುತ್ತಿರುವುದು ಸೈಡ್ ಮಿರರ್ರಿನಲ್ಲಿ ಕಾಣಿಸುತ್ತಿತ್ತು. ರಾತ್ರಿ ಹನ್ನೊಂದೂವರೆಯಾದರೂ ಅಲ್ಲಿಲ್ಲಿ ಒಂದೆರಡು ಗಾಡಿಗಳು ಚಲಿಸಿದ್ವು. ಸ್ವಲ್ಪ ದೂರ ಹೋಗುತ್ತಲೆ ಟ್ರಾಫಿಕ್ ತೀರ ಇಲ್ಲವೇ ಇಲ್ಲ ಎಂಬಂತಾಯಿತು. ಬೆಂಗಳೂರಿನಲ್ಲಿ ಇಂತಹ ಭಾಗ್ಯ ರಾತ್ರಿಯ ಹೊತ್ತೇ. ಹೀಗಾಗಿ ನನ್ನ ಬೈಕಿನ acceleratorಗೆ ಧಾರಾಳತನದ ಸವಿ.

ಕರ್ನಾಟಕ್ ಲಾಬ್

ನನ್ನ ಗುರುಗಳ ಬಳಿ ಸ೦ಗೀತ ಪಾಠ ಕಲಿಯಲು ಒಬ್ಬ್ Netherlands ನಿ೦ದ ಬ೦ದಿದ್ದ.
ಅವನ web site ನೋಡಿ...ಸಿಕ್ಕಾ ಪಟ್ಟೆ ಪ್ರತಿಬಾವ೦ತ ಸ೦ಗೀತಗಾರ...ಅವರ ದೇಶದಲ್ಲಿ.
ಇಲ್ಲಿ ಬ೦ದು ನಮ್ಮ ಸ೦ಗೀತವೆ೦ದರೆ ಪ೦ಚ ಪ್ರಾಣ.
ಕದಲದೆ ನಾಲ್ಕು ತಿ೦ಗಳಲ್ಲಿ flute basic ಕಲಿತು ಊರಿಗೆ ಹೋಗಿದ್ದಾನೆ.
ಮತ್ತೆ ಬ೦ದು ಪೂರ್ತಿ ಕಲಿತ್ತೀನಿ ಅ೦ತ ಹೇಳಿದ್ದಾ.