ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸೈಬರ್‍ ಕೆಫೆಗಳಲ್ಲಿ ಕನ್ನಡದ ಅಗತ್ಯತೆ ಬಗ್ಗೆ ಅನಂತಮೂರ್ತಿಯವರ ಹೇಳಿಕೆ

ಗೆಳೆಯರೆ,

೧೮, ಆಗಸ್ಟ್, ೨೦೦೬ರ ವಿಜಯ್ ಟೈಂಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ, ಶ್ರೀಯುತ ಅನಂತಮೂರ್ತಿಯವರ ಸಂದರ್ಶನದಲ್ಲಿ, ಅವರು ಸೈಬರ್‍ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸಬೇಕಾದ ತುರ್ತು ಅಗತ್ಯದ ಬಗೆಗೆ ಮಾತನಾಡಿದ್ದಾರೆ. ಇದನ್ನು ಕನ್ನಡಸಾಹಿತ್ಯ.ಕಾಂ ನ ಸಂಪಾದಕೀಯ ಪುಟದಲ್ಲೂ ಉದ್ಧರಿಸಲಾಗಿದೆ.

ಕನ್ನಡಸಾಹಿತ್ಯ.ಕಾಂ ಹೊಸ ಆವೃತ್ತಿ ಹಾಗೂ ಹೊಸ ವಿಳಾಸ

ಸಂಪದಿಗರಿಗೆ ನಮಸ್ಕಾರ. ಕಳೆದ ಆಗಸ್ಟ್ ೬, ೨೦೦೬ರಂದು ಸಂಭ್ರಮದಿಂದ ಆರನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದ ಹೊಸ ಆವೃತ್ತಿಯು ಇದೀಗ ಬಿಡುಗಡೆಯಾಗಿದೆ.

ಸಪ್ತಗಿರಿ ಸಂಪದ (ಪೌರಾಣಿಕ ಕಥಾನಕ) ಸಂಚಿಕೆ-1

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್ವೆಂಕಟನಾಥಾಯ ಶ್ರೀನಿವಾಸಾಯತೇನಮಃ ||

ಸ್ರೀವಾದ ಮತ್ತು ಸಮಾಜ

ಇದೀಗ ನಮ್ಮ ಸಮಾಜ ಪುರುಷ ಪ್ರಧಾನ ಸಮಾಜವಾಗಿ ಇನ್ನೂ ಉಳಿದಿದೆಯೇ?  ಖಂಡಿತ ಇಲ್ಲ.  ಹಿಂದೊಂದು ಕಾಲವಿತ್ತು ಹೆಣ್ಣು ಮುಸುಕೆಳೆದುಕೊಂಡೇ ತಿರುಗುವ ಕಾಲ. ಈಗ ಹೆಣ್ಣು ಸಂಪೂರ್ಣ ಸ್ವಾತಂತ್ರ ಪಡೆದಿದ್ದಾಳೆ. ನಿರ್ಭಿಡೆಯಿಂದ, ಅಷ್ಟೇಕೆ  ಹಿಂದೆಂದಿಗಿಂತಲೂ  ಬಲು ಸ್ವಚ್ಛಂಧವಾಗಿ  ತೆರೆದುಕೊಂಡಿದ್ದಾಳೆ ಅಂಥ “ರಮ್ಯ” ಕಾಲವಿದಾಗಿದೆ.  ಹೌದು, ಜೀವನಾನಂದದ ಸ್ವರೂಪವೇ ಹೆಣ್ಣು. ಅವಳು ಎಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ಸಂಪ್ರೀತರಾಗಿರುತ್ತಾರೆ” ಎಂಬುದೀಗ ಕ್ಲೀಷೆಯಾಗಿದೆ.  ಇದೀಗ ಹೆಣ್ಣು ಎಲ್ಲಿ ದೇವತೆಯಂತೆ ಕಂಗೊಳಿಸತ್ತಾಳೋ ಅಲ್ಲಿ ಅವಳೇ ಪೂಜಿಸಲ್ಪಡುತ್ತಾಳೆ.  ಯುವ ಜನಾಂಗದ ಕನಸಿನ ಕನ್ಯೆಯೆ ಅವಳಾಗಿರುತ್ತಾಳೆ ಎಂಬುದು ಉತ್ಪ್ರೇಕ್ಷೆಯಾಗಲಾರದು.

ಸ್ತ್ರೀವಾದಿ ಏಕಾಗಬಾರದು?

ಇತ್ತೀಚೆ ದ ಹಿಂದೂ ಪತ್ರಿಕೆಯಲ್ಲಿ ಕಮಲಾ ದಾಸ್ ಜತೆ ಸಂದರ್ಶನ ಪ್ರಕಟವಾಗಿತ್ತು. ಅಲ್ಲಿ ತಮ್ಮ ಬರವಣಿಗೆ ಕುರಿತು ಮಾತನಾಡುತ್ತ ದಾಸ್ ತಾವು ಸ್ತ್ರೀವಾದಿ ಅಲ್ಲ ಎಂದು ಘೋಷಿಸಿದ್ದಾರೆ. ಅದನ್ನು ಓದಿ ನನಗೆ ಆಶ್ಚರ್ಯಕ್ಕಿಂತ ಹೆಚ್ಚಾಗಿ ಆಘಾತವಾಯಿತು. ಯಾಕೆಂದರೆ, ಮಲಯಾಳಂ ಹಾಗೂ ಇಂಗ್ಲೀಷನಲ್ಲಿ ಬರೆಯುವ ದಾಸ್ ಒಳ್ಳೆಯ ಕವಯಿತ್ರಿ ಹಾಗೂ ಕಥೆಗಾರ್ತಿ. ಅವರ ಪದ್ಯಗಳನ್ನು ಮೆಚ್ಚಿಕೊಂಡಿರುವ ನನಗೆ ಅವರು ಒಳ್ಳೆಯ ರಾಜಕೀಯ ಬರಹಗಾರ್ತಿ ಎನ್ನಿಸುತ್ತದೆ. ಮಹಿಳೆ ಅವರ ಕವನಗಳ ಕೇಂದ್ರ ಬಿಂದು. ಸ್ತ್ರೀಯ ಸಾಮಾಜಿಕ ಬದುಕಿನಲ್ಲಿ ಕಾಣುವ ವಿವಿಧ ಶೋಷಣೆ, ನೋವು ನಲಿವು, ಆಸೆಗಳು, ಪ್ರತಿಬಂಧಗಳ ಕುರಿತು ಸಾಮನ್ಯವಾಗಿ ಅವರ ಕವನಗಳು ದನಿಯೆತ್ತುತ್ತವೆ. ಅವರ ಕವಿತೆಗಳಲ್ಲಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಈ ಎಲ್ಲ ಸ್ತರಗಳಲ್ಲೂ ಮಹಿಳೆ ಬೇಡುವ ಚಿತ್ರ ಕಾಣುವುದಿಲ್ಲ. ಈ ಎಲ್ಲ ಕಡೆ ಮಹಿಳೆಗೆ ಆಗುವ ಅನ್ಯಾಯಗಳ ಪ್ರಸ್ತಾಪವಿದ್ದರೂ, ಮಹಿಳೆಯ ಹಕ್ಕುಗಳ ಬಗ್ಗೆ ಅಧಿಕಾರಯುತ demand ಇದೆ. ಮಹಿಳೆಯ ಕಾಮದ ಬಯಕೆಗಳ ಬಗ್ಗೆ ಕೂಡ ಈ ಒತ್ತಾಯ ಇದೆ. ಹೀಗೆ ಅವರ ಕವನಗಳು ಹಕ್ಕೊತ್ತಾಯ ಮಾಡುವ ಬಗೆ ತೀವ್ರವಾಗಿ ಓದುಗರನ್ನು ತಟ್ಟುತ್ತದೆ.

ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡದವರಿಗೆ ಮಾತ್ರ ...( ಉ.ಕ.ಕ-ಕೊನೆಯ ಕಂತು)

೧೯೨೧ ರಲ್ಲಿ ಬೇಂದ್ರೆಯವರು ಹೀಗೆ ಹೇಳಿದ್ದಾರೆ .
" ಈ ಅಪ್ರತಿಕೂಲ ಕಾಲದಲ್ಲಿಯೂ ನಮ್ಮ ಪುರಾಣ ಕವಿಯ ಕಾಲದ ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡ ಪ್ರಾಂತದಲ್ಲಿರುವ ಕೆಲವು ಜೀವಿಗಳಿಗೆ ಅಸಹ್ಯವಾಗಿತ್ತು. ಬೆಳಗಾಂವಿಗೆ ಹತ್ತಿದ ಮರಾ‍ಠಿಯ ಗ್ರಹಣವು ಈಗೀಗ ಬಿಡಹತ್ತಿದೆ . ಮೈಸೂರವರರಲ್ಲಿ ಈಗೀಗ ಏಕ ಕರ್ನಾಟಕ ಭಾವನೆಯು ಅರೆಮಿಂಚಹತ್ತಿದೆ. ಬಳ್ಳಾರಿಯವರು ಇದೇ ಎಲ್ಲಿಯೋ ಕಣ್ಣು ತಿಕ್ಕುತ್ತಿರುವರು. ಮಂಗಳೂರಿನಲ್ಲಿ ಇದೇ ಎಲ್ಲಿಯೋ ರಾಷ್ಟ್ರೀಯ ವಾಣಿಯು ಶಬ್ದ ಮಾಡುತ್ತಿರುವದು. ಹೈದರಾಬಾದಿನ ಕನ್ನಡಿಗರು ಮಿಸುಕಾಡುತ್ತಿದ್ದರೂ ಇನ್ನೂ ಅವರಿಗೆ ಕನ್ನಡ ಮಂತ್ರದ ಅರ್ಥವೇ ಹೊಳೆದಿಲ್ಲ . ಕಾರವಾರದ ಕನ್ನಡಿಗರು ಚೈತನ್ಯದ ಚಿನ್ಹವನ್ನು ತೋರಿಸಹತ್ತಿದ್ದರೂ ಇನ್ನೂ ಅವರಿಗೆ ಕನ್ನಡ ದೇವಿಯ ಇಡೀ ಮೂರ್ತಿಯು ಕಂಡೇ ಇಲ್ಲ . ಆದರೆ ಧಾರವಾಡದವರಿಗೆ ಮಾತ್ರ ಅಸ್ಪಷ್ಟವಾಗಿಯೇ ಇರಲೊಲ್ಲದೇಕೆ - ಮೊದಲಿನಿಂದ ಕನ್ನಡಮಂತ್ರವೂ , ಕರ್ನಾಟಕ ದೇವಿಯ ಮೂರ್ತಿಯೂ ಕಂಡಿತ್ತು. "

ಕನ್ನಡ ಪತ್ರದಲ್ಲಿ ಕನ್ನಡ ಬರೆಯಬೇಕು...ಮರಾಠಿಯಲ್ಲಿ ಸಹಿ ಮಾಡುವದು ಅವಶ್ಯವಿಲ್ಲ ( ಉ.ಕ.ಕ-೧೧)

ಡೆಪ್ಯುಟಿ ಚನ್ನಬಸಪ್ಪನವರ ಸೂಕ್ಷ್ಮ ದೃಷ್ಟಿಯಿಂದ ಯಾವ ಸಣ್ಣ ವಿಷಯವೂ ಮರೆಯಾಗಲಿಲ್ಲ . ಶಾಲಾ ಮಾಸ್ತರರು ಸಹಿ ಮಾಡುವದು , ಪತ್ರ ಬರೆಯುವದು - ಮೊದಲಾದ ಎಲ್ಲ ಅಂಶಗಳನ್ನು ಗಮನಿಸಿ ಪರಿಪತ್ರಗಳ ಮೂಲಕ ಎಚ್ಚರಿಕೆಗಳ ಮೂಲಕ ಅವರಿಗೆ ಶಿಕ್ಷಣವನ್ನಿತ್ತರು.