ಒಂದು ನಿಮಿಷ ನಕ್ಕು ಬಿಡೋಣ!
ಜೀವದ ಗೆಳೆಯ
ಗೊತ್ತೇ ಯಾರೆಂದು ಜೀವಕ್ಕೆ ಜೀವ
ಕೊಡುವ ಗೆಳೆಯ?
ಗುರುತಿಸುವನು ಕಣ್ಣಲ್ಲಿ ಮೂಡುವ
ಮೊದಲ ಕಣ್ಣ ಹನಿಯ!
ಕೆಳ ಬೀಳದಂತೆ ಅಲ್ಲಿಯೇ ತಡೆಯುವ
ಎರಡನೆಯ ಹನಿಯ!
ಮೂರನೆಯ ಹನಿಯ ಸದ್ದಿಲ್ಲದಂತೆ
ಕಕ್ಕುಲತೆಯಿಂದ ಒರೆಸುವ
ನಾಲ್ಕನೆಯ ಹನಿಯು ಕಣ್ಣಂಚಿನಲಿ
ಧುಮುಕುತಿರಲು ಹೇಳುವ
`ಬಡ್ಡಿಮಗನೆ! ಸಾಕು ಮಾಡೋ
ಓವರ್ ಆಕ್ಟಿಂಗ್ ಮಾಡಬೇಡ!`
------------
ಅಲ್ಪ ಸಂಖ್ಯಾತರು!
ಪ್ರಿಯೆ!ಸಾಕು ಒಂದೇ ಮಗು
ಎನ್ನುತಿರುವೆಯಾ?
ಗೊತ್ತೇ ನಿನಗೆ ತಮಿಳರ ಹಾಗೂ
ಕೇರಳಿಗರ ದಿವ್ಯಸೂತ್ರ?
ನಾವಿಬ್ಬರು, ಸಾಕು ನಮಗಿಬ್ಬರು!
ಅದಕ್ಕಿಂತ ಹೆಚ್ಚು ಹುಟ್ಟಿದರೆ
ಕಳಿಸು ಬೆಂಗಳೂರಿಗೆನ್ನುತ್ತಿರುವರು
ಈಗಾಗಲೇ ಅಗಿದ್ದೇವೆ ನಾವು
ಅಲ್ಪಸಂಖ್ಯಾತರು!
ಪರಮಾವಧಿ
ಗೆಳೆಯ!
ಗುಟ್ಟಿನ ಪರಮಾವಧಿ ನಿನಗೆ ಗೊತ್ತೆ?
ಖಾಲಿ ವಿಸಿಟಿಂಗ್ ಕಾರ್ಡ್ ಇಟ್ಟುಕೊಳ್ಳುವುದು
ತಿಕ್ಕಲುತನದ ಪರಮಾವಧಿ ಗೊತ್ತೆ?
ಬಿಳಿ ಕಾಗದವನ್ನು ಜೆರಾಕ್ಸ್ ಮಾಡುವುದು
ಮುಠ್ಠಾಳತನದ ಪರಮಾವದಿ ಗೊತ್ತೆ?
ಗಾಜಿನ ಬಾಗಿಲ ಬೀಗರಂದ್ರದಿ ಇಣುಕುವುದು
ನೀರಿನ ಕೊರತೆಯ ಪರಮಾವಧಿ ಗೊತ್ತೆ?
ಹಸುವು ಹಾಲಿನ ಪೌಡರನ್ನು ಕೊಡುವುದು
ಕೆಲಸವಿಲ್ಲದಿರುವ ಪರಮಾವಧಿತನ ಗೊತ್ತೆ?
ನೀನಿದನ್ನು ಇನ್ನೂ ಓದುತ್ತಿರುವುದು!
Comments
ಉ: ಒಂದು ನಿಮಿಷ ನಕ್ಕು ಬಿಡೋಣ!